ಭಾನುವಾರ, 9–1–1994

7
ಭಾನುವಾರ

ಭಾನುವಾರ, 9–1–1994

Published:
Updated:

ಪ್ರಧಾನಿಗೆ ನಾಳೆ ಡಾ.ಮಿಶ್ರಾ ‘ವಸ್ತುನಿಷ್ಠ’ ವರದಿ ಸಲ್ಲಿಕೆ

ಬೆಂಗಳೂರು, ಜ. 8– ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟು ಪರಿಹರಿಸುವ ಸಲುವಾಗಿ ವೀಕ್ಷಕರಾಗಿ ಬಂದಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು, ಎಐಸಿಸಿ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಜನವರಿ 10ರಂದು ವರದಿ ಸಲ್ಲಿಸಲಿದ್ದಾರೆ.

ಹೈಕಮಾಂಡ್ ಮುಂದೆ ನಿಪ್ಷಕ್ಷಪಾತ, ವಸ್ತುನಿಷ್ಠ ಹಾಗೂ ನ್ಯಾಯಯುತವಾದ ವರದಿಯನ್ನು ಸಲ್ಲಿಸುವುದಾಗಿ ಮಿಶ್ರಾ ಅವರು ಇಂದು ತಮ್ಮನ್ನು ಭೇಟಿ ಮಾಡಿದ ವರದಿಗಾರರಿಗೆ ತಿಳಿಸಿದರು.

ಕಂಚಿ ಪರಮಾಚಾರ್ಯರ ಪರಂಧಾಮ

ಮದರಾಸ್, ಜ. 8 (ಪಿಟಿಐ)– ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಅವರು ಇಂದು ಮಧ್ಯಾಹ್ನ ಪರಂಧಾಮವನ್ನು ಪಡೆದರು.

ಕೆಲವು ಕಾಲದಿಂದ ಅಸ್ವಸ್ಥರಾಗಿದ್ದು ಭಕ್ತರಿಗೆ ದರ್ಶನ ಕೊಡುವುದನ್ನು ನಿಲ್ಲಿಸಿದ್ದ 101 ವರ್ಷ ವಯಸ್ಸಿನ ಪರಮಾಚಾರ್ಯರ ಅಂತ್ಯ ಮಠದ ಆವರಣದಲ್ಲೇ ಆಯಿತು. ಇತ್ತೀಚೆಗೆ ಅವರ ಶತಾಬ್ಧಿಯನ್ನು ವೈಭವದಿಂದ ಆಚರಿಸಿ, ಕನಕಾಭಿಷೇಕ ನಡೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !