ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ | 25 ವರ್ಷಗಳ ಹಿಂದೆ: ಬುಧವಾರ 20-9-1995

Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಅಧಿವೇಶನಕ್ಕೆ ಪ್ರತಿಪಕ್ಷ ಬಹಿಷ್ಕಾರ

ಬೆಂಗಳೂರು, ಸೆ.19: ವಾಸುದೇವನ್ ಪ್ರಕರಣದ ಹಿನ್ನೆಲೆಯಲ್ಲಿ ಈ ಬಾರಿಯ ಉಳಿದ ಅಧಿವೇಶನದ ಕಲಾಪಗಳನ್ನು ಬಹಿಷ್ಕರಿಸಲು ನಿರ್ಧರಿಸಿರುವ ಪ್ರಮುಖ ವಿರೋಧ ಪಕ್ಷಗಳು ಈ ಸಂಬಂಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ನಾಳೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಒಪ್ಪುವುದಾದರೆ ಯಾವುದಾದರೂ ಬಗೆಯ ತನಿಖೆಗೆ ಸಿದ್ಧ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದ ಮುಖ್ಯಮಂತ್ರಿಗಳು ಈಗ ಅದರಿಂದ ಹಿಂದೆ ಸರಿದಿದ್ದಾರೆ. ಆದ್ದರಿಂದ ರಾಜ್ಯಪಾಲರ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಬಿಜೆಪಿ, ಕಾಂಗ್ರೆಸ್, ಕನ್ನಡ ಚಳವಳಿ ಮತ್ತು ರೈತ ಸಂಘದ ನಾಯಕರು ಇಂದು ವರದಿಗಾರರಿಗೆ ತಿಳಿಸಿದರು.

ಪ್ರತಿಪಕ್ಷ ಧೋರಣೆ ವಿರೋಧಿಸಿ ಧರಣಿ

ಬೆಂಗಳೂರು, ಸೆ. 19–ಸದನಕ್ಕೆ ಬಹಿಷ್ಕಾರ ಹಾಕಿರುವ ಪ್ರಮುಖ ವಿರೋಧ ಪಕ್ಷಗಳದ್ದು ಹಟಮಾರಿ ಧೋರಣೆ ಎಂದು ಟೀಕಿಸಿದ ಸಿಪಿಎಂ, ಬಿಎಸ್‌ಪಿ, ಎಐಎಡಿಎಂಕೆ ಮತ್ತು ಪಕ್ಷೇತರ ಸದಸ್ಯರು ಜನತೆಯಿಂದ ಆಯ್ಕೆಯಾಗಿರುವ ತಮ್ಮ ಹಕ್ಕುಗಳನ್ನು ರಕ್ಷಿಸಲು ಸದನ ನಡೆಸುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ಇಂದು ಧರಣಿ ನಡೆಸಿದ ಅಪರೂಪದ ಘಟನೆ ನಡೆಯಿತು.

ವಾಸುದೇವನ್ ಪ್ರಕರಣದಲ್ಲಿ ತನಿಖೆ ನಡೆಸಲು ಸದನ ಸಮಿತಿ ರಚಿಸುವಂತೆ ಪಟ್ಟು ಹಿಡಿದಿರುವ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ರೈತ ಸಂಘ ಮತ್ತು ಕನ್ನಡ ಚಳವಳಿಯ ಸದಸ್ಯರು ಇಂದೂ ಸದನಕ್ಕೆ ಹಾಜರಾಗಲಿಲ್ಲ. ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಬಹಿಷ್ಕಾರ ವಿಚಾರವನ್ನೇ ಮುಂದಿಟ್ಟು ಕಲಾಪ ನಡೆಸದಿರುವುದು ಸರಿಯಲ್ಲ ಎಂದು ಇತರ ವಿರೋಧ ಪಕ್ಷಗಳ ಸದಸ್ಯರು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT