ಲಂಡನ್ (ಪಿಟಿಐ): ಹಿಂದೊಮ್ಮೆ ಮಲ ಹೊರುತ್ತಿದ್ದ ರಾಜಸ್ತಾನದ ಮಹಿಳೆಯೊಬ್ಬರು ಈ ವಾರ ಲಂಡನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ಸಿದ್ಧತೆ ನಡೆಸಿದ್ದಾರೆ.

ರಾಜಸ್ತಾನದ ಬ್ರಿಟಿಷ್ ಅಲ್ವಾರ್ ನಗರದ ಹಝೌರಿಗೇಟ್ ಹರಿಜನ ಕಾಲೊನಿಯ ಉಷಾ ಚೌಮಾರ್ ಅವರಿಗೆ ಈ ಗೌರವ ದೊರೆತಿದೆ. ಅಸೋಸಿಯೇಷನ್ ಆಫ್ ಸೌತ್ ಏಷ್ಯಾ ಸ್ಟಡೀಸ್ (ಬಿಎಎಸ್‌ಎಎಸ್) ಇಲ್ಲಿ ಆಯೋಜಿಸಿರುವ ವಾರ್ಷಿಕ ಸಮ್ಮೇಳನದಲ್ಲಿ ‘ಭಾರತದಲ್ಲಿ ನೈರ್ಮಲ್ಯ ಮತ್ತು ಮಹಿಳಾ ಹಕ್ಕುಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನದಲ್ಲಿ ಅವರು ಬ್ರಿಟನ್‌ನ ಉನ್ನತ ಶೈಕ್ಷಣಿಕ ಸಂಸ್ಥೆಗಳು, ನೀತಿ ನಿರೂಪಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

ಕೆಲ ವರ್ಷಗಳ ಹಿಂದೆ ಮಲಹೊರುತ್ತಿದ್ದ ಉಷಾ ಅವರಿಗೆ ಪುನರ್ವಸತಿ ಕಲ್ಪಿಸುವವರೆಗೂ ಸಮಾಜ ಅವರನ್ನು ಅಸ್ಪೃಶ್ಯರಂತೆ ನೋಡುತ್ತಿತ್ತು. ಆದರೆ ಈಗ ಉಷಾ ಮಲಹೊರುವಂತಹ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆ ಹೆಮ್ಮೆ ವ್ಯಕ್ತಪಡಿಸಿದೆ.

ಕೇವಲ ಹತ್ತು ವರ್ಷ ವಯಸ್ಸಿನಲ್ಲೇ ವಿವಾಹ ಬಂಧನಕ್ಕೆ ಸಿಲುಕಿದ್ದ ಉಷಾ, ಜೀವನನಿರ್ವಹಣೆಗಾಗಿ ಮಲಹೊರುವ ಕೆಲಸ ಮಾಡುತ್ತಿದ್ದರು. ಇವರೂ ಸೇರಿದಂತೆ ಇಂತಹ ನೂರಾರು ಮಹಿಳೆಯರಿಗೆ ಉಪ್ಪಿನಕಾಯಿ, ಶ್ಯಾವಿಗೆ ಮತ್ತು ಹಪ್ಪಳ ತಯಾರಿಕೆ ಕುರಿತು ತರಬೇತಿ ನೀಡಿ ಸುಲಭ್ ಇಂಟರ್ ನ್ಯಾಷನಲ್ ಪುನರ್ವಸತಿ ಕಲ್ಪಿಸಿದೆ.

ಬಿಂದೇಶ್ವರ್ ಪಾಠಕ್ ಅವರ ಸುಲಭ್ ಇಂಟರ್‌ನ್ಯಾಷನಲ್ ಭಾರತದಾದ್ಯಂತ ಮಲಹೊರುವ ಪದ್ಧತಿ ಜಾಗೃತಿ ಕೆಲಸ ಮಾಡುತ್ತಿದೆ. ಈ ಪದ್ಧತಿಯಲ್ಲಿ ಸಿಲುಕಿದವರನ್ನು ಮುಖ್ಯವಾಹಿನಿಗೆ ತರುತ್ತಿದೆ.

ಉಪನ್ಯಾಸ ನೀಡಲು ಬ್ರಿಟನ್‌ಗೆ ತೆರಳುತ್ತಿರುವುದು ಸಂತಸ ನೀಡಿದೆ. ಈ ಸಮ್ಮೇಳನದಲ್ಲಿ ಭಾಗ ವಹಿಸುವ ನನ್ನ ದೊಡ್ಡ ಕನಸು ಈಗ ನನಸಾಗಿದೆ.

ಉಷಾ ಚೌಮಾರ್ ಮಲಹೊರುವ ಪದ್ಧತಿ ಜಾಗೃತಿ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.