ಬುಧವಾರ, ಅಕ್ಟೋಬರ್ 21, 2020
24 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 14-10-1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷರೀಫ್ ಕೈ ತಪ್ಪಿದ ರೈಲ್ವೆ ಖಾತೆ

ನವದೆಹಲಿ, ಅ. 13– ಲಂಡನ್‌ನಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ನಿನ್ನೆ ತಾನೆ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದ ಸಿ.ಕೆ. ಜಾಫರ್ ಷರೀಫ್ ಅವರಿಂದ ಇಂದು ರೈಲ್ವೆ ಖಾತೆಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಖಾತೆರಹಿತ ಸಚಿವರಾಗಿ ಷರೀಫ್ ಮುಂದುವರಿಯುವರು.

ಇದರಿಂದಾಗಿ ಕೇಂದ್ರ ಸಚಿವ ಸಂಪುಟದಲ್ಲಿನ ಖಾತೆರಹಿತ ಸಚಿವರ ಸಂಖ್ಯೆ ಎರಡಕ್ಕೆ ಏರಿದೆ. ವಿದೇಶಾಂಗ ಸಚಿವರಾಗಿದ್ದ ದಿನೇಶ್ ಸಿಂಗ್ ಪಾರ್ಶ್ವವಾಯು ಪೀಡಿತರಾದ ಬಳಿಕ ಖಾತಾರಹಿತ ಸಚಿವರಾಗಿ ಮುಂದುವರಿದಿದ್ದಾರೆ.

ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ: ಶೀಘ್ರ ಆದೇಶ

ಬೆಂಗಳೂರು, ಅ. 13– ಕರ್ನಾಟಕ ಚಿತ್ರೋದ್ಯಮವನ್ನು ಕೈಗಾರಿಕೆ ಎಂದು ಘೋಷಿಸುವ ಆಜ್ಞೆಯನ್ನು ಸರ್ಕಾರ ಇನ್ನು ಒಂದೆರಡು ದಿನಗಳಲ್ಲಿಯೇ ಹೊರಡಿಸಲಿದೆ ಎಂದು ವಾರ್ತಾಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಇಂದು ಇಲ್ಲಿ ಭರವಸೆ ನೀಡಿದರು.

ಈ ಉದ್ಯಮವನ್ನು ಕೈಗಾರಿಕೆ ಎಂದು ಈ ಹಿಂದೆ ಸರ್ಕಾರವೇ ಘೋಷಿಸಿದೆ. ಆದರೆ ಅದಕ್ಕೆ ಅಗತ್ಯವಾಗಿರುವ ಸರ್ಕಾರಿ ಆಜ್ಞೆ ಮಾತ್ರ ಇನ್ನೂ ಜಾರಿಗೆ ಬಾರದೇ ಇರುವುದರಿಂದಾಗಿ ಉದ್ಯಮಿಗಳಿಗೆ ದೊರೆಯಬೇಕಾದ ಸೌಲಭ್ಯ ಸಿಗದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು