ಆಡಳಿತದ ವಿಕೇಂದ್ರೀಕರಣದಲ್ಲಿ ಕರ್ನಾಟಕವು ಬಹುಕಾಲದಿಂದ ಮುಂಚೂಣಿಯಲ್ಲಿದೆ. 1992ರಲ್ಲಿ ಸಂವಿಧಾನಕ್ಕೆ 73ನೇ ಮತ್ತು 74ನೇ ತಿದ್ದುಪಡಿ ತರುವ ಮೂಲಕ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡುವುದಕ್ಕೂ ಮುನ್ನವೇ ರಾಜ್ಯವು 1977ರ ಅಶೋಕ್ ಮೆಹ್ತಾ ಸಮಿತಿಯಶಿಫಾರಸುಗಳ ಆಧಾರದ ಮೇಲೆ 3 ಹಂತಗಳ ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯನ್ನು
ಅಳವಡಿಸಿಕೊಂಡಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವ ಅಧಿಕಾರದ ವಿಕೇಂದ್ರೀಕರಣ ಮತ್ತು ಸ್ಥಳೀಯ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಪ್ರತಿಬಿಂಬಿಸುವ ಮುಖ್ಯ ಸೂಚಕಗಳಾಗಿವೆ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಥಿತಿಗತಿಯ ವಿಶ್ಲೇಷಣೆ ಮಾಡಿದಾಗ, ರಾಜ್ಯದ ಸ್ಥಳೀಯ ಸ್ವಶಾಸನ ವ್ಯವಸ್ಥೆ ಕ್ಷೀಣಿಸುತ್ತಿರುವ ಚಿಂತಾಜನಕ ಚಿತ್ರಣ ಕಣ್ಣೆದುರು ಹಾದುಹೋಗುತ್ತದೆ.

2024ರ ಡಿಸೆಂಬರ್ನಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಮಂಡನೆಯಾದ ಮಹಾಲೇಖಪಾಲರ (ಸಿಎಜಿ) ವರದಿ ಪ್ರಕಾರ, 73ನೇ ತಿದ್ದುಪಡಿ ಜಾರಿಗೆ ಬಂದ ಬಳಿಕ ಎಂದಿಗೂ ವಿಳಂಬವಾಗಿರದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಇತ್ತೀಚೆಗೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾವಣೆ ನಡೆದಿಲ್ಲ. ಸರ್ಕಾರಕ್ಕೆ ಹೈಕೋರ್ಟ್ ₹5 ಲಕ್ಷ ದಂಡ ವಿಧಿಸಿದರೂ ಈವರೆಗೂ ಚುನಾವಣೆ ನಡೆಸದಿರುವುದು ವಿಷಾದಕರ.

2024ರ ಆಗಸ್ಟ್ನಲ್ಲಿ ಜನಾಗ್ರಹ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ರಾಜ್ಯದ 11 ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಸರಾಸರಿ 22 ತಿಂಗಳ ವಿಳಂಬ ಆಗಿರುವುದು ಕಂಡುಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಅವಧಿ ಮುಗಿದು 55 ತಿಂಗಳಾದರೂ ಚುನಾವಣೆ ನಡೆದಿಲ್ಲ. ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆಗಳಲ್ಲಿ 18 ತಿಂಗಳಾದರೂ ಚುನಾವಣೆ ನಡೆದಿಲ್ಲ. ದಾವಣಗೆರೆ ಮತ್ತು ಮಂಗಳೂರು ಪಾಲಿಕೆಗಳ ಅವಧಿ ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಮುಗಿದರೂ ಚುನಾವಣೆ ನಡೆದಿಲ್ಲ. ರಾಷ್ಟ್ರಮಟ್ಟದಲ್ಲಿ ನೋಡುವುದಾದರೆ, 74ನೇ ಸಂವಿಧಾನ ತಿದ್ದುಪಡಿ ಅನುಷ್ಠಾನ ಕುರಿತು ಮಹಾಲೇಖಪಾಲರು 2024ರ ನವೆಂಬರ್ನಲ್ಲಿ ಸಲ್ಲಿಸಿದ ವರದಿ ಪ್ರಕಾರ ಶೇ 60ಕ್ಕಿಂತ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪರಿಷತ್ಗಳು ಇಲ್ಲದಿರುವುದು ಕಂಡುಬಂದಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ನಂತರವೂ ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಸ್ಥಳೀಯ ಸರ್ಕಾರ ರಚನೆಯಾಗುವ ಖಾತರಿ ಇಲ್ಲ. ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನೂತನ ಪರಿಷತ್ತು ರಚನೆ ಮತ್ತು ಮೇಯರ್ ಅಥವಾ ಅಧ್ಯಕ್ಷರ ಆಯ್ಕೆಯಲ್ಲೂ ವಿಳಂಬವಾಗುತ್ತಿದೆ.

ಸಣ್ಣ ಪಟ್ಟಣಗಳಲ್ಲಿ ಶೇ 89ರಷ್ಟು ಪ್ರಕರಣಗಳಲ್ಲಿ ಮೀಸಲಾತಿ ಪಟ್ಟಿ ಪ್ರಕಟ ಆಗದಿರುವುದರಿಂದ ಅಥವಾ ಪಾಲಿಕೆ ಪರಿಷತ್ತಿನ ಮೊದಲ ಸಭೆ ಕರೆಯದಿರುವುದರಿಂದ ಪರಿಷತ್ ರಚನೆ ಮತ್ತು ಅಧ್ಯಕ್ಷರ ಚುನಾವಣೆಯಲ್ಲಿ ವಿಳಂಬವಾಗಿದೆ. ಈ ರೀತಿಯ ವಿಳಂಬವು ಸ್ಥಳೀಯ ಸರ್ಕಾರಗಳ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ನಾಗರಿಕರು ಈ ಮಹತ್ವದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳಲಿದ್ದಾರೆ.

ಮೇಯರ್ ಮತ್ತು ಅಧ್ಯಕ್ಷರಿಗೆ ಐದು ವರ್ಷಗಳಿಗಿಂತ ಕಡಿಮೆ ಅವಧಿ (ಒಂದು ವರ್ಷದಿಂದ ಎರಡೂವರೆ ವರ್ಷ) ನಿಗದಿಪಡಿಸಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ ಎಂದು 2024ರ ಸಿಎಜಿ ವರದಿ ಹೇಳಿದೆ. ನಗರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ದೂರದೃಷ್ಟಿ ಹೊಂದಿ ಕೆಲಸ ಮಾಡಲು ಮೇಯರ್ ಮತ್ತು ಅಧ್ಯಕ್ಷರಿಗೆ 5 ವರ್ಷಗಳವರೆಗೆ ಆಡಳಿತ ನಡೆಸಲು ಅವಕಾಶ ಕಲ್ಪಿಸುವುದು ಅತ್ಯಗತ್ಯ.

2020ರಲ್ಲಿ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಪಂಚಾಯಿತಿ ಅಧ್ಯಕ್ಷರ ಆಡಳಿತಾವಧಿಯನ್ನು ಐದು ವರ್ಷಗಳಿಂದ ಎರಡೂವರೆ ವರ್ಷಗಳಿಗೆ ಇಳಿಸಲಾಗಿದೆ. ಆಡಳಿತಾವಧಿ ಹೀಗೆ ಕಡಿಮೆ ನಿಗದಿಗೊಂಡರೆ ಸ್ಥಳೀಯ ಸರ್ಕಾರಗಳ ಮುಖ್ಯಸ್ಥರಿಗೆ ದೀರ್ಘಕಾಲಿಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದ ಮೂರನೇ ಹಂತವನ್ನು ಬಲಪಡಿಸಲು ಸುಧಾರಣೆಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಮೊದಲನೆಯದಾಗಿ, ರಾಜ್ಯ ಚುನಾವಣಾ ಆಯೋಗಗಳ ನೇಮಕಾತಿ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗದ ಮಾದರಿಯಲ್ಲಿ ಬಲಪಡಿಸುವ ಅಗತ್ಯವಿದೆ.

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿದೆ ಭಾರತದ ಚುನಾವಣಾ ಆಯೋಗ. ಇದೇ ವೇಳೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಾದ ಜವಾಬ್ದಾರಿ ಹೊಂದಿರುವ ರಾಜ್ಯ ಚುನಾವಣಾ ಆಯೋಗಗಳು ಬಹುತೇಕ ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳ ಹಸ್ತಕ್ಷೇಪಕ್ಕೆ ಮತ್ತು ವ್ಯವಸ್ಥಿತ ನಿರ್ಲಕ್ಷ್ಯಕ್ಕೆ ಒಳಗಾಗಿ ಸ್ವಾಯತ್ತತೆಯನ್ನು ಕಳೆದುಕೊಂಡಿವೆ.

ಸಂವಿಧಾನದ 243ಕೆ ಮತ್ತು 243ಝಡ್ಎ ವಿಧಿಗಳ ಅಡಿಯಲ್ಲಿ 73ನೇ ಮತ್ತು 74ನೇ ತಿದ್ದುಪಡಿಗಳ ಮೂಲಕ ರಾಜ್ಯ ಚುನಾವಣಾ ಆಯೋಗಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ನಿಬಂಧನೆಗಳು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಹೊಣೆಯನ್ನು ರಾಜ್ಯ ಚುನಾವಣಾ ಆಯೋಗಗಳಿಗೆ ನೀಡುತ್ತವೆ.

2006ರಲ್ಲಿ ಕಿಶನ್ ಸಿಂಗ್ ತೋಮರ್ ವಿರುದ್ಧ ಅಹಮದಾಬಾದ್ ಮಹಾನಗರ ಪಾಲಿಕೆ ಪ್ರಕರಣದಲ್ಲಿ, ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗಗಳಿಗೆ ಭಾರತ ಚುನಾವಣಾ ಆಯೋಗಕ್ಕೆ ಇರುವಷ್ಟೇ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ರಾಜ್ಯ ಚುನಾವಣಾ ಆಯೋಗಗಳ ಆಯುಕ್ತರನ್ನು ಪ್ರಸ್ತುತ ರಾಜ್ಯ ಸರ್ಕಾರವೇ ನೇರವಾಗಿ ನೇಮಿಸುತ್ತದೆ. ಇದರಿಂದ ಆಯೋಗದ ಸ್ವಾಯತ್ತತೆಗೆ ಧಕ್ಕೆ ಒದಗುತ್ತದೆ. ಇದಕ್ಕೆ ಪರ್ಯಾಯವಾಗಿ ಆಯುಕ್ತರ ಸಂಖ್ಯೆಯನ್ನು ಹೆಚ್ಚಿಸಬೇಕು. ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಕ್ಷದ ನಾಯಕ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಸಮಿತಿ ಮೂಲಕ ನೇಮಕ ಪ್ರಕ್ರಿಯೆ ನಡೆಯುವಂತಿರಬೇಕು. ಇಂತಹ ವ್ಯವಸ್ಥೆಯಿಂದ ಆಯೋಗವು ರಾಜಕೀಯ ಪ್ರಭಾವದಿಂದ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಎರಡನೆಯದಾಗಿ, ವಾರ್ಡ್ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗಗಳಿಗೆ ಹಸ್ತಾಂತರಿಸಬೇಕು. ಇದಕ್ಕೆ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಅಗತ್ಯ ಇದೆ. ಈ ರೀತಿಯಲ್ಲಿ ಅಧಿಕಾರ ಬಳಕೆಗೆ ಸಾಂಸ್ಥಿಕ ಶಿಸ್ತಿನ ಕವಚ ತೊಡಿಸಿ, ಸ್ಥಳೀಯ ಚುನಾವಣೆ ಪ್ರಕ್ರಿಯೆಗೆ ಅಗತ್ಯವಾದ ಸ್ಥಿರತೆ ಒದಗಿಸಬಹುದು.

ಕೊನೆಯದಾಗಿ, ಎಲ್ಲ ಸ್ಥಳೀಯ ಸ್ವ-ಸರ್ಕಾರಗಳ ಮುಖ್ಯಸ್ಥರಿಗೆ 5 ವರ್ಷಗಳವರೆಗೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಇರುವಂತೆ ಕಾನೂನಿಗೆ ಅಗತ್ಯ ತಿದ್ದುಪಡಿಗಳನ್ನು ತರಬೇಕು. ಜೊತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಒಂದು ತಿಂಗಳೊಳಗೆ ಪಾಲಿಕೆ ಪರಿಷತ್ತುಗಳನ್ನು ರಚಿಸಿ ಮೇಯರ್, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕಾಲಮಿತಿಯನ್ನು ಕಾನೂನಿನಲ್ಲಿ ನಿಗದಿಪಡಿಸಬೇಕಾಗಿದೆ. ಇದಕ್ಕಾಗಿ ಮಹಾ ನಗರ ಪಾಲಿಕೆ, ಪುರಸಭೆ ಮತ್ತು ಪಂಚಾಯತ್ ರಾಜ್ ಕಾಯ್ದೆಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಬೇಕಾಗಿದೆ.

ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ ಕರ್ನಾಟಕ ಮೇಲ್ಪಂಕ್ತಿ ಹಾಕಿಕೊಟ್ಟಿತ್ತು. ಅದನ್ನು ಕಾಯ್ದುಕೊಳ್ಳುವ ಇಚ್ಛಾಶಕ್ತಿಯನ್ನು ಈಗ ತೋರಬೇಕಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ಮತ್ತು ರಾಜಕೀಯ ಪ್ರಭಾವದಿಂದ ದೂರವಿರಿಸಿ ನಡೆಸಲು ಅನುವು ಮಾಡಿಕೊಡುವ ಸುಧಾರಣೆಗಳನ್ನು ಜಾರಿಗೆ ತರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳು ಕಿರಿಯ ಪಾಲುದಾರರಲ್ಲ– ಅವು ಪ್ರಜಾಪ್ರಭುತ್ವವನ್ನು ಬಲಪಡಿಸುವ ಹಾಗೂ ಪ್ರತಿಯೊಂದು ಗ್ರಾಮ ಮತ್ತು ನಗರದಲ್ಲಿಯೂ ಆಡಳಿತವನ್ನು ನಾಗರಿಕರ ಬಳಿ ತರುವ ಪ್ರಮುಖ ಘಟಕಗಳು.

ಲೇಖಕ: ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ಷಿಪ್ ಆ್ಯಂಡ್ ಡೆಮಾಕ್ರಸಿ ಸಂಸ್ಥೆಯ ‘ಭಾಗವಹಿಸುವಿಕೆಯ ಆಡಳಿತ’ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.