ಸೋಮವಾರ, ಜೂನ್ 1, 2020
27 °C

25 ವರ್ಷಗಳ ಹಿಂದೆ | ಮಂಗಳವಾರ, 18–4–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠೇವಣಿ ಗರಿಷ್ಠ ಬಡ್ಡಿ ದರ ಶೇ 1 ಏರಿಕೆ

ಮುಂಬೈ, ಏ. 17 (ಯುಎನ್‌ಐ, ಪಿಟಿಐ)– ಸಾವಧಿ ಠೇವಣಿ ಮೊತ್ತಕ್ಕೆ ನೀಡಬಹುದಾದ ಗರಿಷ್ಠ ಬಡ್ಡಿ ಪ್ರಮಾಣವನ್ನು ಇಂದು ಶೇಕಡ 1ರಷ್ಟು ಏರಿಸಿದ ರಿಸರ್ವ್‌ ಬ್ಯಾಂಕ್‌, ರಫ್ತು ಸಾಲ ಕುರಿತಂತೆ ಇನ್ನಷ್ಟು ರಿಯಾಯಿತಿ ಪ್ರಕಟಿಸಿತು.

ಜನಪದ ಕಲಾವಿದರಿಗೆ ಪ್ರಶಸ್ತಿಗಿಂತ ಮಾಸಾಶನ ಪ್ರಶಸ್ತ: ಸಲಹೆ

ಬೆಂಗಳೂರು, ಏ. 17– ‘ಒಂದು ದಿನದ ಪ್ರಶಸ್ತಿಗಳನ್ನು ನೀಡಿ ಸರ್ಕಾರ ಜನಪದ ಕಲಾವಿದರನ್ನು ಉದ್ಧಾರ ಮಾಡಬೇಕಾದ ಅಗತ್ಯವಿಲ್ಲ. ಪ್ರಶಸ್ತಿ ನೀಡುವ ಸಂಪ್ರದಾಯದ ಬದಲಿಗೆ ಕಲಾವಿದರಿಗೆ ಮಾಸಾಶನ ಕೊಡುವ ವ್ಯವಸ್ಥೆಯಾದರೆ ಜನಪದ ಕಲೆಗೆ ಜೀವ ಸಂಚಾರವಾದೀತು’ ಎಂದು ಜನಪದ ವಿದ್ವಾಂಸ ಮುದೇನೂರು ಸಂಗಣ್ಣ ಇಂದು ಇಲ್ಲಿ ಕಟುವಾಗಿ ಟೀಕಿಸಿದರು.

ಕನಿಷ್ಠ ಪ್ರಶಸ್ತಿ ದೊರೆತವರಿಗಾದರೂ ಮಾಸಾಶನ ದೊರೆಯುವಂತಾಗಬೇಕು ಎಂದ ಅವರು, ಮಾನವಶಾಸ್ತ್ರದ ಮೂಲದ್ರವ್ಯವಾದ ಜಾನಪದ ವಿಪುಲವಾಗಿ ಬೆಳೆಯಲು ಅಗತ್ಯವಾಗುವಂತೆ ಸರ್ಕಾರ ಮತ್ತು ಅಕಾಡೆಮಿಗಳು ಇಂದು ಸ್ಪಂದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಏರ್ಪಡಿಸಿದ್ದ 1994ರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಾನಪದವೆನ್ನುವುದು ಒಂದು ಜನಾಂಗದ ಅನುಭವದ ಅನಿಸಿಕೆ, ಆತ್ಮಸಾಕ್ಷಿಯ ಪ್ರತೀಕ. ಅದು ನೀಡುವ ಲೋಕದೃಷ್ಟಿ ಅನನ್ಯ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.