ಲಂಡನ್ (ಪಿಟಿಐ): `ದೇಶವನ್ನು ರಕ್ಷಿಸಬೇಕೆಂದು ಪಾಕಿಸ್ತಾನದ ಜನರು ಮತ್ತೆ ಸೇನೆಯ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಅಲ್ಲಿ ಸೇನಾ ಕ್ಷಿಪ್ರ ಕ್ರಾಂತಿಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ~ ಎಂದು ಪಾಕ್‌ನ ಮಾಜಿ ಸೇನಾ ಆಡಳಿತಗಾರ ಪರ್ವೇಜ್ ಮುಷರಫ್ ಭವಿಷ್ಯ ನುಡಿದಿದ್ದಾರೆ.

ಪಾಕಿಸ್ತಾನದ ಸಂವಿಧಾನವು ಪರಮ ಪವಿತ್ರ ಎಂದು ಹೇಳಿರುವ ಅವರು, `ನಾವು ದೇಶದ ಸಂವಿಧಾನವನ್ನು ಎತ್ತಿ ಹಿಡಿಯಬೇಕೋ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕೋ?~ ಎಂದು ಪ್ರಶ್ನಿಸಿದ್ದಾರೆ.
ಮುಷರಫ್ ಬಂಧನಕ್ಕೆ ಪಾಕ್‌ನ ಬೇಹುಗಾರಿಕಾ ಸಂಸ್ಥೆ (ಎಫ್‌ಐಎ) ಇಂಟರ್‌ಪೋಲ್‌ಗೆ ಎರಡನೇ ಬಾರಿ ಜ್ಞಾಪಿಸಿರುವ ಬೆನ್ನಲ್ಲಿಯೇ ಮಾಜಿ ಸೇನಾಡಳಿತಗಾರ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ.

2007ರಲ್ಲಿ ನಡೆದ ಬೆನಜಿರ್ ಭುಟ್ಟೊ ಹತ್ಯೆ ಪ್ರಕರಣದಲ್ಲಿ ಮುಷರಫ್ ಅವರನ್ನು `ಘೋಷಿತ ಅಪರಾಧಿ~ ಎಂದು ಅದು ಹಣೆಪಟ್ಟಿ ನೀಡಿದೆ.

`ನಾನು ಪ್ರಾಣಾಪಾಯವನ್ನು ಲೆಕ್ಕಿಸದೇ ಪಾಕಿಸ್ತಾನಕ್ಕೆ ಮರಳುತ್ತೇನೆ~ ಎಂದು ಪುನರುಚ್ಚರಿಸಿರುವ ಮುಷರಫ್ ಅವರು ಸ್ವದೇಶಕ್ಕೆ ಮರಳುವ ನಿರ್ದಿಷ್ಟ ದಿನವನ್ನು ಸ್ಪಷ್ಟಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.