ಮಾಸ್ಕೊ (ಎಎಫ್‌ಪಿ): `ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಮಾಜಿ ಗುತ್ತಿಗೆದಾರ, ತಂತ್ರಜ್ಞ ಎಡ್ವರ್ಡ್ ಸ್ನೊಡೆನ್ ಅವರು ರಷ್ಯಾದಲ್ಲಿ ಆಶ್ರಯ ಪಡೆಯುವ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ' ಎಂದು ವಕೀಲರಾದ ಅನಾತೊಲಿ ಕುಚೆರೇನಾ ತಿಳಿಸಿದ್ದಾರೆ.

`ಆಶ್ರಯ ಪಡೆಯುವ ಸಂಬಂಧ ಸ್ನೊಡೆನ್ ನನ್ನೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೇ ಸತತ ಸಂಪರ್ಕದಲ್ಲಿದ್ದಾರೆ. ನಿರಾಶ್ರಿತರ ಸ್ಥಾನಮಾನ, ರಾಜಕೀಯ ಆಶ್ರಯ ಮತ್ತು ತಾತ್ಕಾಲಿಕ ಆಶ್ರಯಕ್ಕೆ ಸಂಬಂಧಿಸಿದಂತೆ ಸಲಹೆ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ತೀರ್ಮಾನಕ್ಕೆ ಬರುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಅಮೆರಿಕದ ಬೇಹುಗಾರಿಕೆ ಸಂಸ್ಥೆ, ಭಾರತ, ಚೀನಾ ಸೇರಿದಂತೆ ಇತರ ರಾಷ್ಟ್ರಗಳ ರಹಸ್ಯ ಮಾಹಿತಿ ಕದ್ದಿರುವ ವಿಷಯವನ್ನು ಸ್ನೊಡೆನ್ ಬಹಿರಂಗಪಡಿಸಿದ್ದರು.

ಜೂನ್ 23ರಂದು ಹಾಂಕಾಂಗ್‌ನಿಂದ ರಷ್ಯಾಕ್ಕೆ ಪ್ರಯಾಣ ಬೆಳೆಸಿದ ಸ್ನೊಡೆನ್, ಇನ್ನೂ ಮಾಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ `ಟ್ರಾನ್ಸಿಟ್ ಏರಿಯಾ'ದಲ್ಲೇ ಉಳಿದಿದ್ದಾರೆ.

ಸ್ನೊಡೆನ್‌ಗೆ ಆಶ್ರಯ ಕಲ್ಪಿಸಲು ಈಗಾಗಲೇ ವೆನಿಜುವೆಲಾ, ಬೊಲಿವಿಯಾ ಮತ್ತು ನಿಕಾರಗುವಾ ಆಹ್ವಾನ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.