ಶಿಕ್ಷಣ ಸಚಿವಾಲಯದ ಮುಂಭಾಗದಲ್ಲಿ ಕಾರಿನಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡು ಈ ದುರಂತ ಸಂಭವಿಸಿತು ಎಂದು ಮೊಗಡಿಶು ಆಂಬುಲೆನ್ಸ್ ಸೇವೆಯ ಮುಖ್ಯಸ್ಥ ಅಲಿ ಮ್ಯೂಸ್ ತಿಳಿಸಿದ್ದಾರೆ.
ವಾಹನ ಸಚಿವಾಲಯದ ಮುಂಭಾಗಕ್ಕೆ ಬಂದು ನಿಂತ ಮರುಘಳಿಗೆಯಲ್ಲೇ ಈ ಸ್ಫೋಟ ಸಂಭವಿಸಿತು ಎಂದು ಪೊಲೀಸ್ ಅಧಿಕಾರಿ ಅಲಿ ಹುಸೇನ್ ನುಡಿದರು.
ಅಲ್ ಖೈದಾ ಜೊತೆಗೆ ಸಂಪರ್ಕ ಹೊಂದಿರುವ ಉಗ್ರಗಾಮೀ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತಿರುವುದಾಗಿ ಗುಂಪಿನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ.