ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಾವರಣ

ADVERTISEMENT

ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಆತ್ಮವಂಚನೆ,ಕರ್ತವ್ಯಲೋಪ, ಸ್ವಜನಪಕ್ಷಪಾತ, ....ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ ಅವುಗಳಿಂದ ಯಾವುದೇ ಹಿನ್ನಡೆ ಅನುಭವಿಸದೆ ದಶಕಗಳ ಕಾಲ ವರ್ಚಸ್ಸನ್ನು ಉಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಅವರಂತಹ ರಾಜಕಾರಣಿ ಆಗಬೇಕಾಗುತ್ತದೆ.
Last Updated 29 ನವೆಂಬರ್ 2019, 3:08 IST
ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?

`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.
Last Updated 2 ಅಕ್ಟೋಬರ್ 2019, 4:42 IST
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?

ನಾರಾಯಣ ಗುರು ತೋರಿದ ಸುಧಾರಣೆಯ ದಾರಿ

ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
Last Updated 13 ಸೆಪ್ಟೆಂಬರ್ 2019, 3:41 IST
fallback

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ

ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.
Last Updated 21 ಆಗಸ್ಟ್ 2019, 2:49 IST
ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ

ಕಾವೇರಿಯಿಂದ ಕೃಷ್ಣೆ ಕಲಿಯಬೇಕಾದ ಪಾಠ

1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯನ್ನು ಕರ್ನಾಟಕದ ಜನತೆ ಎದುರುಗೊಂಡದು ಕಪ್ಪುಬಾವುಟ ಮತ್ತು ‘ಗೋ ಬ್ಯಾಕ್’ಘೋಷಣೆಗಳೊಂದಿಗೆ. ಇದಕ್ಕೆ ತದ್ವಿರುದ್ಧವಾಗಿ ತಮಿಳುನಾಡು ನಡೆದುಕೊಂಡಿತ್ತು. ನ್ಯಾಯಮೂರ್ತಿಗಳು ಅಲ್ಲಿಗೆ ಹೋದಾಗ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಖುದ್ದಾಗಿ ಬಂದು ಸ್ವಾಗತಿಸಿದ್ದರು.
Last Updated 16 ಜೂನ್ 2018, 9:26 IST
fallback

ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಾಗಿದೆ

‘ಯೆ ಯಡಿಯೂರಪ್ಪಕಾ ಕ್ಯಾ ಗೋಟಾಲಾ ಹೈ ಯಾರ್?’...... ಆಪ್‌ಕಾ ಕರ್ನಾಟಕ್ ಬಿಹಾರ್‌ಕೋ ಬಿ ಪೀಚೆ ಚೋಡ್ ದಿಯಾ..... ಯೇ ಯಡಿಯೂರಪ್ಪ ಕ್ಯಾ ಅನ್‌ಪಡ್ ಹೈ, ಸಬ್‌ಕುಚ್ ಇತ್ನಾ ನಂಗಾನಾಚ್ ಕರ್ ರಹಾ ಹೈ?... ವೋ ಬಾರ್‌ಬಾರ್ ರೋತಾ ಕ್ಯೋಂ ಹೈ ಯಾರ್?
Last Updated 16 ಜೂನ್ 2018, 9:26 IST
fallback

ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ

ಜೈನ್ ಹವಾಲ ಪ್ರಕರಣದಲ್ಲಿ ಡೈರಿಯಲ್ಲಿ ತಮ್ಮ ಹೆಸರನ್ನು ಹೋಲುವ ಅಕ್ಷರಗಳು ಇದ್ದ ಕಾರಣಕ್ಕೆ ಎಲ್.ಕೆ.ಅಡ್ವಾಣಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಇಂದಿನ ಬಿಜೆಪಿ ನಾಯಕರು ಮರೆತೇ ಬಿಟ್ಟಿದ್ದಾರೆ. ಭಾರತೀಯ ಜನತಾಪಕ್ಷದ್ದು ಎಂತಹ ನೈತಿಕ ಅಧಃಪತನ
Last Updated 16 ಜೂನ್ 2018, 9:26 IST
fallback
ADVERTISEMENT

ಸಿವಿಸಿ ಎಂಬ ಹಲ್ಲಿಲ್ಲದ ಸಂಸ್ಥೆ...!

ಸಿವಿಸಿ ಎನ್ನುವುದು ‘ಸಾರ್ವಜನಿಕ ಕ್ಷೇತ್ರದಲ್ಲಿರುವ ಉದ್ಯಮಗಳು ಮತ್ತು ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕೇಳಿಬರುವ ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪಗಳ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ನೀಡುವ ಸ್ವತಂತ್ರ ಸಂಸ್ಥೆ’ ಅಷ್ಟೇ.ತನಗೆ ಬಂದ ದೂರುಗಳ ಬಗ್ಗೆ ವಿಚಾರಣೆಯನ್ನಷ್ಟೇ ನಡೆಸಲು ಸಾಧ್ಯ ಇರುವ ಸಿವಿಸಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ.
Last Updated 16 ಜೂನ್ 2018, 9:26 IST
fallback

ದಾರಿ ತಪ್ಪಿದ ಜಾತಿ ಗಣತಿ ಎಂಬ ವ್ಯರ್ಥ ಕಸರತ್ತು

1872ರಲ್ಲಿಯೇ ಪ್ರಾರಂಭವಾದ ಜನಗಣತಿ ಬ್ರಿಟಿಷರ ಒಡೆದು ಆಳುವ ನೀತಿಯ ಭಾಗವಾಗಿತ್ತೆಂದು ಆರೋಪಿಸುವವರಿದ್ದಾರೆ. ಆದರೆ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ವಿವರ ಒದಗಿಸಬೇಕಾಗಿ ಬಂದಾಗೆಲ್ಲ ಅವಲಂಬಿಸುವುದು ಬ್ರಿಟಿಷರ ಕಾಲದ ಜನಗಣತಿಯನ್ನೇ.
Last Updated 16 ಜೂನ್ 2018, 9:26 IST
fallback

ಭ್ರಷ್ಟರನ್ನು ಸಾಮೂಹಿಕವಾಗಿ ಬಹಿಷ್ಕರಿಸಿ

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗಿರುವ ‘ವಿಶೇಷ ರಕ್ಷಣೆ’ ಇಲ್ಲವೇ ‘ವಿಶೇಷ ಅಧಿಕಾರ’ ಇಲ್ಲದೆ ಇದ್ದರೂ, ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಸಂವಿಧಾನದಲ್ಲಿಯೇ ಸೇರಿಲ್ಲದೆ ಇದ್ದರೂ ಪತ್ರಕರ್ತರು ಅಪಾಯಕ್ಕೆ ಎದೆಕೊಟ್ಟು ಭ್ರಷ್ಟರ ವಿರುದ್ಧ ಲೇಖನಿಯನ್ನು ಖಡ್ಗದಂತೆ ಝಳಪಿಸುತ್ತಾ ಬಂದವರು.
Last Updated 16 ಜೂನ್ 2018, 9:26 IST
fallback
ADVERTISEMENT