ದುಬೈ: ಭಾರತ ಟಿ20 ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಮಹಿಳಾ ತಂಡದ ಸ್ಮೃತಿ ಮಂದಾನ ಅವರನ್ನು ಐಸಿಸಿ ತಿಂಗಳ ಆಟಗಾರ ಗೌರವ ಒಲಿದಿದೆ.

ಸೆಪ್ಟೆಂಬರ್ ತಿಂಗಳ ಶ್ರೇಷ್ಠ ಆಟಗಾರರ ಪ್ರಶಸ್ತಿ ಆಯ್ಕೆಯಲ್ಲಿ ಇವರಿಬ್ಬರಿಗೂ ಈ ಗೌರವ ಸಂದಿದೆ. ಅಭಿಷೇಕ್ ಅವರು ಈ ಪೈಪೋಟಿಯಲ್ಲಿ ತಮ್ಮ ಸಹ ಆಟಗಾರ, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಜಿಂಬಾಬ್ವೆಯ ಬ್ರಯನ್ ಬೆನೆಟ್ ಅವರನ್ನು ಹಿಂದಿಕ್ಕಿದರು. ಅಭಿಷೇಕ್ ಅವರು ಏಳು ಪಂದ್ಯಗಳಿಂದ 314 ರನ್ ಗಳಿಸಿದ್ದರು. 200ರ ಸ್ಟ್ರೈಕ್ರೇಟ್ನಲ್ಲಿ ಅವರು ಈ ಸಾಧನೆ ಮಾಡಿದ್ದರು. 25 ವರ್ಷದ ಅಭಿಷೇಕ್ ಅವರು ಈಚೆಗೆ ಏಷ್ಯಾ ಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

‘ಈ ಗೌರವಕ್ಕೆ ಪಾತ್ರರಾಗಿದ್ದು ಬಹಳ ಹೆಮ್ಮೆ ಎನಿಸುತ್ತಿದೆ. ಕೆಲವು ಮಹತ್ವದ ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದ್ದು ತೃಪ್ತಿಕರವಾಗಿದೆ’ ಎಂದು ಅಭಿಷೇಕ್ ಹೇಳಿದರು.

ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಅವರು ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 58, 117 ಮತ್ತು 125 ರನ್ ಗಳಿಸಿದ್ದರು. ತಂಡದ ಉಪನಾಯಕಿಯೂ ಆಗಿರುವ ಸ್ಮೃತಿ ಒಟ್ಟು 308 ರನ್ ಸೇರಿಸಿದರು. 135.68ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆಹಾಕಿದ್ದರು. ಈ ಸರಣಿಯಲ್ಲಿ ಅವರು ವೇಗದ ಶತಕ ದಾಖಲಿಸಿದ್ದರು.

ಈ ಪ್ರಶಸ್ತಿ ಪೈಪೋಟಿಯಲ್ಲಿ ಅವರು ದಕ್ಷಿಣ ಆಫ್ರಿಕಾದ ತಾಜ್ಮಿನ್ ಬ್ರಿಟ್ಸ್ ಮತ್ತು ಪಾಕಿಸ್ತಾನದ ಸಿದ್ರಾ ಅಮಿನ್ ಅವರನ್ನು ಹಿಂದಿಕ್ಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.