ನ್ಯೂಯಾರ್ಕ್ (ಪಿಟಿಐ): ಭವಿಷ್ಯದಲ್ಲಿ ನೀವು ಯಾವ ಸ್ಥಳದಲ್ಲಿ ಇರುವಿರಿ ಎಂದು ನಿಖರವಾಗಿ ತಿಳಿಸುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ಯಾವ ದಿನ ಮತ್ತು ಯಾವ ಸಮಯ ಎಲ್ಲಿ ಇರಲಿದ್ದೀರಿ ಎನ್ನುವುದನ್ನು ಮುಂಚಿತವಾಗಿ ತಿಳಿಸುವ ಸಾಫ್ಟವೇರ್ ಅನ್ನು ಮೈಕ್ರೊಸಾಫ್ಟ್‌ನ ಜಾನ್ ಕ್ರುಮ್ ಮತ್ತು ಆ್ಯಡಂ ಸಡಿಲೆಕ್ ಅಭಿವೃದ್ಧಿಪಡಿಸಿದ್ದಾರೆ.

15 ಕೋಟಿ ಸ್ಥಳಗಳ ಬಗ್ಗೆ ಈ ತಂತ್ರಜ್ಞಾನದಿಂದ ಮಾಹಿತಿ ಕಲೆ ಹಾಕಿರುವ ಅವರು, ಭವಿಷ್ಯದಲ್ಲಿ ಮನುಷ್ಯನ ಚಲನವಲನದ ಕುರಿತು ನಿಖರ ಮಾಹಿತಿ ನೀಡಬಲ್ಲದು. ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಈ ತಂತ್ರಜ್ಞಾನ ನೆರವಿಗೆ ಬರಲಿದೆ. ರೋಗ ಹರಡುವಿಕೆ, ಟ್ರಾಫಿಕ್ ಸಮಸ್ಯೆ ಮತ್ತು ವಿದ್ಯುತ್ ಬೇಡಿಕೆ ಕುರಿತು ಮುನ್ಸೂಚನೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.