ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷರಫ್ ಚಿಕಿತ್ಸೆ: ವಿದೇಶಕ್ಕೆ ಕರೆದೊಯ್ಯದಂತೆ ಮನವಿ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ದೇಶ­ದ್ರೋಹದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಂತೆ ನಿರ್ದೇ­ಶನ ನೀಡಲು ಕೋರಿ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.

ಹರೂನ್‌ ರಶೀದ್‌ ಎಂಬುವವರು ಈ ಮನವಿ ಸಲ್ಲಿಸಿದ್ದಾರೆ. ಇವರು, ೨೦೦೭ರಲ್ಲಿ ಲಾಲ್‌ ಮಸೀದಿ ಮೇಲಿನ ಸೇನಾ ಕಾರ್ಯಾಚರಣೆ ವೇಳೆ ಮೃತ­ಪಟ್ಟ ಅಬ್ದುಲ್‌ ರಶೀದ್‌ ಎಂಬುವವರ ಪುತ್ರ.

‘ಮುಷರಫ್‌ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯದಂತೆ ನೋಡಿ­ಕೊಳ್ಳಲು ಹಾಗೂ ಅವರಿಗೆ ಪಾಕಿಸ್ತಾನ­ದಲ್ಲಿ ಅತ್ಯುತ್ತಮವಾದ ವೈದ್ಯಕೀಯ ಸೌಲಭ್ಯ ಒದಗಿಸಲು ಒಳಾಡಳಿತ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು’ ಎಂದು ಅವರು ನ್ಯಾಯಾಲಯ­ವನ್ನು ಕೋರಿ­ಕೊಂಡಿದ್ದಾರೆ.

ದೇಶದ್ರೋಹ ಪ್ರಕರಣದ ವಿಚಾರಣೆ­ಗೆಂದು ವಿಶೇಷ ನ್ಯಾಯಾಲಯಕ್ಕೆ ಗುರು­ವಾರ  ತೆರಳುತ್ತಿದ್ದಾಗ ಮಾರ್ಗ­ಮಧ್ಯೆ ಹೃದಯಾಘಾತಕ್ಕೆ ಒಳಗಾಗಿದ್ದ ಮುಷ­ರಫ್‌ ಅವರನ್ನು ರಾವಲ್ಪಿಂಡಿಯ ಸೇನಾ  ಆಸ್ಪತ್ರೆಗೆ ಸೇರಿಸಲಾಗಿದೆ.   

ವೈದ್ಯಕೀಯ ಚಿಕಿತ್ಸೆಗಾಗಿ ಮುಷರಫ್‌ ಅವರನ್ನು ವಿದೇಶಕ್ಕೆ ಕಳಿಸುವ ಸಾಧ್ಯ­ತೆಯ ಬಗ್ಗೆ ದಟ್ಟ ವದಂತಿ ಇದೆ. ಹಾಗಾಗಿ ಹರೂನ್‌ ಅವರು ಈ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT