ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

ಸ್ವಪ್ನ ನಗರಿ

ADVERTISEMENT

ಹಬ್ಬ ಮಾಡಲು ಆಗದವರ ವೃತ್ತಿ ಸಂಕಟ

ತಿದ್ದಿ ಬರೆಯುವ, ಸಮಂಜಸ ಹೆಡ್‌ಲೈನ್ ಕೊಡುವ, ಮಾಹಿತಿ ಸರಿಯಿದೆಯೋ ಇಲ್ಲವೋ ಚುರುಕಾಗಿ ಕಂಡು ಹಿಡಿಯುವ, ಪೇಜ್ ಡಿಸೈನ್ ಮಾಡಲು ಬೇಕಾದ ಸೌಂದರ್ಯ ಪ್ರಜ್ಞೆ ಹೊಂದಿರುವ ಡೆಸ್ಕ್ ಪತ್ರಕರ್ತರು ಬರುಬರುತ್ತಾ ಕಡಿಮೆಯಾಗುತ್ತಿದ್ದಾರೆ. ಚೆನ್ನಾಗಿ ಮಾತಾಡಲು ಬಂದರೂ ಬರೆಯಲು ಬಾರದವರ ಸಂಖ್ಯೆ ಹೆಚ್ಚಾಗುತ್ತಿದೆ. ಬರವಣಿಗೆಯ ಯುಗ ಕಳೆದು ಮಾತುಗಾರಿಕೆಯ ಯುಗ ಮತ್ತೆ ಮರಳಿದೆ ಎಂಬ ವ್ಯಾಖ್ಯಾನ ಸರಿ ಇರಬಹುದು. ಆದರೆ ಡೆಸ್ಕ್ ಕೆಲಸ ಮಾಡಲು ಅವಶ್ಯವಾದ ದಕ್ಷತೆ, ಅರಿವು, ಆಸಕ್ತಿ ಇರುವವರು ಕೂಡ ಪತ್ರಿಕೋದ್ಯಮದಿಂದ ದೂರ ಉಳಿಯುವ ಪ್ರಸಂಗಗಳು ಹೇರಳವಾಗುತ್ತಿವೆ.
Last Updated 3 ನವೆಂಬರ್ 2013, 19:30 IST
ಹಬ್ಬ ಮಾಡಲು ಆಗದವರ ವೃತ್ತಿ ಸಂಕಟ

ಬೆಂಗಳೂರಿನ ಸಂಗೀತಗಾರರ ಮುಂದಿನ ಸವಾಲು

ಕಳೆದ ಎರಡು ಮೂರು ದಶಕಗಳಿಂದ ಬೆಂಗಳೂರಿನ ಸಂಗೀತ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳ ಬಗೆಗಿನ ಪುಟ್ಟ ಟಿಪ್ಪಣಿ ಇದು. ಈ ಬಹುರೂಪಿ ನಗರದಲ್ಲಿ ವಿವಿಧ ಬಗೆಯ ಸಂಗೀತ ಕಿವಿಗೆ ಬೀಳುತ್ತದೆ. ಹೀಗೆ ಸಿಗುವ ಸ್ವದೇಶಿ ಮತ್ತು ವಿದೇಶಿ ಪ್ರಕಾರಗಳ ಬಗ್ಗೆ ಕುತೂಹಲ ಇರುವ ಸಂಗೀತ ಪ್ರೇಮಿಗಳ ಬದಲಾಗುತ್ತಿರುವ ಸಂಗೀತದ ಅಭಿರುಚಿಯನ್ನು ನೀವು ಗಮನಿಸಿರಬಹುದು.
Last Updated 27 ಅಕ್ಟೋಬರ್ 2013, 19:30 IST
ಬೆಂಗಳೂರಿನ ಸಂಗೀತಗಾರರ ಮುಂದಿನ ಸವಾಲು

ವರ್ಕ್‌ಶಾಪ್‌ ಹುಡುಗನ ದುಸ್ಸಾಹಸ

ಮೆಕ್ಯಾನಿಕ್ ಅಂಗಡಿಯಲ್ಲಿ ನಿಮಗೆ ಬೇಕಾದ ಬಿಡಿ ಭಾಗಗಳನ್ನು ಕಡಿಮೆ ಬೆಲೆಗೆ ತಂದು ಕೊಡುವ ಭರವಸೆ ಕೊಟ್ಟರೆ ಸ್ವಲ್ಪ ಹುಷಾರಾಗಿರಿ. ನಿಮ್ಮ ವಾಹನಕ್ಕೆ ಕಳ್ಳ ಮಾಲು ಅಳವಡಿಸುವುದಲ್ಲದೆ, ಆ ಹುಡುಗರು ಏನೇನು ಅನಾಹುತ ಮಾಡಿಕೊಳ್ಳುತ್ತಾರೋ ಯಾರಿಗೆ ಗೊತ್ತು.
Last Updated 20 ಅಕ್ಟೋಬರ್ 2013, 19:30 IST
ವರ್ಕ್‌ಶಾಪ್‌ ಹುಡುಗನ ದುಸ್ಸಾಹಸ

ಕಾಲು ಶತಮಾನ ಪೂರೈಸುತ್ತಿರುವ ಹವ್ಯಾಸಿ ನಾಟಕ ತಂಡ ಸಂಚಯ

ಈಚಿನ ವರ್ಷಗಳಲ್ಲಿ ಹೆಸರು ಮಾಡಿರುವ ಬಹುಪಾಲು ರಂಗಕರ್ಮಿಗಳು ಹೆಗ್ಗೋಡಿನ ನೀನಾಸಂ, ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಹೋಗಿ ನಾಟಕಕಲೆ ಕಲಿತುಬಂದಿದ್ದಾರೆ. ಇಂಥ ವೃತ್ತಿಪರರ ಜೊತೆಜೊತೆಗೇ ಸಂಚಯದಂಥ ರಂಗ ತಂಡಗಳು ಸಕ್ರಿಯವಾಗಿವೆ.
Last Updated 6 ಅಕ್ಟೋಬರ್ 2013, 19:30 IST
ಕಾಲು ಶತಮಾನ ಪೂರೈಸುತ್ತಿರುವ ಹವ್ಯಾಸಿ ನಾಟಕ ತಂಡ ಸಂಚಯ

ಡೂಪ್ಲಿಕೇಟ್ ವಸ್ತುಗಳ ಜಗತ್ತು

ಹೆಸರುವಾಸಿ ಸಂಸ್ಥೆಗಳು ತಯಾರಿಸಿದ ವಸ್ತುಗಳನ್ನು ಅಸಲಿಯಂತೆಯೇ ಕಾಣುವ ರೀತಿ ನಕಲು ಮಾಡಿ ಮಾರುವ ದಂಧೆ ದೊಡ್ಡ ಪ್ರಮಾಣದ್ದು. ಬೆಲೆಯಲ್ಲಿ ಅಷ್ಟು ವ್ಯತ್ಯಾಸವಿರುವುದರಿಂದ ಗಿರಾಕಿಗಳು ನಕಲಿ ಎಂದು ತಿಳಿದೇ ಕೊಳ್ಳುತ್ತಾರೆ. ಬ್ರಾಂಡ್ ಮಾಲಿಗೆ ಹೋಲಿಸಿದರೆ ತುಂಬ ಅಗ್ಗವೆನಿಸುವ ರೆಪ್ಲಿಕಾಗಳಿಗೆ ದೊಡ್ಡ ಮಾರುಕಟ್ಟೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.
Last Updated 29 ಸೆಪ್ಟೆಂಬರ್ 2013, 19:59 IST
ಡೂಪ್ಲಿಕೇಟ್ ವಸ್ತುಗಳ ಜಗತ್ತು

ಅನುವಾದದಲ್ಲಿ ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯನವರ ಶೈಲಿ ಪತ್ರಕರ್ತನ ಕನಸಿನ ಶೈಲಿ. ಡೆಸ್ಕ್ ಕೆಲಸ ಹೆಚ್ಚು ಮಾಡಿರುವ, ವರದಿಗಳನ್ನು ಸರಳಗೊಳಿಸುವ ಸಂಕಟವನ್ನು ಯಾವಾಗಲೂ ಅನುಭವಿಸುವ ನನಗೆ ಸಿದ್ದಲಿಂಗಯ್ಯನವರ ಆತ್ಮಚರಿತ್ರೆಯ ಸುಲಲಿತ ಶೈಲಿ ಹೇಳಲಾರದಷ್ಟು ಖುಷಿ ಕೊಟ್ಟಿತು.
Last Updated 22 ಸೆಪ್ಟೆಂಬರ್ 2013, 19:59 IST
ಅನುವಾದದಲ್ಲಿ ಸಿದ್ದಲಿಂಗಯ್ಯ

ಒಂದು ನಾಟಕ, ಒಂದು ಸಿನಿಮಾ

ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸಲು ಚಿತ್ರವೊಂದನ್ನು ಆಯ್ಕೆ ಮಾಡಲು ನೇಮಕವಾಗಿರುವ ತಂಡ ಲೂಸಿಯಾ ಚಿತ್ರವನ್ನು 20 ಚಿತ್ರಗಳ ಪೈಕಿ ನೋಡುತ್ತದಂತೆ. ಮಾಡಿದ್ದನ್ನೇ ಮಾಡುವ, ಹಿಟ್ ಚಿತ್ರದಲ್ಲಿ ಏನೋ ಗುಪ್ತ ಸೂತ್ರ ಅಡಗಿದೆ ಎಂದು ನಂಬುವ ಚಿತ್ರರಂಗದಲ್ಲಿ ನಿರ್ದೇಶಕ ಪವನ್ ಕುಮಾರ್ ಮಾಡಿರುವ ಸಾಹಸ ದೊಡ್ಡದು.
Last Updated 15 ಸೆಪ್ಟೆಂಬರ್ 2013, 19:59 IST
ಒಂದು ನಾಟಕ, ಒಂದು ಸಿನಿಮಾ
ADVERTISEMENT

