ಗುರುವಾರ , ಅಕ್ಟೋಬರ್ 29, 2020
27 °C

ಪ್ರಜಾವಾಣಿ 25 ವರ್ಷಗಳ ಹಿಂದೆ | ಗುರುವಾರ 14, ಸೆಪ್ಟೆಂಬರ್‌, 1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಂಪುಟಕ್ಕೆ ಮೂರ್ತಿ ಸೇರಿ 16 ಹೊಸ ಸಚಿವರು

ನವದೆಹಲಿ, ಸೆ. 13– ಕರ್ನಾಟಕದ ಎಂ. ರಾಜಶೇಖರ ಮೂರ್ತಿ ಸೇರಿದಂತೆ ಹದಿಮೂರು ಹೊಸ ಸ್ಟೇಟ್‌ ದರ್ಜೆ ಸಚಿವರ ಸೇರ್ಪಡೆಯೊಡನೆ ಕೇಂದ್ರ ಸಂಪುಟವನ್ನು ಇಂದು ವಿಸ್ತರಿಸಲಾಯಿತು.

ಸಂಪುಟ ಸೇರಲಿರುವವರ ಪಟ್ಟಿಯಲ್ಲಿ ಹದಿನಾರು ಮಂದಿಯ ಹೆಸರುಗಳಿತ್ತು. ಆದರೆ, ಕರ್ನಾಟಕದ ಜಿ.ವೈ. ಕೃಷ್ಣನ್‌, ಪಿ.ಜೆ. ಕುರಿಯನ್‌ ಮತ್ತು ಸುರೇಶ್‌ ಪಚೋರಿಯಾ ಅವರಿಗೆ ಸಕಾಲಕ್ಕೆ ಸಂದೇಶ ತಲುಪದ ಕಾರಣ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಇವರು ನಾಳೆ ಪ್ರಮಾಣ ವಚನ ಸ್ವೀಕಾರ ಮಾಡುವರೆಂದು ಗೊತ್ತಾಗಿದೆ.

ರಾಜಶೇಖರ ಮೂರ್ತಿ ಮತ್ತು ಆರ್.ಕೆ. ಧವನ್‌ ಅವರು ರಾಜ್ಯ ಸಚಿವರಾದರೂ ಸ್ವತಂತ್ರ ಖಾತೆಗಳನ್ನು ಹೊಂದುವರು.

ಶರಣಾದ ವಾಸುದೇವನ್‌ ಜೈಲಿಗೆ

ಬೆಂಗಳೂರು, ಸೆ. 13– ನ್ಯಾಯಾಲಯ ನಿಂದನೆಗಾಗಿ ಒಂದು ತಿಂಗಳ ಸಾದಾ ಜೈಲು ಶಿಕ್ಷೆಗೆ ಒಳಗಾಗಿರುವ ಹಿರಿಯ ಐಎಎಸ್‌ ಅಧಿಕಾರಿ, ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕೆ.ವಾಸುದೇವನ್‌ ಇಂದು ಬೆಳಿಗ್ಗೆ ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಟಿ. ಶ್ರೀನಿವಾಸಲು ಮುಂದೆ ಶರಣಾದರು. ತಕ್ಷಣವೇ ಅವರನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ದೆಹಲಿಯಿಂದ ಬೆಳಿಗ್ಗೆ 10.10ಕ್ಕೆ ವಿಮಾನದಲ್ಲಿ ಬಂದಿಳಿದ ವಾಸುದೇವನ್‌ ನಿಲ್ದಾಣದಿಂದ ನೇರವಾಗಿ ಪೊಲೀಸ್‌ ಕಮಿಷನರ್‌ ಕಚೇರಿಗೆ ಬಂದು ಶರಣಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು