ವಾಷಿಂಗ್ಟನ್ (ಐಎಎನ್ಎಸ್):  ಈ ಆಧುನಿಕ ಯುಗದಲ್ಲಿ ಸಾಮಾಜಿಕ ಸಂಪರ್ಕ ತಾಣಗಳನ್ನು ಮೆಚ್ಚದವರೇ ಇಲ್ಲ. ವಿಶ್ವದಾದ್ಯಂತ 90 ಕೋಟಿ ಬಳಕೆದಾರರನ್ನು ಹೊಂದಿರುವ ಹೆಗ್ಗಳಿಕೆ ಇರುವ ಫೇಸ್ಬುಕ್, ಬಳಕೆದಾರರಲ್ಲಿ ಸಂತೃಪ್ತಭಾವನೆ ಹುಟ್ಟಿಸುತ್ತದೆ ಎಂಬ ಅಂಶವೊಂದನ್ನು ಇತ್ತೀಚಿನ ಸಂಶೋಧನೆ ತಿಳಿಸಿದೆ.

ಜಾರ್ಜಿಯಾ ವಿಶ್ವವಿದ್ಯಾಲಯದ ಬ್ರಿಟಾನಿ ಜೆಂಟೆಲ್, ಕೇತ್ ಕ್ಯಾಂಬೆಲ್ ಹಾಗೂ ಸ್ಯಾಂಡಿಯಾಗೊ ವಿಶ್ವವಿದ್ಯಾಲಯದ ಜೀನ್ ಟ್ವೆಂಜ್ ಸಾಮಾಜಿಕ ಸಂಪರ್ಕತಾಣಗಳಲ್ಲಿ ಬಳಕೆದಾರರು ನಿಜವಾಗಿಯೂ ಏನನ್ನೂ ಇಷ್ಟಪಡುತ್ತಾರೆ ಎಂದು ಅರಿಯಲು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಬಳಕೆದಾರರು ಈ ತಾಣವನ್ನು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು, ವೈಯಕ್ತಿಕ ಅಭಿಪ್ರಾಯಗಳನ್ನು ಬಿಂಬಿಸಲು ಹೆಚ್ಚಾಗಿ ಬಳಸುತ್ತಾರೆ ಎನ್ನಲಾಗಿದೆ.

18ರಿಂದ 22 ವಯೋಮಾನದ 151 ಕಾಲೇಜು ವಿದ್ಯಾರ್ಥಿಗಳನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಮೈ ಸ್ಪೇಸ್, ಫೇಸ್ಬುಕ್ ಅಥವಾ ಗೂಗಲ್ ಮ್ಯಾಪ್ ಖಾತೆಗಳಲ್ಲಿ ಯಾವುದನ್ನಾದರೂ ಪರಿಷ್ಕರಿಸಲು ಹೇಳಲಾಗಿತ್ತು. ಫೇಸ್ಬುಕ್ ಖಾತೆ ಪರಿಷ್ಕರಿಸಿದವರಲ್ಲಿ ಆತ್ಮಾಭಿಮಾನ ಹೆಚ್ಚಿದ್ದು ಕಂಡುಬಂತು. ಪ್ರತಿದಿನ 52.6 ಕೋಟಿ ಬಳಕೆದಾರರು ಫೇಸ್ಬುಕ್ಗೆ ಭೇಟಿ ನೀಡುತ್ತಿದ್ದು, ತಮ್ಮ ಆತ್ಮವಿಶ್ವಾಸ ಹೆಚ್ಚಿಸಕೊಳ್ಳಲು ಈ ಹವ್ಯಾಸಕ್ಕೆ ಅಂಟಿಕೊಂಡಿರಬಹುದು ಎಂದು ಈ ಅಧ್ಯಯನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.