ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾನುವಾರ 5–3–1995

Last Updated 4 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಕಡತಗಳಲ್ಲೇ ತಣ್ಣಗಿರುವ 32 ವಿದ್ಯುತ್‌ ಯೋಜನೆ
ನವದೆಹಲಿ, ಮಾರ್ಚಿ 4– ಚುನಾವಣೆಗಳು ಬರುತ್ತವೆ ಹೋಗುತ್ತವೆ. ಕಳೆದ ಒಂದು ದಶಕದಿಂದ ಜನತಾದಳ ಮತ್ತು ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿವೆ, ಹೋಗುತ್ತಿವೆ. ಆದರೆ ಕೇಂದ್ರ ಸರ್ಕಾರದ ಮುಂದೆ ಹಲವಾರು ವರ್ಷಗಳಿಂದ ಒಪ್ಪಿಗೆಗೆ ಕಾದು ಕುಳಿತಿರುವ 22 ಪ್ರಮುಖ ಹಾಗೂ 10 ಸಣ್ಣಪುಟ್ಟ ವಿದ್ಯುತ್‌ ಯೋಜನೆಗಳು ಮಾತ್ರ ಇನ್ನೂ ನನೆಗುದಿಯಲ್ಲೇ ಬಿದ್ದಿವೆ.

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದ್ದರೂ, ಈ ಹಿಂದೆ ಕರ್ನಾಟಕದಲ್ಲಿ ಇದ್ದ ಅದೇ ಪಕ್ಷದ ರಾಜ್ಯ ಸರ್ಕಾರ ಈ ಯೋಜನೆಗಳಲ್ಲಿ ಒಂದನ್ನಾದರೂ ಮಂಜೂರಾತಿ ಮಾಡಿಸಿಕೊಳ್ಳಲು ಆಗಲಿಲ್ಲ. ತಿಂಗಳಿಗೆ ನಾಲ್ಕೈದು ಬಾರಿ ಆಗಿನ ಮುಖ್ಯಮಂತ್ರಿಗಳು ಮತ್ತು ಸಚಿವರು ದೆಹಲಿಗೆ ಹೋದರು. ಅವರ ಬಹುತೇಕ ಭೇಟಿಗಳ ಉದ್ದೇಶ ಪಕ್ಷದ ಒಳಜಗಳ ನಿವಾರಣೆಗೆ ವರಿಷ್ಠರ ನ್ಯಾಯ ಕೇಳುವುದು. ಹಾಗಾಗಿ ಮಂಜೂರಾತಿಗೆ ಕಾದು ಕುಳಿತ ಯೋಜನೆಗಳು ಕೇವಲ ಸಂಬಂಧಪಟ್ಟ ಸಚಿವಾಲಯಗಳ ಕೆಂಪು ಪಟ್ಟಿ ಕಡತಗಳಲ್ಲೇ ದೂಳು ತಿನ್ನುವಂತಾಯಿತು.

ಗಿನ್ನಿಸ್‌ ದಾಖಲೆ
ಮದ್ರಾಸ್‌, ಮಾರ್ಚಿ (ಯುಎನ್‌ಐ)– ಆರು ಸಾಗರಗಳನ್ನು ಈಜಿ ಸಾಹಸ ಮಾಡಿರುವ 13 ವರ್ಷದ ಹುಡುಗ ವೀರಭದ್ರನ್‌ ಕುಟ್ರಾಲೀಶ್ವರನ್‌ ಗಿನ್ನಿಸ್‌ ದಾಖಲೆಗೆ ಸೇರಿದ್ದಾನೆ.

ಸಾಧನೆಯನ್ನು ಹಿಂದಕ್ಕಟ್ಟಿ ಗಿನ್ನಿಸ್‌ ದಾಖಲೆಯಲ್ಲಿ ಸೇರಿರುವ ಪ್ರಮಾಣಪತ್ರ ಪಡೆದಿರುವುದಾಗಿ ಆತನ ತಂದೆ ಎಸ್‌.ವಿ. ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT