ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 4–9–1995

Last Updated 3 ಸೆಪ್ಟೆಂಬರ್ 2020, 15:38 IST
ಅಕ್ಷರ ಗಾತ್ರ

ಹೋರಾಟ ಮುನ್ನಡೆ ನಿರ್ಧಾರ

ಬೆಂಗಳೂರು, ಸೆ. 3– ಅಂತರರಾಜ್ಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಲಿಯ ಕಲಾಪ ಬಹಿಷ್ಕರಿಸಬೇಕೆಂಬ ತಮ್ಮ ಬೇಡಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ಒಪ್ಪಲಿಲ್ಲವಾದ್ದರಿಂದ, ಕಾವೇರಿ ಹೋರಾಟ ಮುಂದುವರಿಸಲು ಕನ್ನಡ ಚಳವಳಿಗಾರರು ನಿರ್ಧರಿಸಿದ್ದಾರೆ.

‘ದ್ರೋಣ’ನಿಗೆ ಸ್ವಾಗತ ನಾಡಹಬ್ಬಕ್ಕೆ ನಾಂದಿ

ಮೈಸೂರು, ಸೆ. 3– ಅರಮನೆಯ ಜಯ ಮಾರ್ತಾಂಡ ಮಹಾದ್ವಾರದ ಮೂಲಕ ಸಾಂಪ್ರದಾಯಿಕವಾಗಿ ಆನೆಗಳಿಗೆ ಸ್ವಾಗತ ಕೋರುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಿದ್ದರಾಮಯ್ಯ, ಅಂಬಾರಿ ಹೊರುವ ದ್ರೋಣನಿಗೆ ಪೂರ್ವ ದಿಕ್ಕಿಗಿರುವ ದ್ವಾರದ ಬಳಿ ಹಾರ ಹಾಕಿ ಸ್ವಾಗತಿಸಿದರು.

ಗಜ ಗಾಂಭೀರ್ಯಕ್ಕೆ ಪ್ರಸಿದ್ಧನಾದ ದ್ರೋಣ, ಸಚಿವರು ನೀಡಿದ ಪ್ರೀತಿಪಾತ್ರ ತಿನಿಸಾದ ಕಬ್ಬು–ಬೆಲ್ಲವನ್ನು ರಾಜಠೀವಿಯಿಂದ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಹಾಕಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT