ಭಾನುವಾರ, ಜೂನ್ 7, 2020
28 °C

25 ವರ್ಷಗಳ ಹಿಂದೆ | ಶುಕ್ರವಾರ, 5 ಮೇ1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ ಬಳಿ ದರೋಡೆ: ಟ್ರಕ್‌ ಚಾಲಕನ ಕೊಲೆ

ಹುಬ್ಬಳ್ಳಿ, ಮೇ 4– ಇಲ್ಲಿಗೆ ಸಮೀಪದ ಕಲಘಟಗಿಯ ದೇವಿಕೊಪ್ಪದ ಜುಂಜನಬೈಲು ಬಳಿ ಮುಂಬೈಯಿಂದ ಹುಬ್ಬಳ್ಳಿ ಮೂಲಕವಾಗಿ ಮಂಗಳೂರಿಗೆ ಹೊರಟಿದ್ದ ಖಾಸಗಿ ಲಕ್ಷುರಿ ಬಸ್ಸು ಮತ್ತು ಆರು ಲಾರಿಗಳ ಮೇಲೆ ಬುಧವಾರ ರಾತ್ರಿ ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿದ ದರೋಡೆಕೋರರು, ಕೇರಳದ ಒಬ್ಬ ಟ್ರಕ್‌ ಚಾಲಕನನ್ನು ಸ್ಥಳದಲ್ಲೇ ಕೊಂದು, ಸುಮಾರು 13ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿ, ಭಾರೀ ಮೊತ್ತದ ಚಿನ್ನಾಭರಣ, ನಗದು ಮತ್ತಿತರ ಸೊತ್ತುಗಳನ್ನು ಲೂಟಿ ಮಾಡಿದ್ದಾರೆ.

ರಾತ್ರಿ ಸುಮಾರು 10.30ರ ನಂತರ ಈ ದರೋಡೆ ಸಂಭವಿಸಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ 13 ಜನರ ಪೈಕಿ 6 ಮಂದಿಯನ್ನು ನಗರದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

ನಗರ ಸಂಚಾರ ಯೋಜನೆ ಜಮೀನು ನೀಡಲು ಒಪ್ಪಿಗೆ

ನವದೆಹಲಿ, ಮೇ 4– ಬೃಹದಾಕಾರವಾಗಿ ಬೆಳೆದು ತೀವ್ರ ಸಂಚಾರ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಸಂಚಾರದ ಒತ್ತಡಕ್ಕೆ ನಿಯಂತ್ರಣ ಹಾಕುವ ಮಹತ್ವಾಕಾಂಕ್ಷೆಯ ಸಾಮೂಹಿಕ ಕ್ಷಿಪ್ರ ಸಂಚಾರ ಯೋಜನೆಗೆ ನೆರವಾಗಲು ಪ್ರಮುಖ ಪ್ರದೇಶಗಳಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆ ಹೊಂದಿರುವ ನಿವೇಶನವನ್ನು ಪಡೆಯುವಲ್ಲಿ ಕರ್ನಾಟಕ ಸರ್ಕಾರ ಇಂದು ಯಶಸ್ವಿಯಾಯಿತು.

ಇದಕ್ಕೆ ಪ್ರತಿಯಾಗಿ ಸರ್ಕಾರವು ಯಲಹಂಕದ ಬಳಿ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಕ್ಕೆ 300 ಎಕರೆ ಭೂಮಿ ನೀಡಲು ಒಪ್ಪಿಗೆ ಕೊಟ್ಟಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.