ಐಐಎಂ ಕೋರ್ಸ್ನಲ್ಲಿ ಭಟ್ಟರು

‘ಮುಂಗಾರು ಮಳೆ’ ನೋಡಿ ಇಷ್ಟ ಪಟ್ಟ ಪ್ರೇಕ್ಷಕ ಇಂದು ಕೆಲಸ, ಟಾರ್ಗೆಟ್, ಗರ್ಲ್‌ಫ್ರೆಂಡ್, ಮದುವೆ ಗೊಂದಲದಲ್ಲಿ ಬಿದ್ದಿರುತ್ತಾನೆ. ಸಿನಿಮಾ ನೋಡಲು ಅವನಿಗೆ ಸಮಯವಿರುವುದಿಲ್ಲ. ಮತ್ತೊಮ್ಮೆ ಅದೇ ಪ್ರೇಕ್ಷಕನಿಗೆ ಸಿನಿಮಾ ಮಾಡಿದರೆ ಓಡುವುದಿಲ್ಲ ಎಂಬುದು ಭಟ್ಟರ ತರ್ಕ. ಆ ಪ್ರೇಕ್ಷಕನ ತಮ್ಮನಿದ್ದರೆ ಅವನಿಗೆ ಚಿತ್ರ ಮಾಡಬೇಕು. ಅವನು ಚಿತ್ರದ ಬಗ್ಗೆ ಮಾತಾಡಿ, ಅದರ ಹಾಡು ಮತ್ತೆ ಮತ್ತೆ ಕೇಳಿ, ಮನೆ ಮಂದಿಯನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಬಲ್ಲ ಎಂಬುದು ಭಟ್ಟರ ಅನಿಸಿಕೆ.
Last Updated 8 ಸೆಪ್ಟೆಂಬರ್ 2013, 19:59 IST
ಐಐಎಂ ಕೋರ್ಸ್ನಲ್ಲಿ ಭಟ್ಟರು

ಸಿನಿಮಾದಲ್ಲಿ ನುಸುಳುತ್ತಿರುವ ಸಮಕಾಲೀನ ಚರಿತ್ರೆ

ಕಳೆದ ಕೆಲವು ತಿಂಗಳ ಚಿತ್ರಗಳನ್ನು ಗಮನಿಸಿದರೆ, ಅಣ್ಣಾ ಹಜಾರೆ, ದಾವೂದ್ ಇಬ್ರಾಹಿಂ, ರಾಜೀವ್ ಗಾಂಧಿ, ಪ್ರಭಾಕರನ್ ಮುಂತಾದವರ ಜೀವನದಿಂದ ಆಯ್ದ ಘಟನೆಗಳು ತೆರೆಯ ಮೇಲೆ ಕಂಡುಬರುತ್ತಿವೆ. ಕಾನೂನು, ಮಾನನಷ್ಟದ ತಕರಾರುಗಳನ್ನು ತಡೆಯುವ ಸಲುವಾಗಿ ಇಂಥ ಚಿತ್ರಗಳು ಯಾವುದೇ ವ್ಯಕ್ತಿ ಅಥವಾ ನಿಜ ಜೀವನದ ಘಟನೆಗೆ ಹೊಲಿಕೆಯಿದ್ದಲ್ಲಿ ಅದು ಆಕಸ್ಮಿಕ ಎಂದು ಘೋಷಿಸಿಕೊಳ್ಳುತ್ತವೆ.
Last Updated 1 ಸೆಪ್ಟೆಂಬರ್ 2013, 19:59 IST
ಸಿನಿಮಾದಲ್ಲಿ ನುಸುಳುತ್ತಿರುವ ಸಮಕಾಲೀನ ಚರಿತ್ರೆ

ಬೆಂಗಳೂರಿನ ಸಂಧಿಗಳಲ್ಲಿ ಅಡಗಿರುವ ನಾಟಿ ವೈದ್ಯರು

ಬ್ರಿಟಿಷರ ಕಾಲದಲ್ಲಿ ಬೆಂಗಳೂರಿಗೆ ಬಂದ ಯುರೋಪಿಯನ್ ವೈದ್ಯರು ಇಲ್ಲಿನ ನಾಟಿ ವೈದ್ಯರ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು ಎಂದು ಸೂಚಿಸುವ ದಾಖಲೆಗಳು ಹಲವು ಇವೆ ಎಂದು ನಿಮ್ಹಾನ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಡಾ. ರಾಧಿಕಾ ಹೇಳುತ್ತಾರೆ. ಯುರೋಪಿಯನ್ ಪದ್ಧತಿ ಇಲ್ಲಿಂದ ಹಲವು ವಿಷಯಗಳನ್ನು ಎರವಲು ಪಡೆಯಿತು ಎಂದು ಅವರು ಹೇಳುತ್ತಾರೆ.
Last Updated 25 ಆಗಸ್ಟ್ 2013, 19:59 IST
ಬೆಂಗಳೂರಿನ ಸಂಧಿಗಳಲ್ಲಿ ಅಡಗಿರುವ ನಾಟಿ ವೈದ್ಯರು
ADVERTISEMENT