ಡಮಾಸ್ಕಸ್ (ಐಎಎನ್‌ಎಸ್): ಪೂರ್ವ ಸಿರಿಯಾದ ಅತಿ ದೊಡ್ಡ ತೈಲ ಪ್ರದೇಶವನ್ನು ‘ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಗ್ರೇಟರ್ ಸಿರಿಯಾ’ (ಐಎಸ್ಐಎಸ್) ಗುರುವಾರ ತನ್ನ ವಶಕ್ಕೆ ಪಡೆದಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ತಿಳಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ತೈಲ ಲಭ್ಯವಾಗುವ ಅಲ್ವೊಮರ್ ಪ್ರದೇಶವನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ ಎಂದು ಕೆನಡಾ ಮೂಲದ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ.

ಐಎಸ್ಐಎಸ್ ಮತ್ತು ನುಸ್ರಾ ಸಂಘಟನೆಯು ಈ ಪ್ರದೇಶವನ್ನು ತನ್ನ ವಶಕ್ಕೆ ಪಡೆಯಲು ಹೋರಾಟ ನಡೆಸಿದ್ದವು. ಅಂತಿಮವಾಗಿ ಐಎಸ್‌ಐಎಸ್ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಾಂತ್ಯದ ಬಹುಭಾಗದಲ್ಲಿ ತೈಲ ದೊರೆಯುತ್ತಿದ್ದು, ಇದು ಸರ್ಕಾರದ ನಿಯಂತ್ರಣದಲ್ಲಿದೆ. ದಿನಕ್ಕೆ 75 ಸಾವಿರ ಬ್ಯಾರಲ್ ತೈಲ ಇಲ್ಲಿ ಉತ್ಪಾದನೆಯಾಗುತ್ತದೆ.

ಕಳೆದ ನವೆಂಬರ್‌ನಲ್ಲಿ ಶಿಯಾ ಬಂಡುಕೋರರು ಈ ಪ್ರದೇಶವನ್ನು ಆಕ್ರಮಿಸಿದ್ದರು. ಇತ್ತೀಚಿನ ವರದಿ ಪ್ರಕಾರ ಐಎಸ್‌ಐಎಸ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಜಿಹಾದಿ ಸಂಘಟನೆ. ಸಣ್ಣ ರಾಷ್ಟ್ರಗಳಿಗೆ ಸರಿ ಸಮಾನವಾದ ಬಜೆಟ್‌ನ್ನು ಹೊಂದಿದೆ ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.

ಈ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಕತಾರ್, ಸೌದಿ ಅರೆಬಿಯಾ ಮತ್ತು ಕುವೈತ್‌ನ ಶ್ರೀಮಂತ ವ್ಯಕ್ತಿಗಳಿಂದ ಆರ್ಥಿಕ ನೆರವು ಪಡೆದಿದೆ. ಸುಮಾರು ₨ 12 ಸಾವಿರ ಕೋಟಿಗಿಂತಲೂ ಹೆಚ್ಚು ಸಂಪನ್ಮೂಲ ಹೊಂದಿದೆ ಎಂದು ವರದಿ ತಿಳಿಸಿದೆ. ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡುವುದು ಐಎಸ್‌ಐಎಸ್‌ನ ಪ್ರಮುಖ ಗುರಿಯಾಗಿದೆ. ಇರಾಕ್ ಪ್ರಧಾನಿ ನೂರಿ ಅಲ್ ಮಲಿಕಿ ಮತ್ತು ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರನ್ನು ಗುರಿಯಾಗಿ ಇರಿಸಿಕೊಂಡಿದೆ.

ಬಂಡುಕೋರರ ಯತ್ನ ವಿಫಲ
ಬಾಗ್ದಾದ್ (ಎಪಿ): ಅತಿದೊಡ್ಡ ತೈಲ ಸಂಸ್ಕರಣ ಘಟಕವನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಸುನ್ನಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 30 ಉಗ್ರರು ಮೃತಪಟ್ಟಿದ್ದಾರೆ. ಇರಾಕ್‌ನ ಭಯೋತ್ಪಾದಕ ನಿಗ್ರಹ ದಳದ ವಕ್ತಾರ ಸಾಬಾ ಅಲ್-ನೂಮಾನ್ ಈ ಮಾಹಿತಿ ನೀಡಿದ್ದಾರೆ.

ಉತ್ತರ ಬಾಗ್ದಾದ್‌ನ ಬೈಜಿ ತೈಲ ಸಂಸ್ಕರಣ ಘಟಕವನ್ನು ಕಾವಲು ಕಾಯುತ್ತಿದ್ದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಉಗ್ರರ ಎಂಟು ವಾಹನಗಳ ಮೇಲೆ ಪ್ರತಿದಾಳಿ ನಡೆಸಲಾಗಿದೆ. ಕಳೆದ ಎರಡು ವಾರಗಳಿಂದ ಉಗ್ರರು ಈ ತೈಲ ಸಂಸ್ಕರಣ ಘಟಕವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.