ದಶಕದ ಹಿಂದೆ ಪಾಠ ಬೋಧನೆಗೆ ಪೂರಕ ಸಲಕರಣೆ ಗಳಾಗಿದ್ದ ಹಲವು ಬೋಧನೋಪಕರಣಗಳು ಇಂದು ಕಲಿಕೆಯ ಮೂಲಗಳೇ ಆಗಿ ಬದಲಾಗಿವೆ. ಆಡಿಯೊ–ವಿಡಿಯೊಗಳು ಪಠ್ಯವಸ್ತುವನ್ನು ಪರಿಣಾಮಕಾರಿಯಾಗಿ
ಅರ್ಥ ಮಾಡಿಸಲು ಬಳಸಲಾಗುತ್ತಿದ್ದ ಪೂರಕ ಉಪಕರಣಗಳಾಗಿದ್ದವು. ಉದಾಹರಣೆಗೆ, ‘ಕೃಷ್ಣದೇವರಾಯ’ನ ಪಾಠ ಬೋಧನೆಗೆ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಸಹಾಯಕ ಕಲಿಕಾ ಉಪಕರಣವಾಗಿ ಬಳಕೆಯಾಗುತ್ತಿತ್ತು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬರೆದ ಚಿತ್ರಗಳು, ರಚಿಸಿದ ಚಾರ್ಟುಗಳು, ತಯಾರಿಸಿದ ‘ಮಾದರಿ’ಗಳೆಲ್ಲವೂ ಪಠ್ಯವಸ್ತುವನ್ನು ಪರಿಣಾಮಕಾರಿ ಯಾಗಿಸಲು ಬಳಸುವ ಸಹಾಯಕ ವಸ್ತುಗಳೇ ಆಗಿದ್ದವು. ಹಲವು ಮರಗಳ ಎಲೆಗಳನ್ನು ತಂದಿರಿಸಿ ಅವುಗಳನ್ನು ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಈ ರೀತಿಯ ಚಟುವಟಿಕೆಗಳು ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಹರಿತಗೊಳಿಸುವುದರೊಂದಿಗೆ ಸಸ್ಯಶಾಸ್ತ್ರದ ಪಠ್ಯವಸ್ತುವಿನ ಕಲಿಕೆಯನ್ನು ಪರಿಣಾಮಕಾರಿಯಾಗಿಸುತ್ತಿದ್ದವು.

ಈಗ, ಬದಲಾಗಿರುವ ಕಲಿಕಾ ಸನ್ನಿವೇಶದಲ್ಲಿ ಹಿಂದಿನ ಬಹುತೇಕ ಕಲಿಕಾ ಸಹಾಯಕ ಸಂಗತಿಗಳು ಕಲಿಕಾ ಮೂಲಗಳೇ ಆಗಿ ಪರಿವರ್ತನೆಯಾಗಿವೆ. ಕಲಿಕೆಗೆ ಸಹಾಯಕ ವಾಗಿದ್ದ ಬಹುತೇಕ ಸಂಗತಿಗಳು ಕ್ರೋಡೀಕೃತಗೊಂಡು ‘ಯೂಟ್ಯೂಬ್’ ಎಂಬ ಒಂದೇ ಕಲಿಕಾ ಮೂಲವಾಗಿ ರೂಪಾಂತರಗೊಂಡಿವೆ. ಯೂಟ್ಯೂಬ್ ನೋಡಿ ಕಲಿತುಕೊಳ್ಳುವುದು ಇಂದಿನ ಶೈಕ್ಷಣಿಕ ಸನ್ನಿವೇಶದ ಮುಖ್ಯ ಪದ್ಧತಿಗಳಲ್ಲಿ ಒಂದಾಗಿದೆ ಮತ್ತು ಈ ಪದ್ಧತಿಯು ಯೂಟ್ಯೂಬ್ಗಷ್ಟೇ ಸೀಮಿತವಾಗಿಲ್ಲ. ಕಲಿಕೆಗಾಗಿ ಹಲವು ‘ಅಪ್ಲಿಕೇಷನ್’ಗಳು ಬಂದಿವೆ. ಇಡೀ ಪಾಠಪುಸ್ತಕವನ್ನೇ ಸ್ಮಾರ್ಟ್ಕ್ಲಾಸ್ಗಳಲ್ಲಿ ಬೋಧಿಸಿ ಜಾಲತಾಣಗಳ ಮೂಲಕ ಪೂರೈಸುವ ಪದ್ಧತಿ ಬಂದಿದೆ.

ಈ ವ್ಯವಸ್ಥೆಯ ಜೊತೆಗೆ ಡಿಜಿಟಲ್ ತರಗತಿಗಳು ನಡೆಯುತ್ತಿವೆ. ಅಲ್ಲಿ ತರಬೇತುದಾರ ತರಗತಿಯ ನಿರ್ವಹಣೆ ಮಾಡುವುದು ‘ಡಿಜಿಟಲ್ ಮಂಡನೆ’ಗೆ ಸೀಮಿತವಾಗುತ್ತದೆ. ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ನಿರ್ವಹಣೆ ಮಾಡುವುದಕ್ಕೆ ಆದ್ಯತೆ ಇರುವುದಿಲ್ಲ. ಈ ರೀತಿಯ ತರಗತಿ ನಿರ್ವಹಣೆಗಾಗಿ ಮತ್ತು ಪಠ್ಯಪುಸ್ತಕದ ಯಾವುದೋ ಒಂದು ಅಥವಾ ಕೆಲವು ಅಂಶಗಳನ್ನು ಬಹಳ ಮಹತ್ವದ್ದೆಂದು ಗುರುತಿಸಿ ಅದನ್ನೇ ಒಂದು ಬೋಧನಾ ಪ್ಯಾಕೇಜ್ ಆಗಿ ಮಾಡಿ ಶಾಲೆಗಳಿಗೆ ತಲುಪಿಸುವ ಯಶಸ್ವಿ ಉದ್ಯಮವೂ ನಡೆಯುತ್ತಿದೆ. ಉದಾಹರಣೆಗೆ, ಸಂವಿಧಾನ ಕಲಿಸುವ ಪ್ಯಾಕೇಜ್ಗಳು ಬಹಳಷ್ಟಿವೆ. ಈ ಪ್ಯಾಕೇಜನ್ನು ಯಾವ ಶಾಲೆಯ ವ್ಯವಸ್ಥಾಪಕರೂನಿರಾಕರಿಸುವುದಿಲ್ಲ. ಏಕೆಂದರೆ ಸಂವಿಧಾನ ಎಲ್ಲರಿಗೂ ತಿಳಿದಿರಬೇಕಾದಂಥದ್ದು ಎಂದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ನಿಜವಾಗಿ ಸಂವಿಧಾನದ ಬಗೆಗಿನ ಪಾಠವು ತರಗತಿಯ ಪುಸ್ತಕದಲ್ಲೇ ಇರುವಾಗ ಅದಕ್ಕಾಗಿ ಪ್ರತ್ಯೇಕ ಪ್ಯಾಕೇಜಿನ ಅವಶ್ಯಕತೆ ಏನು ಎಂದು ಯೋಚಿಸಲು ಹೋಗುವುದಿಲ್ಲ.

ಪಾಠ ಪುಸ್ತಕದಲ್ಲಿ ಕೊಟ್ಟಿರುವ ಸಂವಿಧಾನದ ವಿವರದ ಬಗ್ಗೆ ತರಗತಿಯಲ್ಲಿ ಸರಿಯಾಗಿ ಬೋಧನೆ ನಡೆದಿರುವುದಿಲ್ಲ ಎಂದು ಭಾವಿಸುವುದಾದರೆ, ಉಳಿದ ಕಲಿಕಾಂಶಗಳ ಬೋಧನೆಯೂ ಸರಿಯಾಗಿ
ನಡೆದಿರುವುದಿಲ್ಲ. ಆಗ ಸರಿಪಡಿಸಬೇಕಾದದ್ದು ತರಗತಿಯ ಕಲಿಕೆಯನ್ನೇ ವಿನಾ ಪಾಠಪುಸ್ತಕದಿಂದ ಯಾವುದೋ ವಿಷಯವನ್ನು ತೆಗೆದು ಪ್ರತ್ಯೇಕ ಪಠ್ಯಕ್ರಮ ಮಾಡಿ ಸಾಫ್ಟ್ ಸ್ಕಿಲ್ಸ್ ತರಬೇತುದಾರನಿಂದ ಪ್ರತ್ಯೇಕ ತರಗತಿ ಕೊಡಿಸುವುದಲ್ಲ.

ಶಿಕ್ಷಣ ತಜ್ಞರಿಂದಾಗಲಿ, ಶಿಕ್ಷಣ ಅಧಿಕಾರಿಗಳಿಂದಾಗಲಿ, ಪಾಲಕರಿಂದಾಗಲಿ ಯಾವುದೇ ಪರಿಶೀಲನೆ ಮತ್ತು ವಿಮರ್ಶೆಗೆ ಒಳಗಾಗದೇ ಇರುವ, ಆದರೆ ಔಪಚಾರಿಕ ಪಠ್ಯಕ್ರಮವನ್ನು ಹೇಗೆ ಬೇಕಾದರೂ ಬಳಸಿಕೊಂಡು ಶಿಕ್ಷಣೋದ್ಯಮವನ್ನು ನಡೆಸಬಹುದಾದ ಈ ಎಲ್ಲ ನಮೂನೆಯ ಯೋಜನೆಗಳನ್ನು ಸಮರ್ಥ ಶಿಕ್ಷಣ ಪರಿಣತರಿಂದ ಪರಿಶೀಲನೆ ಮಾಡಿಸುವ ಕೆಲಸ ಮೊದಲು ನಡೆಯಬೇಕಾಗಿದೆ. ಏಕೆಂದರೆ ಈ ರೀತಿಯ ವ್ಯವಸ್ಥೆಗಳು ಅನೇಕ ಸಂದರ್ಭಗಳಲ್ಲಿ ಔಪಚಾರಿಕ ಶಿಕ್ಷಣದ ಗುಣಮಟ್ಟ ವನ್ನು ಹಾಳುಗೆಡಹುವ ವ್ಯವಸ್ಥೆಯಾಗಿ ಬರುತ್ತಿವೆ. ಉದಾಹರಣೆಗೆ, ಔಪಚಾರಿಕ ಕಲಿಕೆಗಾಗಿ ಶೈಕ್ಷಣಿಕ ಆಡಳಿತ ನಿಗದಿಪಡಿಸಿದ್ದ ಸಮಯವನ್ನು ಸಾಫ್ಟ್ ಸ್ಕಿಲ್ನವರಿಗೆ ಕೊಟ್ಟಾಗ, ಆ ಸಮಯವು ಸಂಬಂಧಪಟ್ಟ ಶಿಕ್ಷಕರಿಗೆ ಲಭ್ಯವಾಗುವುದಿಲ್ಲ. ಆಗ ವಿಶೇಷ ತರಗತಿಗಳನ್ನು ನಡೆಸಲು ಮುಂದಾದರೆ, ಮಕ್ಕಳ ವಿಶ್ರಾಂತಿಯ ಹಕ್ಕು, ಆಟವಾಡುವ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಹೀಗಿರುವಾಗ, ಔಪಚಾರಿಕ ಕಲಿಕಾ ವ್ಯವಸ್ಥೆಗೆ ಯಾವುದೇ ನಿಗದಿತ ವಿಧಾನ ಇಲ್ಲದೆ ಒಳನುಸುಳುವ ಸಾಫ್ಟ್ ಸ್ಕಿಲ್ಸ್ ರೂಪದ ವ್ಯವಸ್ಥೆಗಳಿಗೆ ಒಂದು ಸಮರ್ಪಕ ನೀತಿಯನ್ನು ರೂಪಿಸಬೇಡವೇ?

ಶಿಕ್ಷಣದಲ್ಲಿ ಆಧುನಿಕ ಮಾಧ್ಯಮಗಳ ಬಳಕೆಯನ್ನು ಹಲವು ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವ–ಇಚ್ಛೆಯಿಂದ ತಮಗೆ ಬೇಕೆನಿಸಿದ ಜ್ಞಾನವನ್ನು ಪಡೆಯಲು ಆಧುನಿಕ ಮಾಧ್ಯಮಗಳನ್ನು ಬಳಸುವುದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ‘ಅಧಿಕೃತ’ ಮಾಹಿತಿ ಮೂಲಗಳನ್ನೇ ಬಳಸಿದಾಗ ಅದು ಕಲಿಕೆಗೆ ‘ವರ’ವಾಗಿ ಬರುತ್ತದೆ.

ಎರಡನೆಯದು, ಔಪಚಾರಿಕ ಶಿಕ್ಷಣದ ವಿಚಾರ. ಈ ಬಗೆಯ ಶಿಕ್ಷಣಕ್ಕೆ ಪಠ್ಯ ಪೂರಕ ಸಾಧನಗಳಾಗಿ ಆಧುನಿಕ ಮಾಧ್ಯಮಗಳ ಬಳಕೆಯು ಕಲಿಕೆಗೆ ಅನುಕೂಲಕಾರಿಯಾಗಿ ಬರುತ್ತದೆ. ಆದರೆ ಸಂಬಂಧಪಟ್ಟ ಅಧ್ಯಾಪಕರೇ ಅದನ್ನು ಬಳಸಬೇಕು ಮತ್ತು ಯಾವ ಸಂದರ್ಭದಲ್ಲಿ ಅದನ್ನು ಬಳಸಿದರೆ ಕಲಿಕಾಂಶವು ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬ ತಿಳಿವಳಿಕೆ ಆ ಅಧ್ಯಾಪಕರಿಗೆ ಇರಬೇಕಾಗುತ್ತದೆ. ಉದಾಹರಣೆಗೆ, ಭಾರತದ ನಕಾಶೆಯನ್ನು ಡಿಜಿಟಲ್ ಆಗಿ ತೋರಿಸಿದರೆ ಕಲಿಕೆ ದುರ್ಬಲ ಆಗುತ್ತದೆ. ಬದಲು ಅಧ್ಯಾಪಕರೇ ಭಾರತದ ನಕಾಶೆಯನ್ನು ಬೋರ್ಡ್ ಮೇಲೆ ಚಿತ್ರಿಸಿದಾಗ ವಿದ್ಯಾರ್ಥಿಗೆ ನಕಾಶೆಯನ್ನು ಚಿತ್ರಿಸುವ ಕೌಶಲ ಬೇಗ ಬೆಳೆಯುತ್ತದೆ. ಡಿಜಿಟಲ್ ನಕಾಶೆ ತೋರಿಸಿದರೆ ನಕಾಶೆಯನ್ನು ರಚಿಸುವ ಕೌಶಲ ವಿದ್ಯಾರ್ಥಿ ಗಳಿಗೆ ಗೊತ್ತಾಗುವುದಿಲ್ಲ. ನಕಾಶೆ ಮಾತ್ರ ಗೊತ್ತಾಗುತ್ತದೆ ಅಷ್ಟೆ. ಆಗ ಅದು ಬೋಧನಾ ಪದ್ಧತಿಯಲ್ಲಿ ಅತೀ ಪ್ರಧಾನವಾದ ‘ರಚನಾ ವಾದ’ವನ್ನು (ಬೋಧನೆಯು ವಿದ್ಯಾರ್ಥಿಗಳು ಜ್ಞಾನದ ರಚನೆ ಮಾಡಿಕೊಳ್ಳುವಂತೆ ಇರಬೇಕು ಎಂಬ ತತ್ವ) ಈಡೇರಿಸುವುದಿಲ್ಲ. ಬದಲಿಗೆ ಭಾರತದ ನಕಾಶೆಯಲ್ಲಿ ಯಾವ ಯಾವ ಭಾಗದಲ್ಲಿ ಯಾವ ಬೆಳೆಗಳು ಪ್ರಧಾನವಾಗಿವೆ ಎಂಬುದನ್ನು ತೋರಿಸಬೇಕಾದಾಗ ‘ಡಿಜಿಟಲ್ ಮಂಡನೆ’ಯನ್ನು ಮಾಮೂಲಿ ಬೋಧನೆಗಿಂತ ಹೆಚ್ಚು ಪರಿಣಾಮಕಾರಿ ಯಾಗಿ ಮಾಡಲು ಸಾಧ್ಯವಾಗುತ್ತದೆ. ಆಗ ಅದು ರಚನಾ ವಾದದ ಆಶಯವನ್ನು ಮಾತಿನಲ್ಲಿ ವಿವರಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸುತ್ತದೆ.

ಸಂಬಂಧಪಟ್ಟ ಅಧ್ಯಾಪಕರು ಆಧುನಿಕ ಮಾಧ್ಯಮ ಗಳನ್ನು ಔಪಚಾರಿಕ ಶಿಕ್ಷಣಕ್ಕೆ ಬಳಸಿಕೊಳ್ಳುವಾಗ ಆಯಾ ಅಧ್ಯಾಪಕರು ಆಯಾ ಸಂದರ್ಭದಲ್ಲಿ ಅನುಸರಿಸುವ ಬೋಧನಾ ವಿಧಾನ, ಪಠ್ಯವಸ್ತುವಿನ ಪ್ರಮಾಣ, ಶೈಕ್ಷಣಿಕ ವರ್ಷದಲ್ಲಿ ಪಠ್ಯದ ವಿವಿಧ ಘಟಕಗಳಿಗೆ ದೊರೆಯುವ ಬೋಧನಾ ಅವಧಿ, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಸ್ವರೂಪದಂತಹ ಹಲವಾರು ಅಂಶಗಳನ್ನು ಆಧರಿಸಿರ ಬೇಕಾಗುತ್ತದೆ. ಈ ವಿಚಾರದಲ್ಲಿ ಅಧ್ಯಾಪಕರಿಗೆ ತರಬೇತಿ ಕೊಡಬೇಕಾಗಬಹುದು. ಆದರೆ ಆಯಾ ತರಗತಿಗಳಲ್ಲಿ ಅಧ್ಯಾಪಕರೇ ನಿರ್ಧರಿಸಬೇಕಾದದ್ದನ್ನು ಸಾರ್ವತ್ರಿಕವಾಗಿ ಎಲ್ಲೋ ಒಂದು ಕಡೆ ಯಾರೋ ಒಬ್ಬರು ನಿರ್ಧರಿಸಿ ಅನುಷ್ಠಾನ ಮಾಡಲು ಬರುವುದಿಲ್ಲ. ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ವ್ಯಕ್ತಿ ಭಿನ್ನತೆಯ ನೆಲೆಯಲ್ಲಿ
ತಿಳಿದಿಲ್ಲದವರು ತೆಗೆದುಕೊಳ್ಳುವ ನಿರ್ಧಾರಗಳು ಶಿಕ್ಷಣಶಾಸ್ತ್ರದ ನೆಲೆಯಲ್ಲಿ ಅವೈಜ್ಞಾನಿಕವಾಗುತ್ತವೆ.

ಮೂರನೆಯದಾಗಿ, ಮಕ್ಕಳು ಮೊಬೈಲ್ ಫೋನ್ ಅನ್ನು ಹೆಚ್ಚು ನೋಡಿದರೆ ಕಣ್ಣಿಗೆ ಹಾನಿಯಾಗುತ್ತದೆ, ಕಲಿಕಾನುಭವ ಆಗುವುದಿಲ್ಲ, ದುರಭ್ಯಾಸಗಳು ಬೆಳೆಯುತ್ತವೆ ಎಂದೆಲ್ಲ ಹೇಳುತ್ತಾ, ಎಲ್ಲ ಪಾಠಗಳನ್ನೂ ಯೂಟ್ಯೂಬ್ ಮೂಲಕ ನೋಡಿಕೊಳ್ಳಿ ಎಂದು ಹೇಳುವ ವಿರೋಧಾಭಾಸವು ಔಪಚಾರಿಕ ಶಿಕ್ಷಣವನ್ನು
ಹದಗೆಡಿಸುತ್ತದೆ. ಯೂಟ್ಯೂಬ್ ಪಾಠಗಳು ವಿದ್ಯಾರ್ಥಿಗಳ ಮೇಲುಸ್ತುವಾರಿ ಮಾಡುವುದಿಲ್ಲ. ತನ್ನದಲ್ಲದ ಬೋಧನಾ ಪದ್ಧತಿಗೆ ವಿದ್ಯಾರ್ಥಿಯ ಸ್ಪಂದಿಸುವಿಕೆಯನ್ನು ಸಂಬಂಧಪಟ್ಟ ಶಿಕ್ಷಕರು ಅರ್ಥೈಸಲು ಆಗುವುದಿಲ್ಲ. ಕೇವಲ ಫಲಿತಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದಲೇ ನೋಡಿದಾಗಲೂ ಡಿಜಿಟಲ್ ಪಾಠಗಳು ಅಧ್ಯಾಪಕರು ನಡೆಸಿದ ಪಾಠಗಳಿಗಿಂತ ಉತ್ತಮ ಫಲಿತಾಂಶವನ್ನು ಸಾರ್ವತ್ರಿಕವಾಗಿ ಕೊಟ್ಟಿವೆ ಎನ್ನಲು ಆಧಾರಗಳಿಲ್ಲ.

ಶಿಕ್ಷಣದಲ್ಲಿ ಡಿಜಿಟಲ್ ಪ್ರವೇಶವು ಅಧ್ಯಾಪಕರ ಬೋಧನಾ ಕೌಶಲ ದುರ್ಬಲಗೊಳಿಸುತ್ತದೆ,
ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನು ಸಡಿಲಗೊಳಿಸುತ್ತದೆ. ಹೀಗಾಗಿ, ಶಿಕ್ಷಣಕ್ಕೆ ಡಿಜಿಟಲ್ ಪ್ರವೇಶದ ಒಟ್ಟೂ ಸ್ವರೂಪದ ಬಗ್ಗೆ ವ್ಯಾಪಕ ಅಧ್ಯಯನ ನಡೆದು ಅದಕ್ಕೊಂದು ಸ್ಪಷ್ಟ ನೀತಿಯನ್ನು ರೂಪಿಸಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.