ಬೋನ್ಸಾಯಿ ಲೋಕವೇ ವಿಶಿಷ್ಟ. ಇವು ಸಸಿಗಳ ಗಾತ್ರದಲ್ಲಿರುವ ಮರಗಳು. ತಮ್ಮ ವಿಶಿಷ್ಟ ಆಕಾರ ಮತ್ತು ಸಂರಚನೆಯಿಂದಲೇ ನೋಡುಗರನ್ನು ಸೆಳೆಯುತ್ತವೆ. ವರಾಂಡ, ಟೆರೆಸ್, ಕಚೇರಿ, ಹಾಲ್, ಮಲಗುವ ಕೋಣೆ ಹೀಗೆ ಎಲ್ಲೆಲ್ಲಿ ಜಾಗವಿದೆಯೊ ಅಲ್ಲೆಲ್ಲಾ ಜೇನುಗೂಡು ಇಟ್ಟು ಬೆಳೆಸಬಹುದು. ನಗರದಲ್ಲಿ ಹಳ್ಳಿಗಳ ರೀತಿ ಸಾಕಷ್ಟು ಜಾಗವಿರುವುದಿಲ್ಲ.

ಇರುವ ಜಾಗದಲ್ಲೇ ಮರ ಗಿಡ ಬೆಳೆಸಿ ಖುಷಿ ಪಡಬೇಕು. ಇಂಥ ಪ್ರದೇಶಕ್ಕೆ ಬೋನ್ಸಾಯಿ ವರದಾನವಾಗಿದೆ. ಈ ಮರಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗಿಲ್ಲ. ಮನೆಯ ಚೆಲುವು ಹೆಚ್ಚಿಸುವುದರ ಜತೆಗೆ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿಯೂ ಸಿಗುತ್ತದೆ.

ಮನೆಯ ಅಂದ ಹೆಚ್ಚಿಸುವ ಬೋನ್ಸಾಯಿ ಮರಗಳ ಆಯ್ಕೆ ಮತ್ತು ನಿರ್ವಹಣೆಗೆ ಅಷ್ಟೇ ಜಾಗ್ರತೆ ವಹಿಸಬೇಕು. ಬೋನ್ಸಾಯಿ ಮರಗಳು ಮೂಲ ತಳಿಗಳಿಂದ ಕುಬ್ಜವಾದವಲ್ಲ. ಆದರೆ ಅವುಗಳನ್ನು ಕೆಲವು ತಂತ್ರ ಮತ್ತು ಬೆಳೆಸುವ ವಿಧಾನಗಳಿಂದ ಕುಬ್ಜವಾಗಿ ಬೆಳೆಯುವಂತೆ ಮಾಡಲಾಗುತ್ತದೆ. ಮೂಲ ಮರಗಳು ಎಷ್ಟು ವರ್ಷ ಬೆಳೆಯುತ್ತವೆಯೋ ಅಷ್ಟೇ ಕಾಲ ಬೋನ್ಸಾಯಿಗಳೂ ಬೆಳೆಯುತ್ತವೆ.

ಗಿಡಗಳ ಆಯ್ಕೆ
ಬೋನ್ಸಾಯಿ ಗಿಡಗಳಲ್ಲಿ ಫಿಕಸ್, ಜ್ಯೂನಿಪರ್ ಮತ್ತು ಚೈನ್ಸ್ ಎಲ್ಮ್ ಎಂಬ ಎಂಬ ಮೂರು ವಿಧಗಳಿವೆ. ಇವನ್ನು ಆಯ್ಕೆ ಮಾಡುವಾಗ ಮನೆ ಇರುವ ಭೌಗೋಳಿಕ ಪ್ರದೇಶದ ಬಗ್ಗೆ ತಿಳಿದುಕೊಳ್ಳಬೇಕು. ಈ ಪ್ರದೇಶದ ವಾತಾವರಣ ಬಹಳ ಮುಖ್ಯ. ಸಾಮಾನ್ಯವಾಗಿ ಹೆಚ್ಚಿನ ಜನ ಸಣ್ಣ ಎಲೆಗಳಿರುವ ಮರಗಳನ್ನೇ ಆಯ್ಕೆ ಮಾಡುತ್ತಾರೆ. ಕಾರಣ ಇವುಗಳನ್ನು ನಿರ್ವಹಣೆ ಮಾಡುವುದು ಸುಲಭ.

ಬೋನ್ಸಾಯಿ ಸಸಿಗಳಿಗೆ ‘ಪ್ರಿ ಬೋನ್ಸಾಯಿ’ ಎಂದು ಕರೆಯುತ್ತಾರೆ. ಇದು ಎಷ್ಟು ಆರೋಗ್ಯವಾಗಿರುತ್ತದೊ ಅಷ್ಟು ಚೆನ್ನಾಗಿ ಬೆಳೆಯುತ್ತದೆ. ಕೆಲವು ಬಾರಿ ಬೀಜದಿಂದಲೂ ಸಸಿ ಮಾಡಬಹುದು. ಕೆಲವರು ಪೂರ್ಣ ಪ್ರಮಾಣದಲ್ಲಿ ಬೆಳೆದ ಬೋನ್ಸಾಯಿ ಖರೀದಿ ಮಾಡುತ್ತಾರೆ. ಕೆಲವು ನರ್ಸರಿಗಳಲ್ಲಿ ಇವನ್ನು ಅಚ್ಚುಕಟ್ಟಾಗಿ ಬೆಳೆಸಿರುತ್ತಾರೆ. ಅವರು ನೀಡುವ ಎಚ್ಚರಿಕೆಗಳನ್ನು ಕಟ್ಟನಿಟ್ಟಾಗಿ ಪಾಲಿಸಿ ಮನೆಯಲ್ಲಿ ಇಟ್ಟು ಬೆಳೆಸಬೇಕು.

ಕತ್ತರಿಸುವ ಮುನ್ನ
ಬೋನ್ಸಾಯಿ ಗಿಡಗಳನ್ನು ಆಗಾಗ ಕತ್ತರಿಸುವುದು ಅಗತ್ಯ. ಕೆಳಗೆ ಹೆಚ್ಚು ರೆಂಬೆಗಳು ಮಧ್ಯದಲ್ಲಿ ಸ್ವಲ್ಪ ಕಡಿಮೆ, ಮೇಲ್ಭಾಗದಲ್ಲಿ ಸ್ವಲ್ಪವೇ ರೆಂಬೆ ಇರುವಂತೆ ಕತ್ತರಿಸಿದರೆ ಗಿಡದ ಅಂದ ಹೆಚ್ಚುತ್ತದೆ. ಬೆಳವಣಿಗೆಯೂ ವೃದ್ಧಿಯಾಗುತ್ತದೆ.

ಕೆಲ ಮರಗಳನ್ನು ಕತ್ತರಿಸದೆ ಎಳೆದು ದಾರದ ಮೂಲಕ ಕಟ್ಟುತ್ತಾರೆ. ಇದರಿಂದ ಅದರ ಟೊಂಗೆಗಳು ಸರಿಯಾದ ದಿಕ್ಕಿಗೆ ಬೆಳೆಯುತ್ತವೆ. ಈ ಎರಡೂ ಕೆಲಸಗಳು ಸರಿಯಾಗಿ ತಿಳಿದಿದ್ದರೆ ಮಾಡಬೇಕು. ಇಲ್ಲದಿದ್ದರೆ ತೋಟಗಾರಿಕೆಯಲ್ಲಿ ಅನುಭವ ಇರುವವರ ಬಳಿ ಸಲಹೆ ಪಡೆಯಬೇಕು. ಕತ್ತರಿಸುವುದು ಮತ್ತು ದಾರದ ಮೂಲಕ ಎಳೆಯುವುದರ ಮೂಲ ಉದ್ದೇಶ ಮೂಲ ತಳಿಯ ಮರ ಹೇಗೆ ಬೆಳೆಯುತ್ತದೊ ಹಾಗೆ ಬೋನ್ಸಾಯಿ ಯನ್ನೂ ಬೆಳೆಸುವುದು.

ಮಣ್ಣಿನ ಬಳಕೆ
ಗಿಡಗಳನ್ನು ನೆಡುವಾಗ ಕುಂಡದಲ್ಲಿ ಫಲವತ್ತಾದ ಮಣ್ಣು ತುಂಬಬೇಕು. ಯಾವ ಮರಗಳಿಗೆ ಎಷ್ಟು ಬೇಕು ಅಷ್ಟು ಗೊಬ್ಬರ ಹಾಕಬೇಕು. ಇಲ್ಲಿ ಕುಂಡಗಳ ಆಯ್ಕೆಯೂ ಅಷ್ಟೇ ಮುಖ್ಯ. ಸುಲಭವಾಗಿ ಒಡೆದು ಹೋಗುವ ಕುಂಡಗಳು ಬೇಡವೇ ಬೇಡ. ಕೆಲ ಮರಗಳ ಬೇರು ದಟ್ಟವಾಗಿ ಬೆಳೆಯುತ್ತವೆ.

ಗೊಬ್ಬರ ಮತ್ತು ನೀರು
ಬೋನ್ಸಾಯಿಗಳಿಗೆ ಸರಿಯಾದ ರೀತಿಯಲ್ಲಿ ಗೊಬ್ಬರ ಮತ್ತು ನೀರು ಉಣಿಸಬೇಕು. ವೇಗವಾಗಿ ಬೆಳೆಯಲಿ ಎಂದು ಕೈಗೆ ಸಿಕ್ಕ ಗೊಬ್ಬರವನ್ನು ಬೇಕಾಬಿಟ್ಟಿಯಾಗಿ ಹಾಕಿದರೆ ಅದು ಮಾರಕವಾಗಬಹುದು. ಬೋನ್ಸಾಯಿ ಗಿಡಗಳಿಗೆಂದೇ ಸೂಕ್ತ ಗೊಬ್ಬರ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅದನ್ನೇ ಬಳಸುವುದು ಸೂಕ್ತ. ನೀರು ಉಣಿಸಬೇಕು ಎಂದು ಜಲಾವೃತವಾಗುವಂತೆ ಮಾಡಬಾರದು. ಹೀಗೆ ಮಾಡುವುದರಿಂದ ಬೇರು ಕೊಳೆಯಬಹುದು.

ಎಲ್ಲಿ ಇಡಬೇಕು
ಬೋನ್ಸಾಯಿ ಮನೆಯ ಅಂದ ಹೆಚ್ಚಿಸುತ್ತದೆ ಎಂದ ಮಾತ್ರಕ್ಕೆ ಅದನ್ನು ಎಲ್ಲೆಂದರಲ್ಲಿ ಇಡಲು ಸಾಧ್ಯವಿಲ್ಲ. ಕೆಲ ಒಳಾಂಗಣ ಸಸಿಗಳು ನೆರಳಿನಲ್ಲಿ ಬೆಳೆಯುತ್ತವೆ. ಆದರೆ ಕೆಲ ಬೋನ್ಸಾಯಿ ಸಸಿಗಳಿಗೆ ಸೂರ್ಯನ ಬಿಸಿಲು ಬೇಕು. ಆದ್ದರಿಂದ ಕತ್ತಲೆಯಲ್ಲಿ ಇಡಬಾರದು. ಸಾಕಷ್ಟು ಗಾಳಿ, ಬೆಳಕು ಇರುವ ಸ್ಥಳದಲ್ಲಿಯೇ ಇಡಬೇಕು. ಕುಂಡ ಇಟ್ಟ ಜಾಗದಲ್ಲಿ ತೇವಾಂಶ/ಉಷ್ಣಾಂಶ ಗಮನಿಸುತ್ತಿರಬೇಕು.

ಎಲ್ಲಿ ಸಿಗುತ್ತವೆ
ಬೋನ್ಸಾಯಿ ಮರಗಳನ್ನು ಖಾಸಗಿಯವರು ಬೆಳೆಸುವ ನರ್ಸರಿಗಳಿಂದಲೂ ಖರೀದಿಸಬಹುದು. ಲಾಲ್ಬಾಗ್ನಲ್ಲಿಯೂ ಬೋನ್ಸಾಯಿ ಲಭ್ಯ. ₹400 ರಿಂದ ₹2000ದವರೆಗೆ ಧಾರಣೆ ಇದೆ. ಲಾಲ್ಬಾಗ್ನಲ್ಲಿ ಬೋನ್ಸಾಯಿಗಳಿಗಾಗಿ ಪ್ರತ್ಯೇಕ ವಿಭಾಗವೇ ಇದೆ.

ಆಯ್ಕೆ ಬಹುಮುಖ್ಯ
ನಮ್ಮಲ್ಲಿ ಹಲವು ರೀತಿಯ ಬೋನ್ಸಾಯಿಗಳಿವೆ. ಗ್ರಾಹಕರು ಖರೀದಿ ಮಾಡುವ ಮೊದಲು ತಮ್ಮ ಮನೆಗೆ ಎಂಥ ಬೋನ್ಸಾಯಿ ಸೂಕ್ತ ಎಂಬುದನ್ನು ಅರಿತುಕೊಂಡಿರಬೇಕು. ಮನೆಗೆ ಚಂದ ಕಾಣುತ್ತೆ ಎನ್ನುವ ಕಾರಣಕ್ಕೆ ಸಿಕ್ಕ ಸಿಕ್ಕ ಬೋನ್ಸಾಯಿಗಳನ್ನು ತಂದಿಟ್ಟುಕೊಳ್ಳಬಾರದು.

ಮೀಡಿಯಾ, ಪಾಟ್ ಮತ್ತು ನಿರ್ವಹಣೆ ಕಡೆಗೆ ಗಮನ ನೀಡಬೇಕು. ಸುಮ್ಮನೆ ಬೆಳೆಯಲು ಬಿಟ್ಟರೆ ಆಗದು. ಇದು 2 ರಿಂದ 2.5 ಅಡಿ ಎತ್ತರ ಬೆಳೆಯಬೇಕು. ಅದಕ್ಕೊಂದು ಆಕಾರ ಇರಬೇಕು. ಎಲ್ಲ ಗಿಡಗಳೂ ಬೋನ್ಸಾಯಿ ಆಗಲು ಸಾಧ್ಯವಿಲ್ಲ. ಎಲೆಗಳಿರಬೇಕು, ಟೊಂಗೆ ಕಾಣಬೇಕು. ಎರಡು ಕಡ್ಡಿ ಇದ್ದರೆ ಬೋನ್ಸಾಯಿ ಎನಿಸಿಕೊಳ್ಳಲ್ಲ.
–ರಾಜು, ಸ್ವಾಮಿ ನರ್ಸರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.