ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಂಗ್‌ಗೆ ಮುನ್ನ... ಗೋಡೆ ಮರೆಯದಿರಿ..

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ಕನಸಿನ ಮನೆ ಎಂಬ ಕಟ್ಟಡದ ನಿರ್ಮಾಣ ಒಂದು ಘಟ್ಟಕ್ಕೆ ಬಂದಿದೆ. ಅಂದರೆ ಗೋಡೆ, ಪ್ಲಾಸ್ಟರಿಂಗ್ ಎಲ್ಲ ಆಗಿದೆ. ಬಣ್ಣ ಹೊಡೆಯುವುದಕ್ಕೂ ಮುನ್ನ ಗೋಡೆಗಳಿಗೆ ಪಟ್ಟಿ ಕೆಲಸ ಆಗಬೇಕಿದೆ. ಈ ಸಂದರ್ಭದಲ್ಲಿ  ಹೊಸ ಮನೆಯ ಸದಸ್ಯರಯ, ಅದರಲ್ಲೂ ಮುಖ್ಯವಾಗಿ ಮನೆಯೊಡತಿ ನಿರ್ಧರಿಸಬೇಕಾದ ಬಹಳ ಸಣ್ಣ ಕೆಲಸವೊಂದಿರುತ್ತದೆ.
 
ಆದರೆ ಬಹಳಷ್ಟು ಮಂದಿ ಅದನ್ನು ಈ ಹಂತದಲ್ಲಿ ಮರೆತುಬಿಡುತ್ತಾರೆ. ಪರಿಣಾಮ ಗೃಹ ಪ್ರವೇಶದ ವೇಳೆಯೋ, ನಂತರದಲ್ಲಿಯೋ ಪೇಚಾಡುವಂತಾಗುತ್ತದೆ, ಮನಸ್ಸಿಗೆ ತುಸು ನೋವೂ ಆಗುತ್ತದೆ.

ಪೇಂಟಿಂಗ್ -ಪಟ್ಟಿ ಮಾಡುವುದಕ್ಕೂ ಮುನ್ನ ನಿರ್ಧರಿಸಬೇಕಾದ ಆ ಪುಟ್ಟ ಕೆಲಸ ಯಾವುದೆಂದರೆ ಮನೆಯ ವಿವಿಧ ಭಾಗಗಳಲ್ಲಿ ಜೋಡಣೆ ಆಗಬೇಕಿರುವ ಅಲಂಕಾರಿಕ ವಸ್ತುಗಳಿಗೆ, ಕೆಲವು ಅಗತ್ಯ ಸಾಮಗ್ರಿಗಳಿಗೆ ಸ್ಥಳ ನಿಗದಿ ಮಾಡಿ ಅವುಗಳ ಜೋಡಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಇರುವುದು!

ಉದಾಹರಣೆಗೆ ಹಾಲ್‌ನಲ್ಲಿ, ಮಕ್ಕಳ ಕೋಣೆಯಲ್ಲಿ ಗೋಡೆ ಗಡಿಯಾರ ಅಳವಡಿಸಬೇಕಿದೆ. ಅದಕ್ಕೆ ಗೋಡೆಗೆ ಮೊಳೆ ಹೊಡೆಯಬೇಕು. ಅತಿಥಿಗಳ ಕಣ್ಣಿಗೆ ಬೀಳುವ ಕಡೆ ಗೋಡೆಗಳು, ಮೂಲೆಗಳಲ್ಲಿ ಪೇಂಟಿಂಗ್ಸ್, ಪುಟ್ಟ ಅಲಂಕಾರಿಕ ವಸ್ತುಗಳನ್ನು ಜೋಡಿಸಲು ಅಲ್ಲಿಯೂ ಮೊಳೆ ಅಥವಾ ಮರದ ಪುಟ್ಟ ಪಟ್ಟಿಗಳನ್ನು ಅಳವಡಿಸಬೇಕು.

ಅದಾಗಲೇ ಪಟ್ಟಿ-ಪೇಂಟ್ ಆದ ನಂತರದಲ್ಲಿ ಮೊಳೆ ಹೊಡೆಯುವುದು, ಮರದ ಪಟ್ಟಿ ಅಳವಡಿಸುವುದು ಎಂದರೆ ನಯವಾಗಿ ಸುಂದರವಾಗಿ ಕಾಣುವ ಗೋಡೆಗಳ ಮೇಲೆ ಕಲೆ ಮೂಡಿಸಿದಂತೆ, ಅಂದಗೆಡಿಸಿದಂತೆ ಅಲ್ಲವೇ?

ಹೊಸ ಮನೆಯ ಅಂದಗೆಡಿಸುವ ಇಂಥ ಸಂದರ್ಭ ಬರಬಾರದು ಎನ್ನುವುದಾದರೆ ಮುಂಚಿತವಾಗಿಯೇ ಪ್ಲಾನ್ ಮಾಡಿರಿ. ಮನೆಯ ಯಾವ ಗೋಡೆ, ಮೂಲೆಯಲ್ಲಿ ಎಂಥ ಅಲಂಕಾರಿಕ ವಸ್ತು ಜೋಡಣೆ ಆಗಲಿದೆ ಎಂಬುದನ್ನು ನಿರ್ಧರಿಸಿರಿ(ಒಳಾಂಗಣ ವಿನ್ಯಾಸಕ್ಕೆ ಪ್ಲಾನ್ ಮಾಡಿದಂತೆ).

ಅದಕ್ಕೆ ತಕ್ಕಂತೆ ನಿಮ್ಮ ಕಾರ್ಪೆಂಟರ್‌ಗೆ ಹೇಳಿ ಆ ನಿಗದಿತ ಜಾಗಗಳಲ್ಲಿ ಮರ ಗಟ್ಟಗಳನ್ನೋ, ಮೊಳೆ ಅಥವಾ ಸ್ಕ್ರೂಗಳನ್ನೋ ಅಳವಡಿಸಿರಿ. ಆ ನಂತರದಲ್ಲಿ ಪಟ್ಟಿ-ಪೇಂಟಿಂಗ್ ಮಾಡಿದರೆ ಗೋಡೆಗಳು ಸುತ್ತಿಗೆಯ ಏಟಿನಿಂದ ಜಖಂಗೊಳ್ಳುವ ಪ್ರಸಂಗ ತಪ್ಪುತ್ತದೆ. ಗೋಡೆಗಳ ಅಂದವೂ ಕುಂದಾಗದಂತೆ ಉಳಿದುಕೊಳ್ಳುತ್ತದೆ. ಏನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT