ನಮ್ಮ ಉದ್ದೇಶಗಳು ಸರಿ ಇರಬಹುದು, ಅದರಲ್ಲಿ ನಾವು ಪ್ರಾಮಾಣಿಕರೂ ಆಗಿರಬಹುದು; ಆದರೆ, ಅವುಗಳ ಅನುಷ್ಠಾನದಿಂದ ಆಗುವ ಪರಿಣಾಮಗಳ ಕಡೆಗೆ ಗಮನ ಇಲ್ಲದೇ ಇದ್ದರೆ ನಮಗೆ ಅಷ್ಟೇ ಏಟಾಗುವುದಿಲ್ಲ. ಉದ್ದೇಶಕ್ಕೂ ಏಟು ಬೀಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಕಪಕ್ಷೀಯ ತೀರ್ಮಾನಗಳು ಮತ್ತು ಅದರಿಂದ ಆಗುತ್ತಿರುವ ಪರಿಣಾಮಗಳು ಈಗ ಇದೇ ಕಥೆಯನ್ನು ಹೇಳುತ್ತಿವೆ.

ಅವರಿಗೆ ಗೊತ್ತಿದೆ ಇದು ತಾವು ಮುಖ್ಯಮಂತ್ರಿ ಗಾದಿಯಲ್ಲಿ ಇರುವ ಕೊನೆಯ ಅವಕಾಶ ಎಂದು. ಅದನ್ನು ಅವರು ಹೇಳಿಯೂ ಬಿಟ್ಟಿದ್ದಾರೆ. ಕೊನೆಯ ಅವಕಾಶದಲ್ಲಿ ಏನಾದರೂ ಮಹತ್ತರವಾದುದನ್ನು ಮಾಡಬೇಕು ಎಂದೂ ಅವರಿಗೆ ತೀವ್ರವಾಗಿ ಅನಿಸುತ್ತಿರಬಹುದು. ಅದಕ್ಕೆ ಅವರು ಉದ್ದಕ್ಕೂ ಅನುಭವಿಸಿದ ಸಂಕಟಗಳು, ಅವಮಾನಗಳು, ಅವರು ಹುಟ್ಟಿ ಬೆಳೆದ ಸಾಮಾಜಿಕ ಪರಿಸರ ಎಲ್ಲವೂ ಕಾರಣವಾಗಿರಬಹುದು.

ಒಂದು ಸಾರಿ ಅಧಿಕಾರದಲ್ಲಿ ಕುಳಿತುಕೊಂಡಾಗ ಜನರಿಗೆ ತಾನು ನೆನಪಿನಲ್ಲಿ ಉಳಿಯುವಂತೆ ಏನಾದರೂ ಮಾಡಬೇಕು ಎಂಬ ಕಳಕಳಿಯೂ ಅವರಲ್ಲಿ ಇರಬಹುದು. ಆದರೆ, ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಮತ್ತು ಅದರ ಪರಿಣಾಮಗಳು ಏನಾಗಬಹುದು ಎಂಬುದರ ತಿಳಿವಳಿಕೆ ಇಲ್ಲದೇ ಇದ್ದರೆ ಈಗ ಆದಂತೆಯೇ ಆಗುತ್ತದೆ. ಅಂತಿಮವಾಗಿ ಅವರು ಮಾಡಬೇಕು ಎಂದು ಅಂದುಕೊಂಡುದನ್ನು ಮಾಡಲು ಆಗುವುದಿಲ್ಲ. ಆಗ ಸೋಲು ಮತ್ತು ಹತಾಶೆ ಕಾಡಲು ತೊಡಗುತ್ತದೆ.

ಎಲ್ಲ ರಾಜಕಾರಣಿಗಳು ‘ಪಕ್ಷಪಾತ’ದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ. ಆ ಮೂಲಕವೇ ಅವರು ಒಂದು ಮತಬ್ಯಾಂಕ್ ಸೃಷ್ಟಿ ಮಾಡಿಕೊಳ್ಳಲು ಹುನ್ನಾರ ಹಾಕುತ್ತಾರೆ. ಎಲ್ಲರಿಗೂ ಒಳ್ಳೆಯದು ಮಾಡುತ್ತೇವೆ ಎಂಬ ಕವಚದ ಒಳಗೆ ಯಾರಿಗೋ ಕೆಲವರಿಗೆ ಹೆಚ್ಚು ಒಳ್ಳೆಯದು ಮಾಡಲು ಹೊರಡುವುದು ಅವರ ತಂತ್ರಗಾರಿಕೆ. ಅದರಿಂದ ಮತ ಬ್ಯಾಂಕ್ ಏಕತ್ರೀಕರಣಗೊಳ್ಳುತ್ತದೆ ಎಂಬುದು ಅವರ ನಂಬಿಕೆ.

ಕರ್ನಾಟಕದಲ್ಲಿ ಇದನ್ನು ಆರಂಭ ಮಾಡಿದವರು ದೇವರಾಜ ಅರಸು. 1972 ರಿಂದ 77 ಮತ್ತು 78ರಿಂದ 80ರವರೆಗೆ ಅವರು ಮುಖ್ಯಮಂತ್ರಿ ಆಗಿದ್ದರು. ಬಲಿಷ್ಠ ಲಿಂಗಾಯತ ಸಮುದಾಯದ ಕೈಯಿಂದ ಅವರು ಅಧಿಕಾರ ಕಿತ್ತುಕೊಂಡಿದ್ದರು. ಆ ಸಮುದಾಯ 16 ವರ್ಷಗಳ ಕಾಲ ನಿರಂತರವಾಗಿ ಏಕೀಕೃತ ಕರ್ನಾಟಕ ರಾಜ್ಯವನ್ನು ಆಳಿತ್ತು. ಅರಸು ಬೇರೆ ದಾರಿ ತುಳಿಯಬೇಕಿತ್ತು. ಅವರು ಸ್ವತಃ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.

ಅದಕ್ಕಾಗಿಯೇ ಅವರು ಸರ್ಕಾರದಲ್ಲಿ ಪ್ರಶ್ನಾತೀತ ನಾಯಕರಾಗಿದ್ದರು. ಅವರ ಅಧಿಕಾರದ ಅವಧಿ ಈಗಲೂ ನೆನಪು ಉಳಿದಿರುವುದಕ್ಕೆ ಮುಖ್ಯವಾಗಿ ಎರಡು ಕಾರಣ: ಒಂದು, ಭೂ ಸುಧಾರಣೆ. ಎರಡು, ಹಿಂದುಳಿದ ವರ್ಗಗಳಿಗೆ ಸಿಕ್ಕ ಮೀಸಲಾತಿ. ಎರಡೂ ಕ್ರಮಗಳು ಬದುಕು ಕಟ್ಟುವ ದಾರಿಗಳಾಗಿದ್ದುವು. ಆಗ ನೇಮಕಗೊಂಡ ಹಿಂದುಳಿದ ವರ್ಗಗಳ ನೌಕರರು ಈಗ ನಿವೃತ್ತಿಯ ಅಂಚಿನಲ್ಲಿ ಇದ್ದಾರೆ. ಅಂದರೆ ಒಂದು ತಲೆಮಾರು ಅರಸು ಅವರಿಗೆ ಆಜೀವ ಕೃತಜ್ಞವಾಗಿದೆ.

ಸಿದ್ದರಾಮಯ್ಯ ಅವರೇನು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅರಸು ಅವರ ಅನುಯಾಯಿ ಆಗಿದ್ದವರಲ್ಲ. ಹಾಗೆ ನೋಡಿದರೆ ಅವರು ಎದುರು ಪಾಳೆಯದಲ್ಲಿಯೇ ಇದ್ದವರು. ಆದರೆ, ಅವರ ತಲೆಯಲ್ಲಿ ಯಾರೋ ವಂದಿಮಾಗಧರು ‘ನೀವೂ ಅರಸು ಆಗಬೇಕು’ ಎಂದು ಹುಳು ಬಿಟ್ಟಂತೆ ಕಾಣುತ್ತದೆ. ಅದರಲ್ಲಿಯೂ ಒಳ್ಳೆಯ ಉದ್ದೇಶವೇ ಇರಬಹುದು. ಆದರೆ, ಒಬ್ಬ ನಾಯಕ ಹುಟ್ಟಿ ಬರುವುದಕ್ಕೆ, ಅವರ ನಿರ್ಣಯಗಳು ಕಾಲದ ಪರೀಕ್ಷೆಗೆ ಒಳಪಟ್ಟೂ ಉಳಿಯುವುದಕ್ಕೆ, ಒಂದು ಸಂದರ್ಭ ಎಂದು ಇರುತ್ತದೆ.

ಬಹುಶಃ ಅದು ಕುದಿಯುವಿಕೆ, ಮಥನ. ಮಥನದ ನಂತರ ಬರುವ ಅಮೃತವನ್ನು ಇನ್ನಾರೋ ಕುಡಿಯುತ್ತ ಆರಾಮವಾಗಿ ಇದ್ದರೆ ಮಥನದಲ್ಲಿ ಹೊರ ಬಂದ ಹಾಲಾಹಲವನ್ನು ಕುಡಿಯಲು ಇನ್ನಾರೋ ಸಿದ್ಧರಿರಬೇಕಾಗುತ್ತದೆ. ಅರಸು ಅವರು ಅಧಿಕಾರದಲ್ಲಿ ಇದ್ದಷ್ಟು ಕಾಲ ಇಂಥ ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಅನುಭವಿಸಿದ ಕಷ್ಟ ನಿಷ್ಠುರಗಳು ಈಗ ಇತಿಹಾಸದಲ್ಲಿ ದಾಖಲಾಗಿವೆ. ಆದರೆ, ಅವರು ಆಗ ತೆಗೆದುಕೊಂಡ ನಿರ್ಣಯಗಳು ಕಾಲದ ನಿಕಷದಲ್ಲಿ ಗೆದ್ದು ಉಳಿದುಕೊಂಡಿವೆ.

ಅದಕ್ಕೆ, ಬಲಿಷ್ಠ ಅರಸು ಅವರ ಹಿಂದೆ ಇಂದಿರಾ ಗಾಂಧಿಯವರಂಥ ಪ್ರಶ್ನಾತೀತ ನಾಯಕಿಯೂ ನಿಂತಿದ್ದರು. ಇಂದಿರಾ ಅವರಿಗೆ ಅಖಂಡ ಜನಬೆಂಬಲವಿತ್ತು. ಜನರು ಅವರನ್ನು ಹುಚ್ಚರಂತೆ ಅನುಸರಿಸುತ್ತಿದ್ದರು. ಹೀಗಾಗಿ ಅರಸು ಅವರು ತಮ್ಮ ತೀರ್ಮಾನಗಳನ್ನು ಎಂಥ ವಿರೋಧದ ನಡುವೆಯೂ ಉಳಿಸಿಕೊಳ್ಳಲು ಯಶಸ್ವಿಯಾದರು. ಇಂದಿರಾ ಅವರ ಬೆಂಬಲ ಇರುವ ತನಕ ಅವರಿಗೆ ಅಧಿಕಾರ ನಷ್ಟದ ಭಯವೂ ಇರಲಿಲ್ಲ.

ಆದರೆ, ಅವರು ಒಂದು ಸಾರಿ ಇಂದಿರಾ ಅವರಿಂದ ದೂರವಾದ ಕೂಡಲೇ ಅವರ ಎಲ್ಲ ವರ್ಚಸ್ಸು ಅಡಗಿ ಹೋಯಿತು, ಅಧಿಕಾರ ಕಳೆದುಕೊಂಡರು. ಜನರೂ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಇದು ಇತಿಹಾಸ. ಅದು ಯಾವಾಗಲೂ ಕ್ರೂರವಾಗಿಯೇ ಇರುತ್ತದೆ. ಸಿದ್ದರಾಮಯ್ಯನವರು ಅರಸು ಅವರ ಹಾಗೆ ಪ್ರಶ್ನಾತೀತ ನಾಯಕರಲ್ಲ. ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರಬಹುದಾದರೂ ಇದು ಅವರಿಗೇ ಸಿಕ್ಕ ಜನಾದೇಶವಲ್ಲ. ಅವರ ಜಾಗದಲ್ಲಿ ಇನ್ನು ಬೇರೆ ಯಾರಾದರೂ ಮುಖ್ಯಮಂತ್ರಿ ಆಗಿರಬಹುದಿತ್ತು.

ಮೊದಲು ಈ ಮಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯನವರು ಏನೇ ತೀರ್ಮಾನ ತೆಗೆದುಕೊಂಡರೂ ಮೊದಲು ಅವರು ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತಮ್ಮ ಸಂಪುಟದಲ್ಲಿ ತಮಗೆ ಆಪ್ತರಾದ ಎಂಟು ಹತ್ತು ಸಚಿವರನ್ನಾದರೂ ಸದಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ‘ಉಧೋ’ ‘ಉಧೋ’ ಎನ್ನುವ ಶಾಸಕರು ಬೆನ್ನ ಹಿಂದೆ ಇರಬೇಕು. ಈಗ ಹಾಗೆ ಆಗುತ್ತಿಲ್ಲ. ಏನೋ ಮಾಡಲು ಹೋಗಿ ಏನೋ ಮಾಡಿದಂತೆ ಆಗುತ್ತಿದೆ. ಇಲಿ ಹೊಡೆಯಲು ಹೋಗಿ ಗಣಪನಿಗೆ ಏಟು ಬೀಳುತ್ತಿದೆ.

ಗಣಪನಿಗೆ ಏಟು ಬಿದ್ದರೆ ಏನು ವ್ಯತಿರಿಕ್ತ ಪರಿಣಾಮ ಆಗಬೇಕೋ ಅದೇ ಆಗುತ್ತಿದೆ. ಗಣಪನಿಗೇ ಹೊಡೆಯಬೇಕು ಎಂದು ಇದ್ದರೆ ಅದಕ್ಕೆ ಬಹಳ ಧೈರ್ಯ ಬೇಕು ಮತ್ತು ಆ ತೀರ್ಮಾನದಿಂದ ಹಿಂದೆ ಸರಿಯಬಾರದು. ಈಗ ಏನಾಗುತ್ತಿದೆ ಎಂದರೆ ಮುಖ್ಯಮಂತ್ರಿಗಳು ಇಲಿಗೆ ಹೊಡೆಯಲು ಹೊರಟಿದ್ದಾರೆಯೇ ಅಥವಾ ಗಣಪನಿಗೆ ಹೊಡೆಯಲು ಹೊರಟಿದ್ದಾರೆಯೇ ಎಂದೇ ತಿಳಿಯುತ್ತಿಲ್ಲ. ಕೊನೆಗೆ ಅವರಿಗೆ ಇಲಿಗೆ ಹೊಡೆಯಲೂ ಆಗುತ್ತಿಲ್ಲ.

ಮೂಢ ನಂಬಿಕೆ ನಿಷೇಧ ಮಸೂದೆ ವಿಚಾರದಲ್ಲಿ ಅದೇ ಆಯಿತು. ಯಾರಿಗೋ ಕೆಲವರಿಗೆ ಕರಡು ತಯಾರಿಸಲು ಹೇಳುವಾಗಲೇ ಅದರ ಪರಿಣಾಮಗಳು ಏನಾಗಬಹುದು ಎಂದು ಅವರು ಯೋಚಿಸಬೇಕಿತ್ತು. ಮತ್ತೆ ಅದೇ ಸಮಸ್ಯೆ, ಉದ್ದೇಶ ಒಳ್ಳೆಯದು. ಆದರೆ, ಅದರ ಪರಿಣಾಮ ಏನಾಗಬಹುದು ಎಂಬುದರ ವಿವೇಚನೆ ಇರಲಿಲ್ಲ. ಕರಡು ಪ್ರತಿ ಸ್ವೀಕರಿಸಿದ ನಂತರ ಹುಟ್ಟಬಹುದಾದ ವಿವಾದವನ್ನು ಅವರು ಮೊದಲೇ ಅಂದಾಜು ಮಾಡಬೇಕಿತ್ತು. ನಂತರ ಹೆಜ್ಜೆ ಇಡಬೇಕಿತ್ತು. ಈಗ ಏನಾಯಿತು ಎಂದರೆ ಮೂಢ ನಂಬಿಕೆ ನಿಷೇಧಿಸಬೇಕು ಎಂಬ ಅವರ ಪ್ರಾಮಾಣಿಕ ನಂಬಿಕೆಗೇ ಹಿನ್ನಡೆಯಾಯಿತು.

ಆದರೆ, ಇದೇ ಮಾತನ್ನು ಅವರ ‘ಬಿದಾಯಿ’ ಮತ್ತು ‘ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳ ಪ್ರವಾಸ’ದ ತೀರ್ಮಾನದಲ್ಲಿ ಹೇಳಲು ಆಗದು. ಅವರ ಉದ್ದೇಶವೇ ಪ್ರಾಮಾಣಿಕವಾಗಿ ಇರಲಿಲ್ಲ. ‘ಬಿದಾಯಿ’ ಯೋಜನೆ ಪ್ರಕಟಿಸುವಾಗ ಮುಂದಿನ ಲೋಕಸಭೆ ಚುನಾವಣೆ ಅವರ ಗಮನದಲ್ಲಿ ಇದ್ದಿರಬಹುದು. ಅದು ತಕ್ಕ ಮಟ್ಟಿಗೆ ಅವರ ನೆರವಿಗೆ ಬಂದರೂ ಬರಬಹುದು. ಆದರೆ, ಕೇವಲ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ತೆಗೆದುಕೊಂಡ ತೀರ್ಮಾನ ಶುದ್ಧ ಅವಿವೇಕದ್ದು. ಸಿದ್ದರಾಮಯ್ಯ ಸರ್ಕಾರಿ ಶಾಲೆಯಲ್ಲಿ ಓದಿದವರು.

ಅವರ ನಂತರದ ನಮ್ಮ ತಲೆಮಾರಿನವರೂ ಅಲ್ಲಿಯೇ ಓದಿದವರು. ಅಲ್ಲಿ ಜಾತಿಭೇದ ಎಂಬ ಮಾತೇ ಇರಲಿಲ್ಲ. ನಾವೆಲ್ಲ ಒಂದೇ ಬಳ್ಳಿಯ ಹೂಗಳ ಹಾಗೆ ಇದ್ದೆವು. ಈಗಲೂ ಸರ್ಕಾರಿ ಶಾಲೆಗಳು ಹಾಗೆಯೇ ಇರುತ್ತವೆ. ಅಂಥ ಮಕ್ಕಳಲ್ಲಿ ಎಂಥ ಭೇದ? ಯಾರಿಗಾದರೂ ಇಂಥ ಯೋಚನೆಗಳು ಏಕೆ ಬರುತ್ತವೆ? ಸಿದ್ದರಾಮಯ್ಯ ಈ ತೀರ್ಮಾನವನ್ನೂ ಬದಲಿಸಿದ್ದಾರೆ. ಅಂದರೆ ಏನು ಅರ್ಥ? ಒಂದೋ ಅವರಿಗೆ ತಾನು ಏನು ಮಾಡಲು ಹೊರಟಿದ್ದೇನೆ ಎಂದು ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಅದಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು ಆಗುತ್ತಿಲ್ಲ. ಅಂದರೆ ಏನು ಅರ್ಥ? ಸೋಲು, ಹತಾಶೆಯೇ ಅಲ್ಲವೇ?

ಅನುಮಾನ ಬೇಡ, ಸಿದ್ದರಾಮಯ್ಯ ಅವರ ಮುಂದೆ ಕಠಿಣ ಸವಾಲು ಇದೆ. ಅದು ಅವರು ಮುಂದಿನ ವರ್ಷ ಎದುರಿಸಬೇಕಿರುವ ಲೋಕಸಭೆ ಚುನಾವಣೆ. ಅದು ಅವರಿಗೆ ಅಗ್ನಿ ಪರೀಕ್ಷೆ. ಲೋಕಸಭೆ ಚುನಾವಣೆ ಆದ ಕೂಡಲೇ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ‘ಅಪಶಕುನದ ಭವಿಷ್ಯ’ವನ್ನು ಸಿದ್ದರಾಮಯ್ಯ ಸುಳ್ಳು ಮಾಡಬೇಕಿದೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷಕ್ಕೆ ಅವರು ಮುಂಬರುವ ಮಹತ್ವದ ಚುನಾವಣೆಯಲ್ಲಿ ಬಾಹುಬಲ ತುಂಬ ಬೇಕಿದೆ.

ಜತೆಗೆ ತಮ್ಮ ನಾಯಕತ್ವವನ್ನೂ ಭದ್ರ ಮಾಡಿಕೊಳ್ಳಬೇಕಿದೆ. ಅದಕ್ಕೆ ಅವರ ‘ಅಸ್ಮಿತೆ’ ರಾಜಕಾರಣ ಮಾಡಬೇಕಾಗಿದೆ. ಮತ ಬ್ಯಾಂಕ್ ಅನ್ನು ಸೃಷ್ಟಿಸಬೇಕಿದೆ. ಆದರೆ, ಇದು ‘ವಿಭಜನೆ’ಯ ಕಾಲ, ಇನ್ನೊಂದು ಅರ್ಥದಲ್ಲಿ ‘ಧ್ರುವೀಕರಣ’ದ ಕಾಲ. ಒಂದು ಕಡೆ ಮತಗಳ ‘ಧ್ರುವೀಕರಣ’ ನಡೆದರೆ ಅದರ ಪರಿಣಾಮ ಇನ್ನೊಂದು ಕಡೆ ‘ಧ್ರುವೀಕರಣ’ಕ್ಕೆ ಕಾರಣವಾಗುತ್ತದೆ. ಇನ್ನೊಂದು ‘ಧ್ರುವೀಕರಣ’ ಮಾಡುವ ಶಕ್ತಿಗಳು ಮೆತ್ತಗೇನೂ ಇಲ್ಲ. ಮತ್ತು ಆ ಶಕ್ತಿಗಳಿಗೆ ಧ್ವನಿ ದೊಡ್ಡದಿದೆ. ಸಿದ್ದರಾಮಯ್ಯ ‘ಧ್ರುವೀಕರಣ’ ಮಾಡಲು ಹೊರಟಿರುವ ಮತಗಳಿಗೆ ಬಾಯಿಯೇ ಇಲ್ಲ.

ಆಗ ಅವರು ಇನ್ನೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರು ತಮ್ಮ ಉದ್ದೇಶದಲ್ಲಿ ರಾಜಿ ಮಾಡಿಕೊಳ್ಳುವುದು ಬೇಡ. ಆದರೆ, ಅದರಿಂದ ಸಮಾಜದಲ್ಲಿ ಸಂಘರ್ಷ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕು. ರೋಗಕ್ಕೆ ಮಾತ್ರೆ ಕೊಡಲೇಬೇಕು. ಮಾತ್ರೆ ಸಿಹಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಕಹಿ ಮಾತ್ರೆ ಕೊಟ್ಟು ದಕ್ಕಿಸಿಕೊಳ್ಳುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದ್ದಂತೆ ಇಲ್ಲ. ಸಿದ್ದರಾಮಯ್ಯ ಮುಖ್ಯವಾಗಿ ಆಡಳಿತಗಾರ. ಅಧಿಕಾರಕ್ಕೆ ಬರುವಾಗ ಅವರ ಮುಖ್ಯ ಗುರಿ ಕೂಡ ಆಡಳಿತವನ್ನು ಸರಿದಾರಿಗೆ ತರುವುದೇ ಆಗಿತ್ತು. ಅವರು ಈಗ ಸೃಷ್ಟಿ ಮಾಡಿಕೊಂಡಿರುವ ವಿವಾದಗಳ ನಡುವೆ ಆಡಳಿತದ ಕಡೆಗೆ ಗಮನ ಕೊಡಲು ಆಗುವುದಿಲ್ಲ.

ಸುಮ್ಮನೆ ಸಮಯ ಹಾಳಾಗುತ್ತದೆ. ಅವರು ಅಧಿಕಾರಕ್ಕೆ ಬಂದ ದಿನವೇ ಬೊಕ್ಕಸದ ಮೇಲೆ ಭಾರಿ ಹೊರೆ ಹಾಕುವ ‘ಅನ್ನ ಭಾಗ್ಯ’ ಯೋಜನೆ ಪ್ರಕಟಿಸಿದ್ದಾರೆ. ಅದು ರಾಜ್ಯದ ಬೊಕ್ಕಸದ ಮೇಲೆ ಈಗ ಹಾಕಿರುವ ಹೆಚ್ಚುವರಿ ಹೊರೆ ರೂ 3,500 ಕೋಟಿ. ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರಕಾರ ಈಗ ರಾಜ್ಯ ಸರ್ಕಾರ ಎದುರಿಸುತ್ತಿರುವ ವರಮಾನ ಖೋತಾ ರೂ 4,500 ಕೋಟಿ. ಅಂದರೆ ಒಟ್ಟು ರೂ 8,000 ಕೋಟಿ ಖೋತಾ. ಹಣಕಾಸು ಖಾತೆಯನ್ನೂ ನಿಭಾಯಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಇದು ಶುಭ ಸುದ್ದಿಯಲ್ಲ.

ಜೇಬಿನಲ್ಲಿ ಹಣವಿದ್ದರೆ ಹೇಗಾದರೂ ಖರ್ಚು ಮಾಡಬಹುದು. ಬೊಕ್ಕಸದಲ್ಲಿ ಹಣ ಇಲ್ಲದೇ ಇದ್ದರೆ, ಸರಿಯಾಗಿ ತೆರಿಗೆ ಸಂಗ್ರಹ ಆಗದೇ ಇದ್ದರೆ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಸರಿಯಾಗಿ ಕೆಲಸ ಮಾಡಲು ಸಮರ್ಥರಾಗಲಿಲ್ಲ ಎಂದು ಅರ್ಥ. ಅವರು ಹಣಕಾಸು ಸಚಿವರಾಗಿ ಸರಿಯಾಗಿ ಕೆಲಸ ಮಾಡಲು ಆಗದೇ ಇದ್ದರೆ ಮುಖ್ಯಮಂತ್ರಿಯಾಗಿಯೂ ಸಮರ್ಪಕವಾಗಿ ಕೆಲಸ ಮಾಡಲು ಆಗುವುದಿಲ್ಲ. ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ‘ನೀವೇನು ಮಾಡುತ್ತಿದ್ದೀರಿ’ ಎಂದು ಝಂಕಿಸಿ ಕೇಳಲು ಆಗುವುದಿಲ್ಲ.

ಈಗ ಆಗಿರುವುದೂ ಅದೇ. ಮುಖ್ಯಮಂತ್ರಿಗಳು ಎಷ್ಟು ಆಕ್ರಮಣಕಾರಿಯಾಗಿದ್ದಾರೋ ಅಷ್ಟೇ ರಕ್ಷಣಾತ್ಮಕವಾಗಿಯೂ ಇದ್ದಾರೆ. ಪಕ್ಷದ ಅಧ್ಯಕ್ಷರು ಸಚಿವರ ಸಾಧನೆ ಅಳೆಯಲು ಹೊರಟಿದ್ದಾಗ ಸಿದ್ದರಾಮಯ್ಯ ಧೈರ್ಯ ಪ್ರದರ್ಶಿಸಲಿಲ್ಲ. ಅವರಿಗೆ ಏನೋ ಅಳುಕು. ಈ ಸರ್ಕಾರಕ್ಕೆ ಈಗ ಆರು ತಿಂಗಳು. ಆರು ತಿಂಗಳಲ್ಲಿ ಅವರ ಸಾಧನೆಗಳನ್ನು ಅಳೆಯಬಹುದು; ಅಥವಾ ಅದು ತೀರಾ ಚಿಕ್ಕ ಸಮಯ ಎಂದು ಹೇಳಿ ಅಳತೆ ಮಾಡುವುದನ್ನು ತಪ್ಪಿಸಬಹುದು.

ಸಿದ್ದರಾಮಯ್ಯ ಒಂದು ದಿನ ಅಧಿಕಾರ ಬಿಡಬೇಕಾಗುತ್ತದೆ. ಆಗ ತಾನು ಏನು ಮಾಡಿದೆ ಎಂದು ಹೇಳಬೇಕಾಗುತ್ತದೆ. ಏನು ಮಾಡಲು ಬಯಸಿದ್ದೆ ಎಂದು ಅಲ್ಲ. ಅವರು ಬಯಸಿದ್ದನ್ನು ಮಾಡಬೇಕು ಎಂದರೆ ಪಕ್ಷವನ್ನು, ಸಚಿವರನ್ನು ಮತ್ತು ಶಾಸಕರನ್ನು ಜತೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಈಗ ಅವರು ಹಾಗೆ ಹೊರಟಿಲ್ಲ. ಏಕೆಂದರೆ ‘ದೇವರಾಜ ಅರಸು’ ಆಗ ಹೊರಟ ನಾಯಕನ ಪರವಾಗಿ ಯಾರು ಮಾತನಾಡುತ್ತಿದ್ದಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.