ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

ನುಡಿಯೊಳಗಾಗಿ

ADVERTISEMENT

ಮೌನ

ಮಾತು-ಮೌನ ಬೇರೆ ಬೇರೆಯಲ್ಲ. ಮಾತಿಗೆ ಆಕಾರವಿದೆ, ಮೌನಕ್ಕೆ ನಿರಾಕಾರವಿದೆ. ಅಲ್ಲಮನ ಮಾತಿನಲ್ಲಿ ಹೇಳುವುದಾದರೆ ಆಕಾರ, ನಿರಾಕಾರ ಎರಡೂ ಸ್ವರೂಪಗಳೇ. ನುಡಿಯು ಆಕಾರ ಪಡೆಯಬೇಕಾದರೆ ನುಡಿಗೆ ಮುನ್ನ, ನುಡಿಯ ಒಂದೊಂದೂ ಧ್ವನಿಗಳ ನಡುವೆ, ಮತ್ತು ನುಡಿಯ ನಂತರ ಮೌನ ಇದ್ದೇ ಇರಬೇಕು. ಮೌನವಿರದೆ ನುಡಿ, ನುಡಿ ಅಥವ ಇನ್ನು ಯಾವುದೇ ಸದ್ದು ಇಲ್ಲದೆ ಮೌನ ಇರಲು ಸಾಧ್ಯವಿಲ್ಲ.
Last Updated 26 ಜನವರಿ 2013, 19:59 IST
ಮೌನ

ಅರ್ಥ

ಬುದ್ಧನ ಬದುಕಿನ ಕಥನಗಳ ಮೂಲಕ, ನಾಗಾರ್ಜುನನ ತಾತ್ವಿಕತೆಯ ಮೂಲಕ, ಅಲ್ಲಮನ ನುಡಿಗೆಟ್ಟ ನುಡಿಯ ಮೂಲಕ, ಪಾಶ್ಚಾತ್ಯ ಚಿಂತಕರ ಪ್ರತಿಪಾದನೆಗಳ ಮೂಲಕ ಭಾಷೆ-ಅರ್ಥ-ಬದುಕುಗಳನ್ನು ಕುರಿತು ಈಗ ಹೀಗನ್ನಿಸುತ್ತಿದೆ.
Last Updated 19 ಜನವರಿ 2013, 19:59 IST
ಅರ್ಥ

ಇಲ್ಲದೆ ಇರುವ ಭಾಷೆ: ನಾಗಾರ್ಜುನ

ಬುದ್ಧ ತನ್ನ ಸುತ್ತಲ ಜನ ಆಡುವ ನುಡಿಯನ್ನು ಬಳಸಿಕೊಂಡೇ ದುಃಖದಿಂದ ಪಾರಾಗುವ ದಾರಿಯನ್ನು `ಸರಳ'ವಾದ ಮಾತಿನಲ್ಲಿ ಬೋಧಿಸಿದ. ಅತಿರೇಕಗಳಿಗೆ ಗಂಟುಬೀಳಬೇಡಿ, ಮಧ್ಯಮ ಮಾರ್ಗ ಹಿಡಿದು ಸಾಗಿ ಎಂದ. ಬಸವಣ್ಣ ಮಾಡಿದ್ದೂ ಅದನ್ನೇ. ಸುತ್ತಲ ಜನಕ್ಕೆ ತಿಳಿಯುವ ನುಡಿಯಲ್ಲಿ ಕಳಬೇಡ, ಕೊಲಬೇಡ ಇತ್ಯಾದಿಯಾಗಿ `ಸರಳ'ವಾದ ಮಾತಿನಲ್ಲಿ ಬೋಧನೆ ಮಾಡಿದ.
Last Updated 12 ಜನವರಿ 2013, 19:59 IST
ಇಲ್ಲದೆ ಇರುವ ಭಾಷೆ: ನಾಗಾರ್ಜುನ

ಅರಿವನ್ನು ಹೊಸತುಗೊಳಿಸುವ ನುಡಿಗೆಟ್ಟ ನುಡಿ

`ಅರಿವಂ ಪೊಸಯಿಸುವುದು ಧರ್ಮಂ' ಅರಿವನ್ನು ಹೊಸತುಗೊಳಿಸುವುದೇ ಧರ್ಮ ಅನ್ನುವುದು ಪಂಪನ ಮಾತು. ಆದಿಪುರಾಣದಲ್ಲಿ ಬರುತ್ತದೆ. ಅರಿವನ್ನು ಹೊಸತಾಗದಂತೆ ತಡೆಯುವುದೇ ಅಧರ್ಮ ಎಂದೂ ಹೇಳುತ್ತಾನೆ. ಧರ್ಮವು ಸಂಸ್ಥೆಯ ರೂಪ ತಾಳಿದಾಗ ಅರಿವನ್ನು ಜಡಗೊಳಿಸುವ ಕೆಲಸವೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಪಂಪ ತನ್ನ ಭಾಷೆಯ ಮೂಲಕವೇ ಧರ್ಮವನ್ನೂ ಲೌಕಿಕವನ್ನೂ ಬೆಳಗಿದವನು.
Last Updated 5 ಜನವರಿ 2013, 19:59 IST
fallback

ಧರ್ಮ ಸಂಸ್ಥೆಯ ಭಾಷೆ, ಅನುಭವದ ನುಡಿ

ಬದುಕಿನಲ್ಲಿ ಧರ್ಮವೆಂಬ ವಲಯಕ್ಕೂ ಭಾಷೆಗೂ ಇರುವ ಸಂಬಂಧದ ಬೆಸುಗೆ ಬಿಡಿಸಲು ಬಾರದಂಥದ್ದು. ಒಂದೊಂದೂ ಧರ್ಮದ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಭಾಷೆಯ ಪಾತ್ರವೇನು? ಭಾಷೆಯ ಮತ್ತು ಭಾಷೆಯ ಅಧ್ಯಯನದ ಚರಿತ್ರೆಯ ಮೇಲೆ ಧರ್ಮ ಬೀರಿದ ಪ್ರಭಾವವೇನು? ಇವು ಈ ಸಂಬಂಧದ ಹೊರವಲಯದ, ವಿಶಾಲ ವ್ಯಾಪ್ತಿಯ ಪ್ರಶ್ನೆಗಳು.
Last Updated 29 ಡಿಸೆಂಬರ್ 2012, 19:59 IST
fallback

ಕೃತಕ ಭಾಷೆ, ಕೃತಕ ವಿವೇಕ

ಇದು ದುರಾಸೆಯೋ ಮಹತ್ವಾಕಾಂಕ್ಷೆಯೋ ಅಸಾಧ್ಯವಾದುದನ್ನು ಸಾಧಿಸಬೇಕೆಂಬ ಮನುಷ್ಯ ಛಲವೋ ಗೊತ್ತಿಲ್ಲ. ಜಗತ್ತಿನ ಎಲ್ಲ ಮನುಷ್ಯರ ಜೊತೆ ಸಂವಾದ ನಡೆಸುವುದು ಹೇಗೆ? ಎಷ್ಟೆಂದು ಭಾಷೆಗಳನ್ನು ಕಲಿಯುವುದಕ್ಕೆ ಸಾಧ್ಯ? ಅಥವ ಎಷ್ಟೆಂದು ಅನುವಾದ ಮಾಡುತ್ತ ಕೂರುವುದು?
Last Updated 22 ಡಿಸೆಂಬರ್ 2012, 19:59 IST
fallback

ಸ್ವಗತ ಮತ್ತು ಸಂವಾದ

ಬದುಕು ಭಾಷೆಯೊಳಕ್ಕೆ ಪ್ರವೇಶಿಸುವುದು, ಭಾಷೆ ಬದುಕಿನೊಳಕ್ಕೆ ಪ್ರವೇಶಿಸುವುದು ಉಕ್ತಿಯ ಮೂಲಕವೇ. ಈ ಉಕ್ತಿಯ ಸ್ವರೂಪವನ್ನು ಉದಾಸೀನ ಮಾಡಿ, ವಿವಿಧ ಬಗೆಯ ಉಕ್ತಿಗಳ ವಿಶೇಷತೆಯನ್ನು ಗಮನಿಸದೆ ಇರುವ ಎಲ್ಲ ಭಾಷಿಕ ಅಧ್ಯಯನಗಳೂ ಅತಿಯಾದ ಅಮೂರ್ತತೆಯಲ್ಲಿ ಕಳೆದುಹೋಗುತ್ತವೆ, ಬದುಕಿಗೂ ಭಾಷೆಗೂ ಇರುವ ಸಂಬಂಧದ ಕೊಂಡಿಯನ್ನು...
Last Updated 15 ಡಿಸೆಂಬರ್ 2012, 19:54 IST
fallback
ADVERTISEMENT

ಮನುಷ್ಯ ಭಾಷೆ ತಾನೊಂದೆ ವಲಂ

ವ್ಯತ್ಯಾಸಗಳು ಎಷ್ಟೂ ಇರಬಹುದು; ವೈವಿಧ್ಯ ಅನಂತವಾಗಿರಬಹುದು, ಆದರೂ `ಮನುಷ್ಯ' ಮಾತ್ರ ಒಬ್ಬನೇ. ಹಾಗೆಯೇ ನುಡಿಗಳ ವೈವಿಧ್ಯ ಅಪಾರವಾಗಿದ್ದರೂ, ಒಂದೊಂದು ನುಡಿಯಲ್ಲೂ ರಚಿಸಬಹುದಾದ ವಾಕ್ಯಗಳ ಸಂಖ್ಯೆ ಅನಂತವಾಗಿದ್ದರೂ ಅವೆಲ್ಲ ಮೇಲುನೋಟಕ್ಕೆ ಕಾಣುವ ವಿಭಿನ್ನ ರಚನೆಗಳು; ಈ ರಚನೆಗಳ ಆಳದ ವಿನ್ಯಾಸ ಮಾತ್ರ ಒಂದೇ; `ಭಾಷೆ'...
Last Updated 8 ಡಿಸೆಂಬರ್ 2012, 22:00 IST
fallback

ಭಾಷೆ ಎಂಬ ರಚನೆ

ಚಳಿಗಾಲದ ಮಧ್ಯಾಹ್ನ. ಕೋಣೆಯೊಳಗೆ ಓರೆಯಾಗಿ ಬೆಳಕಿನ ಕಿರಣವೊಂದು ಬೀಳುತ್ತದೆ. ಚರ್ಚಿನ ಶೋಕಗೀತೆಯ ರಾಗದ ಹಾಗೆ ಭಾರವಾದ ಬೆಳಕು. ಮನಸು ನೋಯುತ್ತದೆ. ಗಾಯದ ಗುರುತಿಲ್ಲ. ಆ ಬೆಳಕು ಒಳಗಿನ ವ್ಯತ್ಯಾಸಗಳನ್ನು ಬೆಳಗುತ್ತದೆ. ಅರ್ಥಗಳು ಇರುವುದು ಆ ವ್ಯತ್ಯಾಸಗಳಲ್ಲೇ... ಅಮೆರಿಕದ ಕವಿ ಎಮಿಲಿ ಡಿಕಿನ್ಸನ್...
Last Updated 1 ಡಿಸೆಂಬರ್ 2012, 20:44 IST
fallback

ಕಥೆ ಮತ್ತು ಸಂಸ್ಥೆ

ನಮ್ಮೆಲ್ಲರ ತಲೆಯಲ್ಲೂ ಒಂದೊಂದು ಕಥೆ ಇರುತ್ತದೆ, ಅದಕ್ಕೆ ಲೋಕದಲ್ಲಿ ಸಾಕ್ಷಿ ಹುಡುಕುತ್ತ ಇರುತ್ತೇವೆ- ಸುಮಾರಾಗಿ ಈ ಅರ್ಥದ ಒಂದು ಮಾತನ್ನು ತೇಜಸ್ವಿಯವರ `ಚಿದಂಬರ ರಹಸ್ಯ~ ಕಾದಂಬರಿಯಲ್ಲಿ ಕೆಸರೂರಿಗೆ ಬಂದ ಪತ್ತೇದಾರ ಹೇಳುತ್ತಾನೆ.
Last Updated 17 ನವೆಂಬರ್ 2012, 19:30 IST
ಕಥೆ ಮತ್ತು ಸಂಸ್ಥೆ
ADVERTISEMENT