ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಶನಿವಾರ, 30–9–1995

Last Updated 29 ಸೆಪ್ಟೆಂಬರ್ 2020, 18:22 IST
ಅಕ್ಷರ ಗಾತ್ರ

ಗುಜರಾತ್‌: ಬಿಜೆಪಿ ವಿಭಜನೆ ಕೇಶುಭಾಯಿ ಉಪವಾಸ

ನವದೆಹಲಿ, ಸೆ. 29 (ಪಿಟಿಐ)– ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷದ ಬಿಕ್ಕಟ್ಟು ಉಲ್ಬಣಿಸಿದ್ದು, ನಾಯಕತ್ವದ ವಿರುದ್ಧ ಬಂಡೆದ್ದ ಸಂಸತ್‌ ಸದಸ್ಯ ಶಂಕರ ಸಿನ್ಹ ವಘೇಲ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆರು ವರ್ಷ ಕಾಲ ವಜಾ ಮಾಡಲಾಗಿದೆ.

ಇಂದು ಬೆಳಿಗ್ಗೆ ವಿದೇಶದಿಂದ ಆಗಮಿಸಿದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ ಅವರು ತಾವು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ನಾಯಕತ್ವದಲ್ಲಿ ಬದಲಾವಣೆ ಇಲ್ಲ ಎಂದು ಪಕ್ಷದ ಹೈಕಮಾಂಡ್‌ ಕೂಡ ಸ್ಪಷ್ಟಪಡಿಸಿದೆ. ಗುಜರಾತ್‌ ವಿದ್ಯಮಾನಗಳನ್ನು
ಎಚ್ಚರಿಕೆಯಿಂದ ಪರಿಶೀಲಿಸಿದ ಪಕ್ಷದ ವರಿಷ್ಠರು ಬಂಡಾಯವನ್ನು ಹತ್ತಿಕ್ಕಲು ವಘೇಲ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಸಾಕು ಮಗನ ವಿವಾಹ ವೆಚ್ಚದ ಲೆಕ್ಕ ಸಲ್ಲಿಸದ ಜಯಲಲಿತಾ

ಮದ್ರಾಸ್‌, ಸೆ. 29 (ಯುಎನ್‌ಐ)– ತಮ್ಮ ಸಾಕು ಮಗ ವಿ.ಎನ್‌.ಸುಧಾಕರನ್‌ ಅವರ ಅದ್ಧೂರಿ ವಿವಾಹದ ವೆಚ್ಚಗಳ ಬಗ್ಗೆ ಲೆಕ್ಕಪತ್ರ ನೀಡುವಂತೆ ಆದಾಯ ತೆರಿಗೆ ಅಧಿಕಾರಿಗಳು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಿದ್ದ ಗಡುವು ಇಂದಿಗೆ ಮುಗಿದಿದ್ದರೂ ಮುಖ್ಯಮಂತ್ರಿ ಯಾವುದೇ ರೀತಿಯ ಉತ್ತರ ನೀಡಿಲ್ಲ.

‘ಸೂಕ್ತ ಸಮಯದಲ್ಲಿ ಸಂಬಂಧಪಟ್ಟವರಿಗೆ ಲೆಕ್ಕ ನೀಡುವುದಾಗಿ’ ಈ ಮುಂಚೆ ಜಯಲಲಿತಾ ಅವರು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT