ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಶನಿವಾರ, 22–7–1995

Last Updated 22 ಜುಲೈ 2020, 5:21 IST
ಅಕ್ಷರ ಗಾತ್ರ

ಲೈವ್‌ಬ್ಯಾಂಡ್‌ಗೆ ಕೆಲ ಶಾಸಕರ ಯತ್ನ: ಪೊಲೀಸರ ಕಸಿವಿಸಿ

ಬೆಂಗಳೂರು, ಜುಲೈ 21– ಸಾರ್ವಜನಿಕರ ವಿರೋಧ, ಅಸಹಾಯಕ ಮಹಿಳೆಯರ ಅಳಲು, ಪೊಲೀಸ್‌ ಅಧಿಕಾರಿಗಳ ತೀವ್ರ ಆಕ್ಷೇಪದ ನಡುವೆಯೂ ಲೈವ್‌ಬ್ಯಾಂಡ್‌ಗೆ ಮತ್ತೆ ಅನುಮತಿ ನೀಡಲು ಸರ್ಕಾರ ಪ್ರಯತ್ನಿಸುತ್ತಿರುವುದು ಪೊಲೀಸ್‌ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸಿದೆ.

ನಿಷೇಧಿಸಲಾಗಿರುವ ಲೈವ್‌ಬ್ಯಾಂಡ್‌ ಆರಂಭಿಸಲು ಅನುಮತಿ ನೀಡುವಂತೆ ಜನತಾದಳದ ಶಾಸಕರು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರ ಮೇಲೆ ಒತ್ತಾಯ ಹೇರುತ್ತಿದ್ದಾರೆ ಎನ್ನಲಾಗಿದೆ.

ಲೈವ್‌ಬ್ಯಾಂಡ್‌ಗೆ ಮತ್ತೆ ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವುದೆಂದು ಈಗಾಗಲೇ ಮುಖ್ಯಮಂತ್ರಿಯವರಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ. ಲೈವ್‌ಬ್ಯಾಂಡನ್ನು ನಿಷೇಧಿಸುವಂತೆ ಮುಖ್ಯಮಂತ್ರಿಯವರ ಕಚೇರಿಗೂ ಸಾವಿರಾರು ಪತ್ರಗಳು ಬಂದಿವೆ.

ತುಂಬಿ ತುಳುಕುತ್ತಿರುವ ಹಾರಂಗಿ ಜಲಾಶಯ

ಮಡಿಕೇರಿ, ಜುಲೈ 21– ಜಲಾನಯನ ಪ್ರದೇಶದಲ್ಲಿ ಬಿದ್ದ ಧಾರಾಕಾರ ಮಳೆಯಿಂದ ತುಂಬಿ ತುಳುಕುತ್ತಿರುವ ಹಾರಂಗಿ ಜಲಾಶಯ ತನ್ನ ನಾಲ್ಕೂ ಬಾಗಿಲುಗಳನ್ನು ಸ್ವಲ್ಪ ಮಟ್ಟಿಗೆ ತೆರೆದುಕೊಂಡಿದ್ದು, ನದಿಗೆ ಧುಮ್ಮಿಕ್ಕಿ ಹರಿಸುತ್ತಿರುವ ನೊರೆ ನೀರ ಧಾರೆ ನಯನ ಮನೋಹರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT