ನ್ಯೂಯಾರ್ಕ್ (ಐಎಎನ್ಎಸ್): ಒಂದು ಕ್ಷಣ ಯೋಚಿಸಿ ಭೂಮಿ ಮಂಗಳನಂತೆ ಕೆಂಪು ಗ್ರಹವಾಗಿದ್ದರೆ...? ಇದು ಸಾಧ್ಯವೇ...?

ಹೌದು, ಪೃಥ್ವಿ ಕೂಡ ಅಂಗಾರಕನಂತೆ ಕೆಂಪಾಗಿರುವ ಚಿತ್ರಗಳನ್ನು ಸೆರೆಹಿಡಿದಿರುವುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿದೆ. ಹಲವು ಭಾಗಗಳನ್ನು ವಿವಿಧ ಭಂಗಿಗಳಲ್ಲಿ ಸೆರೆಹಿಡಿಯಲಾಗಿದ್ದು, ಇದು ಇಳೆ ನಸುಗೆಂಪು ಬಣ್ಣವಿರುವಂತೆ ಪ್ರತಿಬಿಂಬಿಸಿದೆ.

ಭೂಮಿಯ ಮೇಲ್ಮೈ ಚಿತ್ರಗಳನ್ನು ನಾಸಾದ ‘ಮರ್ಕ್ಯುರಿ ಸರ್ಫೇಸ್ ಸ್ಪೇಸ್ ಎನ್ವಿರಾನ್ಮೆಂಟ್ ಜಿಯೊಕೆಮಿಸ್ಟ್ರಿ ಆ್ಯಂಡ್ ರ್ಯಾಂಗಿಂಗ್– (ಮೆಸಿಂಜರ್)’ ಹೆಸರಿನ ಬಾಹ್ಯಾಕಾಶ ನೌಕೆಯ 11 ಕ್ಯಾಮೆರಾಗಳು ವಿವಿಧ ಕೋನಗಳಲ್ಲಿ ಸೆರೆಹಿಡಿದಿವೆ. ಈ ಚಿತ್ರವು ದಕ್ಷಿಣ ಅಮೆರಿಕ, ಉತ್ತರ ಅಮೆರಿಕ ಮತ್ತು ಆಫ್ರಿಕಾದ ಕೆಲವು ಫಲವತ್ತಾದ ಭೂ ಭಾಗಗಳಾಗಿವೆ.

ನಾಸಾ ಈ ಚಿತ್ರದ ಬಣ್ಣವನ್ನು ಕೊಂಚ ಮಾರ್ಪಡಿಸಿ ನಸುಗೆಂಪು ಬಣ್ಣ ಗಾಢವಾಗಿ ಎದ್ದು ಕಾಣುವಂತೆ ಮಾಡಿದೆ. ಈ ಚಿತ್ರವು ಈ ಹಿಂದೆ ‘ಅಪೋಲೊ’ ಗಗನಯಾತ್ರಿಗಳು ಸೆರೆಹಿಡಿದಿದ್ದ ಭೂಮಿಯ ಮೇಲಿನ ನೀಲಿ ಬಣ್ಣದ ಅಮೃತಶಿಲೆಗಳ ಚಿತ್ರವನ್ನು ಹೋಲುತ್ತದೆ ಎಂದೂ ನಾಸಾದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.