ಸೋಮವಾರ, ಆಗಸ್ಟ್ 8, 2022
22 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 10–9–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಧೀಶರ ತರಬೇತಿಗೆ ಶೀಘ್ರ ಅಕಾಡೆಮಿ ಸ್ಥಾಪನೆ

ಬೆಂಗಳೂರು, ಸೆ. 9– ನ್ಯಾಯಾಧೀಶರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕದಲ್ಲಿ ಸದ್ಯದಲ್ಲಿಯೇ ನ್ಯಾಯಾಂಗ ಅಕಾಡೆಮಿಯೊಂದನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂ.ಎಲ್‌. ಪೆಂಡ್ಸೆ ಇಂದು ಇಲ್ಲಿ ತಿಳಿಸಿದರು.

ರಾಜ್ಯ ವಕೀಲರ ಮಂಡಲಿ ಮತ್ತು ‘ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ’ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನ್ಯಾಯಾಂಗ ಸುಧಾರಣೆಗಳು ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಅತಿಥಿಯಾಗಿದ್ದರು.

ಹೊಸದಾಗಿ ನೇಮಕಗೊಳ್ಳುವ ವಿವಿಧ ಶ್ರೇಣಿಯ ನ್ಯಾಯಾಧೀಶರಿಗೆ ಈ ಅಕಾಡೆಮಿ ಮೂಲಕ ತಂಡಗಳಲ್ಲಿ ಹಂತಹಂತವಾಗಿ ತರಬೇತಿ ನೀಡಲಾಗುವುದು. ಎಂಟು ವಾರಗಳ ತರಬೇತಿ ಅವಧಿಯಲ್ಲಿ ಅನುಭವಿ ನ್ಯಾಯಾಧೀಶರು ವಿವಿಧ ಬಗೆಯ ಮೊಕದ್ದಮೆಗಳನ್ನು ಹೇಗೆ ಇತ್ಯರ್ಥಗೊಳಿಸಬೇಕು ಎಂಬುದರ ಬಗ್ಗೆ ಉದಾಹರಣೆಗಳ ಸಮೇತ ತಿಳಿಸಿ ಹೇಳುವರು ಎಂದು ವಿವರಿಸಿದರು.

ವಾಸುದೇವನ್ ಪ್ರಕರಣ ರಾಷ್ಟ್ರಪತಿಗೆ ಗೌಡರ ಮನವಿ

ನವದೆಹಲಿ, ಸೆ. 9– ನ್ಯಾಯಾಲಯ ನಿಂದನೆ ಗಾಗಿ ಸುಪ್ರೀಂ ಕೋರ್ಟ್‌ನಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿರುವ ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಜೆ. ವಾಸುದೇವನ್‌ ಅವರಿಗೆ ಕ್ಷಮಾದಾನ ನೀಡುವಂತೆ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ರಾಷ್ಟ್ರಪತಿ ಶಂಕರ ದಯಾಳ್‌ ಶರ್ಮಾ ಅವರಿಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು