ಬೀಜಿಂಗ್ (ಐಎಎನ್ಎಸ್): ವಿದ್ಯಾರ್ಥಿಗಳಲ್ಲಿ ಸ್ವಯಂ ಸೇವಾ ಮನೋಭಾವ ಉತ್ತೇಜಿಸಲು ಚೀನಾದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ `ನೈತಿಕ ಬ್ಯಾಂಕ್~ ಆರಂಭಿಸಲಾಗಿದೆ. ಇದೀಗ ಇಲ್ಲಿ ವಿದ್ಯಾರ್ಥಿಗಳು ಖಾತೆಯನ್ನೂ ತೆರೆದಿದ್ದಾರೆ.

ಹುನಾನ್ ಪ್ರಾಂತ್ಯದ ದ ಚೆಂಗ್ನಾನ್ ಕಾಲೇಜ್ ಆಫ್ ಚಾಂಗ್ಶಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಈ ವಿನೂತನ ಯೋಜನೆ ಜಾರಿಗೊಳಿಸಿದ್ದು, ಉತ್ತಮ ಕೆಲಸಕ್ಕಾಗಿ `ನಾಣ್ಯ~ಗಳನ್ನು ಖಾತೆಯಲ್ಲಿ ನಮೂದಿಸಲಾಗುತ್ತದೆ.

ಒಂದು ಗಂಟೆ ಸ್ವಯಂ ಸೇವೆ ಸಲ್ಲಿಸಿದ ವಿದ್ಯಾರ್ಥಿಗೆ ಮೂರು `ನೈತಿಕ ನಾಣ್ಯ~ಗಳನ್ನು ನೀಡಲಾಗುತ್ತದೆ; ರಕ್ತದಾನ ಮಾಡಿದರೆ `ಆರು ನಾಣ್ಯ~ಗಳನ್ನು ಗಳಿಸಬಹುದು ಎಂದು ಬ್ಯಾಂಕ್ ಸಂಸ್ಥಾಪಕ ಪೆಂಗ್ಕ್ಸಿಯಾ ಹೇಳಿದ್ದಾರೆ.

ಶಿಷ್ಯವೇತನಕ್ಕೆ ಅರ್ಜಿ ಹಾಕಲು ಮತ್ತು ರಿಯಾಯಿತಿ ಪಡೆಯಲು ಕನಿಷ್ಠ 10 ನಾಣ್ಯಗಳನ್ನು ಪಡೆಯುವುದು ಕಡ್ಡಾಯವಾಗ್ದ್ದಿದು ಹೆಚ್ಚು ನಾಣ್ಯ ಸಂಪಾದಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಕಾಲೇಜು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.