ಬುಧವಾರ, 14–8–1968

7

ಬುಧವಾರ, 14–8–1968

Published:
Updated:

ಕಂಪನಿ ಕಾಣಿಕೆ ನಿಷೇಧಕ್ಕೆ ಮತ್ತಷ್ಟು ವಿರೋಧ, ತಿದ್ದುಪಡಿಗೆ ಕರೆ; ಸಚಿವರ ಪೇಚು

ನವದೆಹಲಿ, ಆ. 13– ರಾಜಕೀಯ ಪಕ್ಷಗಳಿಗೆ ಕಂಪನಿ ಕಾಣಿಕೆಗಳನ್ನು ನಿಷೇಧಿಸಿರುವ ಮಸೂದೆಗೆ ಪಾರ್ಲಿಮೆಂಟಿನ ಕಾಂಗ್ರೆಸ್‌ ಸದಸ್ಯರ ವಿರೋಧ ಮತ್ತಷ್ಟು ಉರುಬುಗೊಂಡಿದೆ. ಪಾರ್ಲಿಮೆಂಟರಿ ಪಕ್ಷದ ಕಾರ್ಯನಿರ್ವಾಹಕ ಸಮಿತಿಯಲ್ಲಿ ಈ ಅಂಶ ಇಂದು ಸ್ಪಷ್ಟವಾಗಿ ವ್ಯಕ್ತಪಟ್ಟಿತು.

ಕಂಪನಿ ವ್ಯವಹಾರಗಳ ಸಚಿವರು ಪದೇ ಪದೇ ಕಠಿಣ ಪ್ರಶ್ನೆಗಳನ್ನೆದುರಿಸಿ ಗೊಂದಲಕ್ಕೊಳಗಾದಾಗ ಪ್ರಧಾನಿಯವರು ಅವರ ನೆರವಿಗೆ ಬರಬೇಕಾದ ಪ್ರಸಂಗ ಉದ್ಭವವಾಯಿತು.

ಕಾಂಗ್ರೆಸ್ಸಿಗೇ ಸಿಂಹಪಾಲು

ನವದೆಹಲಿ, ಆ.13– ಕಳೆದ ಫೆಬ್ರುವರಿಗೆ ಅಂತ್ಯವಾದ ಆರು ವರ್ಷಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಪನಿ ಕಾಣಿಕೆಯನ್ನು ಪಡೆದ ಪಕ್ಷ ಕಾಂಗ್ರೆಸ್‌. ಅದು 2 ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಪಡೆದಿದೆ.

‘ನಿಮಗೆ ಹುಚ್ಚು’– ‘ನಾಲಿಗೆ ಹಿಡಿದು ಮಾತನಾಡಿ’

ನವದೆಹಲಿ, ಆ. 13– ಜನಸಂಘ ಸದಸ್ಯರಿಗೂ ಗೃಹಖಾತೆ ಸ್ಟೇಟ್‌ ಸಚಿವ ಶ್ರೀ ವಿದ್ಯಾಚರಣ ಶುಕ್ಲಾರವರಿಗೂ ಇಂದು ಲೋಕಸಭೆಯಲ್ಲಿ ಉಗ್ರ ಚಕಮಕಿ ಸಂಭವಿಸಿತು.

ದೆಹಲಿ ಆಡಳಿತದ ವಿರುದ್ಧ ಕೇಂದ್ರ ಸರಕಾರ ‘ಸಂಚು’ ಹೂಡುತ್ತಿದೆ ಎಂದು ಜನಸಂಘದ ಸದಸ್ಯರು ಆರೋಪಿಸಿದರು.

ಶ್ರೀ ಶುಕ್ಲಾ ಈ ಆರೋಪವನ್ನು ಅಲ್ಲಗಳೆದರು. ‘ನಿಮ್ಮ ತಲೆಯಲ್ಲಿರುವ ಹುಚ್ಚು ಬಿಡಲಿ’ ಎಂದರು.

ಇದನ್ನು ಕೇಳಿ ಜನಸಂಘದ ಸದಸ್ಯರು ಕೆರಳಿದರು. ಸಚಿವರ ನುಡಿಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಅಧ್ಯಕ್ಷರನ್ನು ಆಗ್ರಹಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !