ಉತ್ತರ ಕೊರಿಯಾದಿಂದ ಬೆದರಿಕೆ
ಪಿಯೋಂಗ್ಯಾಂಗ್ (ಐಎಎನ್ಎಸ್): ದಕ್ಷಿಣ ಕೊರಿಯಾದ ವಿರುದ್ಧ ಉತ್ತರ ಕೊರಿಯಾ `ವಿಶೇಷ ಕಾರ್ಯಾಚರಣೆ~ಯ ಬೆದರಿಕೆ ಒಡ್ಡುತ್ತಿದೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರ ಸಚಿವಾಲಯದ ಹೇಳಿದೆ.

ವಿಶೇಷ ಕಾರ್ಯ ಪಡೆಯಾದ ಕೊರಿಯಾನ್ ಪೀಪಲ್ಸ್ ಆರ್ಮಿ (ಕೆಪಿಎ) ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಯಾಚಿನ್ ಸೇನಾ ಕಡಿತಕ್ಕೆ ವಿರೋಧ
ಇಸ್ಲಾಮಾಬಾದ್ (ಐಎಎನ್ಎಸ್): ಹಿಮಾಚ್ಛಾದಿತ ಸಿಯಾಚಿನ್ ಪ್ರದೇಶದಿಂದ ಏಕ ಪಕ್ಷೀಯವಾಗಿ ಪಾಕಿಸ್ತಾನ ಸೇನೆಯನ್ನು ತೆರವುಗೊಳಿಸಬಾರದು ಎಂದು ಪಾಕಿಸ್ತಾನದ ತೆಹ್ರಿಕ್ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ವಿರೋಧಿಸಿದ್ದಾರೆ.

ಏಪ್ರಿಲ್ 18ರಂದು ಪಾಕ್ ಸೇನಾ ಮುಖ್ಯಸ್ಥ ಕಯಾನಿ ಅವರು ಸಿಯಾಚಿನ ಪ್ರದೇಶದಿಂದ ಸೇನೆಯನ್ನು ಕಡಿತಗೊಳಿಸುವ ವಿಷಯವಾಗಿ ಪಾಕಿಸ್ತಾನ ಭಾರತದ ಜತೆ ಮಾತುಕತೆ ನಡೆಸಬೇಕು ಎಂದು ಹೇಳಿಕೆ ನೀಡಿದ್ದರು.

ತಂದೆಯನ್ನುಗುಂಡಿಕ್ಕಿ ಕೊಂದ ಬಾಲಕ
ರಿಯಾದ್ (ಎಎಫ್ಪಿ): ಪ್ಲೇ ಸ್ಟೇಷನ್ ತೆಗೆದುಕೊಡಲು ನಿರಾಕರಿಸಿದ ಕಾರಣ ಕೋಪಗೊಂಡ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ತಂದೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸೌದಿ ಅರೇಬಿಯಾದಲ್ಲಿ ಸೋಮವಾರ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಮಾರು ನಾಲ್ಕು ವರ್ಷದ ಬಾಲಕನೊಬ್ಬ ತನ್ನ ತಂದೆ ಪ್ಲೇ ಸ್ಟೇಷನ್ ಕೊಡಿಸಲು ನಿರಾಕರಿಸಿದ ಕಾರಣ ಕೋಪಗೊಂಡಿದ್ದ. ತಂದೆ ಮನೆಗೆ ಬರುತ್ತಿದ್ದಂತೆಯೆ ತಂದೆಯ ಪಿಸ್ತೂಲಿನಿಂದ ಗುಂಡಿಕ್ಕಿ ಕೊಂದಿದ್ದಾನೆ ಎಂದು ದಕ್ಷಿಣದ ಜಿಜಾನ್ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಶೃಂಗ ಸಭೆ
ಷಿಕಾಗೊ (ಎಪಿ): ಇಲ್ಲಿ ಈ ವಾರದಲ್ಲಿ ನಡೆಯುವ ಮೂರು ದಿನಗಳ ಶೃಂಗ ಸಭೆಯಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಪಾಲ್ಗೊಳ್ಳಲಿದ್ದಾರೆ. ಉತ್ತರ ಅಮೆರಿಕದಲ್ಲಿ ನಡೆಯುವ ಮೊದಲ ಸಮ್ಮೇಳನ ಇದಾಗಿದೆ.

ಈ ಸಭೆಯಲ್ಲಿ ರಷ್ಯಾದ ಮಾಜಿ ಮುಖಂಡ ಮಿಖಾಯೆಲ್ ಗೊರ್ಬಚೆವ್, ದಲೈ ಲಾಮ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.