ಟ್ರಿಪೋಲಿ (ಪಿಟಿಐ): ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿಯನ್ನು ಬಂಡುಕೋರರು ಗುರುವಾರ ಸಿರ್ಟೆ ಪಟ್ಟಣದಲ್ಲಿ ನಡೆದ ಭೀಕರ ಹೋರಾಟದಲ್ಲಿ ಗುಂಡಿಟ್ಟು ಕೊಲೆಗೈದಿದ್ದಾರೆ.

ಲಿಬಿಯಾವನ್ನು ನಾಲ್ಕು ದಶಕಗಳ ಕಾಲ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದ್ದ ಗಡ್ಡಾಫಿಯನ್ನು ಸುರಂಗದಲ್ಲಿ ಅವಿತಿದ್ದಾಗ ಹೊರಬರುವಂತೆ ಮಾಡಲಾಯಿತು. ಕದನದಲ್ಲಿ ತೀವ್ರವಾಗಿ ಗಾಯಗೊಂಡ ಗಡ್ಡಾಫಿ ನಂತರ ಮೃತನಾದ ಎಂದು ವರದಿಗಳು ಹೇಳಿವೆ.

ಗಾಯಗೊಂಡಿದ್ದ ಗಡ್ಡಾಫಿಯನ್ನು ಬೇರೆ ಕಡೆಗೆ ಸಾಗಿಸುತ್ತಿದ್ದಾಗಲೇ ಆತ ಮೃತನಾದ ಎಂದು ವರದಿಗಳು ಹೇಳಿವೆ.
ಗಡ್ಡಾಫಿಯ ಪುತ್ರ ಮುತಾಸ್ಸಿಮ್ ಕೂಡಾ ಸಿರ್ಟೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.