ಶುಕ್ರವಾರ, ಫೆಬ್ರವರಿ 21, 2020
31 °C

25 ವರ್ಷಗಳ ಹಿಂದೆ| ಬುಧವಾರ, 18–1–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈದ್ಗಾ: ಯಥಾಸ್ಥಿತಿ ಪಾಲನೆ– ದೇವೇಗೌಡ

ಬೆಂಗಳೂರು, ಜ. 17– ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಯಥಾಸ್ಥಿತಿ’ ಕಾಪಾಡಲು ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ಇಲ್ಲಿ ನುಡಿದರು.

ಗುರುತಿನ ಚೀಟಿ: ಚುನಾವಣೆ ಆಯೋಗದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ, ಜ. 17 (ಪಿಟಿಐ)– ಮತದಾರರಿಗೆ ಗುರುತಿನ ಚೀಟಿ ನೀಡದಿದ್ದರೆ ಬಿಹಾರ ಮತ್ತು ಒರಿಸ್ಸಾಗಳ ವಿಧಾನಸಭೆ ಚುನಾವಣೆಗಳನ್ನು ನಡೆಸದಿರುವ ಚುನಾವಣೆ ಆಯೋಗದ ನಿರ್ದೇಶನವು ಜಾರಿಗೆ ಬರದಂತೆ ಸುಪ್ರೀಂ ಕೋರ್ಟ್ ಇಂದು ತಡೆಯಿತು.

‌ಈಗ ನಿಗದಿಯಾಗಿರುವಂತೆಬಿಹಾರದಲ್ಲಿ ಚುನಾವಣೆಗಳನ್ನು ನಡೆಸುವುದು ತನಗೆ ಸಾಧ್ಯವಾಗಬೇಕಾದರೆ ಸೆಪ್ಟೆಂಬರ್ 30ರೊಳಗೆ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಚುನಾವಣೆ ಆಯೋಗ ವಿಧಿಸಿರುವ ಷರತ್ತನ್ನು ನ್ಯಾಯಾಲಯ ತಿರಸ್ಕರಿಸಿತು. ಬಿಹಾರ ಮತ್ತು ಒರಿಸ್ಸಾಗಳು ಗುರುತಿನ ಚೀಟಿ ನೀಡುವುದಕ್ಕೆ ಈ ಮುನ್ನ ವಿಧಿಸಿದ್ದ ಗಡುವನ್ನು ಪಾಲಿಸಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅಲ್ಲಿ ಚುನಾವಣೆಗಳನ್ನು
ತಡೆಹಿಡಿಯುವುದಕ್ಕೆ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಶ್ರೇಷ್ಠ ನ್ಯಾಯಾಧೀಶ ಎ.ಎಂ. ಅಹ್ಮದಿ ಅವರ ನೇತೃತ್ವದಲ್ಲಿನ ನ್ಯಾಯಪೀಠ ತೀರ್ಪಿತ್ತಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)