ವಾಷಿಂಗ್ಟನ್ (ಪಿಟಿಐ): ಹೃದಯಾಘಾತವನ್ನು ತಡೆಯಬಲ್ಲ ಕೃತಕ ಲೋಳೆ ಮೀನನ್ನು(ಜೆಲ್ಲಿಫಿಶ್) ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದು ಭವಿಷ್ಯದಲ್ಲಿ ಜೈವಿಕ `ಪೇಸ್‌ಮೇಕರ್~ ಸಂಶೋಧನೆಗೆ ನೆರವಾಗಬಹುದು ಎಂದು ಹೇಳಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾ ತಾಂತ್ರಿಕ ಸಂಸ್ಥೆ ಅಭಿವೃದ್ಧಿಪಡಿಸಿರುವ `ಮೆಡುಸೊಯ್ಡ~ ಹೆಸರಿನ ಈ ಮೀನು ಮಾನವನ ಹೃದಯದ ಸ್ನಾಯುಗಳಂತೆಯೇ ಕೆಲಸ ಮಾಡುತ್ತದೆ.

ಹೃದ್ರೋಗಿಗಳಿಗೆ ಅಳವಡಿಸುವ ಪೇಸ್‌ಮೇಕರ್ ಆರರಿಂದ ಹತ್ತು ವರ್ಷ ಮಾತ್ರ ಬಾಳಿಕೆ ಬರುತ್ತದೆ. ಒಂದು ವೇಳೆ ವಿಜ್ಞಾನಿಗಳು ಲೋಳೆಮೀನಿನ ನೆರವಿನಿಂದ ಜೈವಿಕ `ಪೇಸ್‌ಮೇಕರ್~ ಅಭಿವೃದ್ಧಿಪಡಿಸಲು ಯಶಸ್ವಿಯಾದಲ್ಲಿ ದೀರ್ಘಕಾಲ ಬಾಳಿಕೆ ಬರುವ ಜೈವಿಕ ಯಂತ್ರವೊಂದು ಹೃದ್ರೋಗಿಗಳಿಗೆ ದೊರೆತಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.