ಹನೊಯ್ (ಪಿಟಿಐ): ದ್ವಿಪಕ್ಷೀಯ ಸಂಬಂಧ, ರಕ್ಷಣೆ, ವ್ಯಾಪಾರ ಮತ್ತಿತರ ವಿಷಯಗಳಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ವಿಯೆಟ್ನಾಂ ಶುಕ್ರವಾರ ಮಹತ್ವದ ಮಾತುಕತೆ ನಡೆಸಿದವು.
ಮೂರು ದಿನಗಳ ವಿಯೆಟ್ನಾಂ ಭೇಟಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ, ಹನೊಯ್ನಲ್ಲಿ ವಿಯೆಟ್ನಾಂ ವಿದೇಶಾಂಗ ಸಚಿವ ಫಾಂ ಬಿನ್ ಮಿನ್ ಜತೆ ಸಮಾಲೋಚನೆ ನಡೆಸಿದರು.
ಹೂಡಿಕೆ, ಶಿಕ್ಷಣ ಮತ್ತಿತರ ವಿಷಯಗಳಲ್ಲಿ ಸಹಕಾರ ಬಲವರ್ಧನೆಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.