ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿಲ್ಲದೆ 300 ಯಾಕ್‌ ಸಾವು

Last Updated 12 ಮೇ 2019, 19:30 IST
ಅಕ್ಷರ ಗಾತ್ರ

ಗ್ಯಾಂಗ್ಟಕ್: ಉತ್ತರ ಸಿಕ್ಕಿಂ ಭಾಗದಲ್ಲಿ ಕಳೆದೊಂದು ವರ್ಷದಿಂದ ಆಗುತ್ತಿರುವ ಭಾರಿ ಹಿಮಪಾತದಿಂದಾಗಿ ಮೇವಿಲ್ಲದೇ ಅಂದಾಜು 300 ಚಮರೀಮೃಗ(ಯಾಕ್‌)ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2018 ಡಿಸೆಂಬರ್‌ನಿಂದ ಮುಕುತಾಂಗ್ ಮತ್ತು ಯಮ್‌ತಾಂಗ್‌ ಪ್ರದೇಶದಲ್ಲಿ ಮೇವಿಲ್ಲದೆ ಯಾಕ್‌ಗಳು ಮೃಪಟ್ಟಿರುವುದನ್ನುಸಿಕ್ಕಿಂ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್‌ ಯಾದವ್‌ ದೃಢಪಡಿಸಿದ್ದಾರೆ. ಸ್ಥಳೀಯರು 500ಕ್ಕೂ ಅಧಿಕ ಯಾಕ್‌ಗಳುಮೃತಪಟ್ಟಿವೆ ಎನ್ನುತ್ತಿದ್ದಾರೆ. ಪ್ರಸ್ತುತ ಮುಕುತಾಂಗ್‌ನಲ್ಲಿ 250 ಯಾಕ್‌ ಕಳೇಬರ ಹಾಗೂ ಯಮ್‌ತಾಂಗ್‌ನಲ್ಲಿ 50 ಯಾಕ್‌ ಕಳೇಬರ ಪತ್ತೆಯಾಗಿವೆ ಎಂದು ಯಾದವ್‌ ತಿಳಿಸಿದ್ದಾರೆ.

ನಿರಂತರವಾದ ಹಿಮಪಾತದಿಂದ ಹುಲ್ಲು ಬೆಳೆಯಲೇ ಇಲ್ಲ.ಹಲವು ತಿಂಗಳುಗಳಿಂದ ಯಾಕ್‌ಗಳಿಗೆಸೂಕ್ತ ಮೇವು ದೊರೆತಿರಲಿಲ್ಲ.ಪಶು ಸಂಗೋಪನಾ ಇಲಾಖೆಯ ವೈದ್ಯಕೀಯ ತಂಡದ ಅಧಿಕಾರಿಗಳು ಮುಕುತಾಂಗ್‌ಗೆ ಭೇಟಿ ನೀಡಿದ್ದು, ಜತೆಗೆ ಬದುಕುಳಿದಿರುವ ಯಾಕ್‌ಗಳಿಗೆ ಮೇವು ಸರಬರಾಜು ಮಾಡಲಾಗಿದೆ. ಜಿಲ್ಲಾಡಳಿತ ಸಿದ್ಧಪಡಿಸುವ ವರದಿ ಆಧರಿಸಿಯಾಕ್‌ ಸಾಕಿದ್ದ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT