ತೈಪೆ(ಎಪಿಎಫ್): ಜಪಾನಿನ ಫುಕುಶಿಮಾದ ಪರಮಾಣು ಘಟಕದಲ್ಲಿ ಅವಘಡ ಸಂಭವಿಸಿ ಮೂರು ವರ್ಷ ಕಳೆದ ಹಿನ್ನೆಲೆಯಲ್ಲಿ, ಪರಮಾಣು ಘಟಕ ಸ್ಥಾಪನೆ ವಿರೋಧಿಸಿ ಶನಿವಾರ ತೈವಾನ್ನಲ್ಲಿ ರ್್ಯಾಲಿ ಏರ್ಪಡಿಸಲಾಗಿತ್ತು.

ತೈಪೆಯಲ್ಲಿ ಆಯೋಜಿಸಿದ್ದ ಈ ರ್್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು, ನ್ಯೂಕ್ಲಿಯರ್ ಬೇಡ, ಫುಕುಶಿಮಾ ಘಟಕ ಬೇಡ, ‘ನ್ಲೂಕ್ಲಿಯರ್ನಿಂದ ತೈವಾನ್ ಉಳಿಸಿ’ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ನೂತನವಾಗಿ ನಿರ್ಮಿಸಲು ಉದ್ದೇಶಿಸುವ ಪರಮಾಣು ಘಟಕವನ್ನು ಸರ್ಕಾರ ಶೀಘ್ರವೇ ನಿಲ್ಲಿಸಬೇಕು ಹಾಗೂ ಪರಮಾಣು ಘಟಕದಿಂದ ಹೊರಬರುವ ತ್ಯಾಜ್ಯವನ್ನು ಕಡಲಾಚೆ ವಿಸರ್ಜನೆ ಮಾಡಬೇಕು ಎಂದು ರಾಷ್ಟ್ರೀಯ ಪರಮಾಣು ನಿರ್ಮೂಲನಾ ವೇದಿಕೆ ವಕ್ತಾರ ಲಿಯೊ ಹೈಮಿನ್ ಒತ್ತಾಯಿಸಿದ್ದಾರೆ.

2011ರ ಮಾರ್ಚ್ 11ರಂದು ಸಂಭವಿಸಿದ ಭಾರಿ ಭೂಕಂಪನದಿಂದ ಫುಕುಶಿಮಾ ಅಣುಸ್ಥಾವರ ಸೋರಿಕೆಯಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.