ಭಾನುವಾರ, ಜೂನ್ 7, 2020
28 °C

25 ವರ್ಷಗಳ ಹಿಂದೆ | ಬುಧವಾರ 3, ಮೇ 1995

25 years ago Updated:

ಅಕ್ಷರ ಗಾತ್ರ : | |

ಬಡ್ಡಿ ಮನ್ನಾದಿಂದ ರೈತರ ಹಿತಕ್ಕೆ ಧಕ್ಕೆ–ಮನಮೋಹನ್‌ 

ನವದೆಹಲಿ, ಮೇ 2– ಸಾಲ ವ್ಯವಸ್ಥೆ ಮತ್ತು ಸಾಲ ಮರುಪಾವತಿ ನೀತಿಯನ್ನು ದುರ್ಬಲಗೊಳಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳದು. ಈ ವ್ಯವಸ್ಥೆಯನ್ನು ಬದಿಗೊತ್ತಿ ಸಾಲ ಅಥವಾ ಬಡ್ಡಿ ಮನ್ನಾ ಮಾಡುವುದರಿಂದ ಕೃಷಿಕರ ಹಿತಕ್ಕೆ ಅಂತಿಮವಾಗಿ ಹಾನಿಯಾಗುವುದು ಎಂದು ಹಣಕಾಸು ಸಚಿವ ಡಾ.ಮನಮೋಹನ್‌ ಸಿಂಗ್‌ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು. 

ಕರ್ನಾಟಕದಲ್ಲಿನ ಸಹಕಾರಿ ಸಂಸ್ಥೆಗಳಿಗೆ ನಬಾರ್ಡ್‌ ಪುನರ್‌ಧನ ನಿಲ್ಲಿಸಿದ ಸಂಬಂಧ ಕಾಂಗ್ರೆಸ್ಸಿನ ಕೆ.ರೆಹಮಾನ್‌ ಖಾನ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಬಡ್ಡಿ ಮನ್ನಾ ಕ್ರಮವು ಬ್ಯಾಂಕ್‌ ವ್ಯವಹಾರ ನೀತಿನಿಯಮಗಳಿಗೆ ವಿರುದ್ಧವಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.