ಸೋಮವಾರ, ಜೂನ್ 1, 2020
27 °C

25 ವರ್ಷಗಳ ಹಿಂದೆ| ಶನಿವಾರ, 20–5–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ವ್ಯವಸ್ಥೆ ಪುನರ್‌ರಚನೆಗೆ ಏಕಸದಸ್ಯ ಆಯೋಗ ರಚನೆ

ಬೆಂಗಳೂರು, ಮೇ 19– ರಾಜ್ಯದ ಪೊಲೀಸ್‌ ವ್ಯವಸ್ಥೆಯನ್ನು ಇಡಿಯಾಗಿ ಪುನರ್‌ರಚಿಸಲು ಸರ್ಕಾರ ಉದ್ದೇಶಿಸಿದ್ದು ಇದಕ್ಕೆ ಅಗತ್ಯವಿರುವ ಸಲಹೆ– ಸೂಚನೆ ನೀಡಲೆಂದು ಏಕಸದಸ್ಯ ಆಯೋಗವನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಾರ್ತಾ ಮತ್ತು ಕಾನೂನು ಸಚಿವ ಎಂ.ಸಿ.ನಾಣಯ್ಯ ಇಂದು ಇಲ್ಲಿ ತಿಳಿಸಿದರು.

ಪೊಲೀಸ್‌ ಇಲಾಖೆಯ ವಿವಿಧ ಹಂತಗಳಲ್ಲಿ, ವಿವಿಧ ವಿಭಾಗಗಳಲ್ಲಿ ಸಮನ್ವಯತೆಯದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರೋಪಾಯ ಸೂಚಿಸುವುದೂ ಈ ಆಯೋಗದ ಕಾರ್ಯ ಷರತ್ತುಗಳಲ್ಲಿ ಒಂದಾಗಿದೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

ಕಾಂಗೈ ಎರಡು ಹೋಳು ತಿವಾರಿಗೆ ಅಧ್ಯಕ್ಷ ಪಟ್ಟ

ನವದೆಹಲಿ, ಮೇ 19 (ಯುಎನ್‌ಐ, ಪಿಟಿಐ)– ಭಿನ್ನಮತೀಯರ ರ‍್ಯಾಲಿ ಇಂದು ಎನ್‌.ಡಿ.ತಿವಾರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಎರಡು ಹೋಳಾಯಿತು.

ಪ್ರಧಾನಿ ಪಿ.ವಿ.ನರಸಿಂಹರಾವ್‌ ನೇತೃತ್ವದ ಕಾಂಗೈ ನಾಯಕತ್ವ ‘ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲ’ ಎಂದು ಆರೋಪಿಸಿರುವ ಪಕ್ಷದ ಭಿನ್ನಮತೀಯರು, ಅವರ ವಿರುದ್ಧ ಬಹಿರಂಗ ಸಮರವನ್ನೇ ಸಾರಿದ್ದು, ತಾವೇ ನಿಜವಾದ ಕಾಂಗ್ರೆಸ್ಸಿಗರು ಎಂದು ಘೋಷಿಸಿಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.