ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಭಾನುವಾರ 26–2–1995

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ರೈಲಿನಲ್ಲಿ ಬಾಂಬ್‌ ಸ್ಫೋಟ 40 ಸೈನಿಕರ ಸಾವು

ಗುವಾಹಟಿ, ಫೆ. 25 (ಯುಎನ್‌ಐ, ಪಿಟಿಐ)– ಅಸ್ಸಾಂನ ಲುಮ್ಡಿಂಗ್‌ ಸಮೀಪದ ನಿಲೊಂಗ್‌ ರೈಲು ನಿಲ್ದಾಣದೊಳಗೆ ಇಂದು ಬೆಳಗಿನ ಜಾವ ಬ್ರಹ್ಮಪುತ್ರಾ ಮೇಲ್‌ ರೈಲಿನ ದ್ವಿತೀಯ ದರ್ಜೆ ಬೋಗಿಯಲ್ಲಿ ಎರಡು ಪ್ರಬಲ ಬಾಂಬ್‌ ಸ್ಫೋಟಿಸಿ ಸೇನೆ ಮತ್ತು ಕೇಂದ್ರೀಯ ಮೀಸಲು ಪಡೆಯ 26 ಯೋಧರು ಸತ್ತು ಸುಮಾರು 25 ಮಂದಿ ಗಾಯಗೊಂಡರು. ಆದರೆ ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 40.

ಬೆಳಗಿನ ಜಾವ ಐದು ಗಂಟೆಗೆ ಒಂದಾದ ಮೇಲೊಂದು ಬಾಂಬ್‌ ಸ್ಫೋಟಿಸಿದ ಕೂಡಲೇ ಎಂಜಿನ್‌ಗೆ ಹತ್ತಿರವಿದ್ದ ರಕ್ಷಣಾ ಪಡೆಯವರು ತುಂಬಿದ್ದ ಬೋಗಿ ಚೂರು ಚೂರಾಯಿತು. ಬಾಂಬ್‌ ಸ್ಫೋಟದ ನಂತರ ಹೊತ್ತಿಕೊಂಡ ಬೆಂಕಿಯಲ್ಲಿ ಬೋಗಿ ಪೂರ್ಣ ಉರಿದುಹೋಯಿತು.

ಮಣಿಪುರ– ಕಾಂಗೈ ಸರ್ಕಾರ ಅಸ್ತಿತ್ವಕ್ಕೆ

ಇಂಫಾಲ್‌, ಫೆ. 25 (ಪಿಟಿಐ)– ರಿಷಾಂಗ್‌ ಕೀಷಿಂಗ್‌ ನೇತೃತ್ವದ ಮೂವರು ಸದಸ್ಯರ ಸಚಿವ ಸಂಪುಟ ಇಂದು ಪ್ರಮಾಣ ವಚನ ಸ್ವೀಕರಿಸುವುದರೊಡನೆ ಮಣಿಪುರದ ರಾಜಕೀಯ ಸಂದಿಗ್ಧತೆ ಅಂತ್ಯಗೊಂಡಿತು.

ಚುನಾವಣೆಯಲ್ಲಿ ಕಾಂಗೈ ಪಕ್ಷ ಅತಿ ದೊಡ್ಡ ಏಕೈಕ ಪಕ್ಷವಾಗಿ ಮೂಡಿರುವುದರಿಂದ ತಾವು ಆ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾಗಿ ರಾಜ್ಯಪಾಲ ಒ.ಎನ್.ಶ್ರೀವಾತ್ಸವ ಅವರು ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT