ಭಾನುವಾರ, 3–7–1994

ಗುರುವಾರ , ಜೂಲೈ 18, 2019
22 °C
25 ವರ್ಷಗಳ ಹಿಂದೆ

ಭಾನುವಾರ, 3–7–1994

Published:
Updated:

ಖಾಸಗಿ ಫೋನ್ ಬಂದರೂ ಸರ್ಕಾರಿ ದರ ನಿಗದಿ

ಬೆಂಗಳೂರು, ಜುಲೈ 2– ವಿಶ್ವದಲ್ಲಿ ಅತ್ಯಧಿಕ ಲಾಭದಾಯಕ ಉದ್ಯಮವಾದ ದೂರವಾಣಿ ಕ್ಷೇತ್ರವನ್ನು ಪ್ರವೇಶಿಸಲು ವಿದೇಶಿ ಬಂಡವಾಳ ಹೂಡಿಕೆದಾರರು ಹಾಗೂ ಸರ್ಕಾರಗಳು ಉತ್ಸುಕವಾಗಿದ್ದರೂ ದರ ನಿಗದಿಯ ಹಕ್ಕನ್ನು ಮಾತ್ರ ಭಾರತ ಸರ್ಕಾರವೇ ಇಟ್ಟುಕೊಳ್ಳಲಿದೆ. ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ಸುಖ್‌ರಾಂ ಇಂದು ಇಲ್ಲಿ ಈ ಅಂಶ ಸ್ಪಷ್ಟಪಡಿಸಿದರು.

ದೂರವಾಣಿ ಕ್ಷೇತ್ರ ಪ್ರವೇಶಿಸಲು ಖಾಸಗಿಯವರಿಗೆ ಅವಕಾಶ ಕೊಡಲಾಗಿದೆ. ಕ್ಷೇತ್ರದಲ್ಲಿ ಸರ್ಕಾರ ಹಾಗೂ ಖಾಸಗಿಯವರ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ, ನೂರಕ್ಕೆ ನೂರು ಪಾಲು ಏಕಸ್ವಾಮ್ಯ ಸಾಧಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಭಾರತದಲ್ಲಿ ಮಿಗ್ ಬಿಡಿ ಭಾಗ ಕಾರ್ಖಾನೆಗೆ ಒಪ್ಪಿಗೆ

ನವದೆಹಲಿ, ಜುಲೈ 2 (ಯುಎನ್‌ಐ)– ಮಿಗ್ ಯುದ್ಧ ವಿಮಾನಗಳ ಬಿಡಿ ಭಾಗಗಳನ್ನು ಪೂರೈಸುವ ಕಾರ್ಖಾನೆಯೊಂದನ್ನು ಭಾರತದಲ್ಲಿ ಜಂಟಿಯಾಗಿ ಆರಂಭಿಸಲು ಭಾರತ ಹಾಗೂ ರಷ್ಯಾ ಸಹಿ ಹಾಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !