ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ಕನೇ ಆಯಾಮ

ADVERTISEMENT

ಬೆಳಕು ಇಲ್ಲದ ದಿನಗಳಲ್ಲಿ ಕನಸುಗಳ ಬೆನ್ನು ಹತ್ತಿ...

‘ನಾಜೂಕಯ್ಯ’ ನಾಟಕದ ಪ್ರದರ್ಶನದ ಅದ್ಭುತ ಯಶಸ್ಸು, ಹವ್ಯಾಸಿ ರಂಗಭೂಮಿಯ ಹುಟ್ಟು, ಉಚ್ಛ್ರಾಯ ಮತ್ತು ಅವನತಿಯನ್ನು ಕಂಡಿದ್ದ ರವೀಂದ್ರ ಕಲಾಕ್ಷೇತ್ರಕ್ಕೆ ಐವತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಮತ್ತೆ ಹೊಸ ಕನಸುಗಳನ್ನು ಹುಟ್ಟು ಹಾಕುವಂತೆ ಕಾಣುತ್ತಿದೆ.
Last Updated 16 ಜೂನ್ 2018, 9:10 IST
fallback

ಅರಸು ಆಗ ಹೊರಟ ನಾಯಕನ ಕಷ್ಟಗಳು...

ನಮ್ಮ ಉದ್ದೇಶಗಳು ಸರಿ ಇರಬಹುದು, ಅದರಲ್ಲಿ ನಾವು ಪ್ರಾಮಾಣಿಕರೂ ಆಗಿರಬಹುದು; ಆದರೆ, ಅವುಗಳ ಅನುಷ್ಠಾನದಿಂದ ಆಗುವ ಪರಿಣಾಮಗಳ ಕಡೆಗೆ ಗಮನ ಇಲ್ಲದೇ ಇದ್ದರೆ ನಮಗೆ ಅಷ್ಟೇ ಏಟಾಗುವುದಿಲ್ಲ. ಉದ್ದೇಶಕ್ಕೂ ಏಟು ಬೀಳುತ್ತದೆ.
Last Updated 16 ಜೂನ್ 2018, 9:10 IST
fallback

ಉತ್ತರ ಕರ್ನಾಟಕ ಎಂಬ ಅಳುವ ಕೂಸು

ಸತ್ಯವೇ ಹಾಗೆ. ಅದು ಕಹಿಯಾಗಿರುತ್ತದೆ, ಅರಗಿಸಿಕೊಳ್ಳಲು ಕಷ್ಟಕರವಾಗಿರುತ್ತದೆ, ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಅನಿಸುತ್ತದೆ; ಎದುರಿಸುವುದೇ ಬೇಡ ಎಂದುಕೊಂಡರೂ ಮತ್ತೆ ಮತ್ತೆ ಎದುರು ಬಂದು ಧುತ್ತೆಂದು ನಿಲ್ಲುತ್ತದೆ. ಈಗ ಮತ್ತೆ ಎದ್ದು ಬಂದು ನಮ್ಮ ಮುಂದೆ ನಿಂತಿದೆ. ಕರ್ನಾಟಕವನ್ನು ಎರಡಾಗಿ ಒಡೆಯಬೇಕೇ ಎಂಬುದು ಆ ಪ್ರಶ್ನೆ. ಇದನ್ನು ಕೇಳಿದ ಶಾಸಕ ಉಮೇಶ ಕತ್ತಿಯವರೇನೂ ಮೊದಲಿಗರಲ್ಲ. ಬಹುಶಃ ಕೊನೆಯವರೂ ಆಗಿರಲಾರರು.
Last Updated 16 ಜೂನ್ 2018, 9:10 IST
fallback

ಅಪಭ್ರಂಶವೇ ಗುಣಧರ್ಮ ಎಂದೆನಿಸಬಾರದು

ಇತಿಹಾಸ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ‘ಇತಿಹಾಸ’ ಎನ್ನಬೇಕೋ ಬೇಡವೋ ತಿಳಿಯದು. ಆದರೆ, ಇತಿಹಾಸದಲ್ಲಿ ಎಲ್ಲವೂ ಒಳ್ಳೆಯದೇ ಇರಬೇಕು ಎಂದೇನಿಲ್ಲವಲ್ಲ? ಕೆಟ್ಟದ್ದೂ ಇರುತ್ತದೆ.
Last Updated 16 ಜೂನ್ 2018, 9:10 IST
fallback

ಈಗ ರಾಜಧರ್ಮದ ಪಾಠ ಹೇಳುವವರು ಯಾರು?

ಇದೆಲ್ಲ ಇಷ್ಟು ಬೇಗ ಶುರುವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಈಗಷ್ಟೇ ಇನ್ನೂರು ದಿನಗಳು ಕಳೆದಿವೆ. ಅಂದರೆ ಸುಮಾರು ಆರೂವರೆ ತಿಂಗಳು ಅಷ್ಟೇ. ಇನ್ನೂ ನಾಲ್ಕೂವರೆ ವರ್ಷ ಅವರು ಅಧಿಕಾರದಲ್ಲಿ ಇರಬೇಕು. ಅವರು ಗುಜರಾತಿನಿಂದ ಸೀದಾ ದೆಹಲಿಗೆ ಬಂದಿದ್ದಾರೆ.
Last Updated 16 ಜೂನ್ 2018, 9:10 IST
fallback

ಬದಲಾವಣೆ ಎಂಬುದು ಬರಿ ಭ್ರಮೆಯೇ?

ಆ ಯುವಕನಿಗೆ ತಲೆತುಂಬ ಕನಸು. ವಯಸ್ಸು ಕೇವಲ 32. ಯಾವುದೋ ಹಳ್ಳಿಯಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಮೇಲೆ ಬಂದಿದ್ದ. ಮೊದಲ ಬಾರಿಗೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಆಗಿದ್ದ. ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂದು ಆತ ಅಂದುಕೊಂಡಿದ್ದ. ಸರ್ಕಾರದ ಆಸ್ತಿ ಕಬಳಿಸಿದವರನ್ನು ಬಲಿ ಹಾಕಬೇಕು ಎಂದು ಅಂದುಕೊಂಡಿದ್ದ. ತಬರನಂತೆ ಸರ್ಕಾರಿ ಕಚೇರಿಗಳ ಕಂಬ ಕಂಬ ಸುತ್ತುವ ಬಡವರಿಗೆ ಸಹಾಯ ಮಾಡಬೇಕು ಎಂದುಕೊಂಡಿದ್ದ...
Last Updated 16 ಜೂನ್ 2018, 9:10 IST
fallback

ಎಲ್ಲ ಊರಿಗೂ ಇಂಥ ಒಂದು ಶಾಲೆ ಬೇಡವೇ?

ಇಲ್ಲಿ ಅನೇಕ ಪಾಠಗಳು ಇವೆ: ಕನ್ನಡ ಶಾಲೆಗಳು ಹೇಗಿರಬೇಕು, ಅವುಗಳನ್ನು ಸುಧಾರಿಸುವುದು ಹೇಗೆ, ಕನ್ನಡ ಶಾಲೆಗಳಿಗೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಸೆಳೆಯಬಹುದು, ಅದಕ್ಕೆಲ್ಲ ಹಣ ಹೇಗೆ ಹೊಂದಿಸಬಹುದು... ಹೀಗೆಯೇ ಕಲಿಯಬೇಕಾದ ಪಾಠಗಳ ಪಟ್ಟಿ ಮಾಡುತ್ತ ಹೋಗಬಹುದು.
Last Updated 16 ಜೂನ್ 2018, 9:10 IST
fallback
ADVERTISEMENT

ಉಕ್ಕಿನ ಚೌಕಟ್ಟು ಒಡೆದು ಹಾಕುವುದು ಕಷ್ಟವೇನೂ ಅಲ್ಲ

ಆಚೆ ಒಂದು ಉಕ್ಕಿನ ಭದ್ರ ಚೌಕಟ್ಟು, ಈಚೆಗೂ ಅಂಥದೇ ಇನ್ನೊಂದು ಚೌಕಟ್ಟು. ಎರಡರ ಒಳಗೂ ಒಬ್ಬರಿಗೊಬ್ಬರು ಮಿಡಿಯುವ ಜೀವಗಳು. ಎರಡೂ ಜೀವಗಳು ಹೊರಗೆ ಬರುವಂತಿಲ್ಲ. ಪರಸ್ಪರರನ್ನು ಭೇಟಿ ಮಾಡುವಂತಿಲ್ಲ. ಮಾತನಾಡುವಂತಿಲ್ಲ.
Last Updated 16 ಜೂನ್ 2018, 9:10 IST
fallback

ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದಿಲ್ಲ ಎಂಬುದು ಎಷ್ಟು ನಿಜ ಅಲ್ಲವೇ?

ಸರ್ಕಾರಕ್ಕೆ, ಅದು ಯಾವುದೇ ಇರಲಿ, ಅದಕ್ಕೆ ಭಾಷೆ ಎಂಬುದು ಒಂದು ಆದ್ಯತೆಯ ವಿಚಾರವೇ? ಕಾಳಜಿಯ ಸಂಗತಿಯೇ? ಈ ಪ್ರಶ್ನೆ ನನಗೆ ಅನೇಕ ವರ್ಷಗಳಿಂದ ಕಾಡಿದೆ. ಉತ್ತರ ‘ಅಲ್ಲ’ ಎಂದೇ ಸಿಕ್ಕಿದೆ. ರಾಜ್ಯ ರಚನೆಯಾಗಿ 58 ವರ್ಷಗಳೇ ಕಳೆದು ಹೋಗಿವೆ. ಯಾರಾದರೂ ಮುಖ್ಯಮಂತ್ರಿ ಕನ್ನಡ ಮತ್ತು ಸಂಸ್ಕೃತಿ ಖಾತೆ ಅಥವಾ ಶಿಕ್ಷಣ ಖಾತೆ ತನ್ನ ಬಳಿ ಇರಲಿ ಎಂದು ಬಯಸಿ ಇಟ್ಟುಕೊಂಡಿದ್ದಾರೆಯೇ? ಹಣಕಾಸು, ಗೃಹ, ಅಬಕಾರಿ ಖಾತೆಗಳನ್ನು ಯಾರಾದರೂ ಮುಖ್ಯಮಂತ್ರಿ ಬಿಟ್ಟುಕೊಡಲು ಬಯಸುತ್ತಾರೆಯೇ? ಏಕೆ ಹೀಗೆ?
Last Updated 16 ಜೂನ್ 2018, 9:10 IST
fallback

ಪಕ್ಕದ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಮುಖ್ಯಮಂತ್ರಿ ಇಟ್ಟುಕೊಂಡು...

ಇನ್ಫೊಸಿಸ್‌ನ ಒಂದು ಘಟಕ ಕೂಡ ಆಂಧ್ರಕ್ಕೆ ಹೋಗಬಹುದು ಎಂಬ ಸುದ್ದಿ ಬರೀ ಹುಯಿಲು ಆಗಿರುವುದು ನಿಜಕ್ಕೂ ಒಳ್ಳೆಯದು. ನಾವು ಈಗ ಕೃಷಿಯ ಪರವಾಗಿಯೂ ಇರಬೇಕು. ಕೈಗಾರಿಕೆಗಳ ಪರವಾಗಿಯೂ ಇರಬೇಕು. ನಮ್ಮ ಪಕ್ಕದಲ್ಲಿಯೇ ಇರುವ ಒಂದು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಒಬ್ಬ ಮುಖ್ಯಮಂತ್ರಿ ಇದ್ದರೆ ನಾವು ಮೈಯೆಲ್ಲ ಕಣ್ಣಾಗಿ ಇರಬೇಕು. ಏಕೆಂದರೆ ಅವರು ನಮಗಿಂತ ದೂರ ನಡೆಯಲು ಸಿದ್ಧರಿದ್ದಾರೆ. ಕಾರಣ, ಅವರಿಗೆ ಈಗ ಉತ್ತಮವಾಗಿ ಆಡಳಿತ ಮಾಡಬೇಕು ಎಂಬ ಉದ್ದೇಶದ ಜತೆಗೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸೂ ಇದೆ. ನಮಗೆ ಅದೇ ಇರುವಂತೆ ಕಾಣುವುದಿಲ್ಲ.
Last Updated 16 ಜೂನ್ 2018, 9:10 IST
fallback
ADVERTISEMENT