ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಶುದ್ಧ ಮತ್ತು ನವೀಕರಿಸಬಹುದಾದ ಇಂಧನದ ಬಳಕೆಯ ಮಾತು ಬಂದಾಗಲೆಲ್ಲ ‘ಜೈವಿಕ ಇಂಧನ’ ನೆನಪಾಗುತ್ತದೆ. 19ನೇ ಶತಮಾನದ ಕೊನೆಯ ವೇಳೆಗೆ ಜರ್ಮನ್ ಸಂಶೋಧಕ ಸರ್ ರುಡಾಲ್ಫ್ ಡೀಸೆಲ್, ಕಡಲೆಕಾಯಿ ಎಣ್ಣೆಯನ್ನು ಬಳಸಿ ಡೀಸೆಲ್ ಎಂಜಿನ್ ಅನ್ನು ಯಶಸ್ವಿಯಾಗಿ ಚಲಾಯಿಸಿ ತೋರಿಸಿದ್ದರು. ಅದು ಪರ್ಯಾಯ ಇಂಧನಗಳ ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸಿತ್ತು. ಆ ಮಹತ್ವದ ಘಟನೆಯು ಅಚ್ಚರಿ ಹುಟ್ಟಿಸುವುದರ ಜೊತೆಗೆ ಭವಿಷ್ಯದ ಇಂಧನ ಮೂಲಗಳ ಕುರಿತು ಹೊಸ ದೃಷ್ಟಿಕೋನವನ್ನೇ ನೀಡಿತು. ಕೆಲವು ದೇಶಗಳಲ್ಲಿ ಜೈವಿಕ ಇಂಧನ ತಯಾರಿಕೆ ಮತ್ತು ಬಳಕೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳು ಶುರುವಾದವು.

ಸಸ್ಯಗಳು, ಪ್ರಾಣಿಗಳ ಕೊಬ್ಬು, ಕೃಷಿ ತ್ಯಾಜ್ಯ, ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳು ಮತ್ತು ಪಾಚಿಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸ ಲಾಗುತ್ತದೆ. ಜೈವಿಕ ಇಂಧನ ತಯಾರಿಕೆಯ ಪ್ರಕ್ರಿಯೆ ಸಂಕೀರ್ಣವಾದರೂ ಪರಿಣಾಮಕಾರಿ. ಜೈವಿಕ ಡೀಸೆಲ್ ತಯಾರಿಕೆಗೆ ಬಳಸುವ ಹೊಂಗೆ, ಹಿಪ್ಪೆ, ಬೇವಿನ ಎಣ್ಣೆ ಅಥವಾ ಬಳಸಿದ ಅಡುಗೆ ಎಣ್ಣೆಯನ್ನು ‘ಟ್ರಾನ್ಸ್ಎಸ್ಟರಿಫಿಕೇಷನ್’ (ಪರ್ಯಾಂತರೀಕರಣ) ರಾಸಾಯನಿಕ ಪ್ರಕ್ರಿಯೆ ಮೂಲಕ ಪರಿವರ್ತಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತೈಲವನ್ನು ಆಲ್ಕೋಹಾಲ್ ಜೊತೆ ಸಂಯೋಜಿಸಿ, ಗ್ಲಿಸರಿನ್ ಬೇರ್ಪಡಿಸಿ, ಶುದ್ಧ ಜೈವಿಕ ಡೀಸೆಲ್ ಪಡೆಯ ಲಾಗುತ್ತದೆ. ಇದನ್ನು ಪೆಟ್ರೋಲಿಯಂ, ಡೀಸೆಲ್ ಜೊತೆ ಮಿಶ್ರಣ ಮಾಡಿ ವಾಹನಗಳಲ್ಲಿ ಬಳಸಬಹುದು. ಅದೇ ರೀತಿ, ಜೈವಿಕ ಎಥೆನಾಲ್ ತಯಾರಿಕೆಗೆ ಕಬ್ಬು, ಜೋಳ, ಬೀಟ್ರೂಟ್ ಮತ್ತು ಬಾರ್ಲಿಯಂತಹ ಸಕ್ಕರೆ ಅಂಶ ಹೆಚ್ಚಿರುವ ಬೆಳೆಗಳನ್ನು ಹುದುಗು ಬರುವ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯೀಸ್ಟ್ಗಳು ಸಕ್ಕರೆಯನ್ನು ಎಥೆನಾಲ್ ಆಗಿ ಪರಿವರ್ತಿಸುತ್ತವೆ. ನಂತರ ಅದನ್ನು ಶುದ್ಧೀಕರಿಸಿ ಪೆಟ್ರೋಲ್ ಜೊತೆ ಮಿಶ್ರಣ ಮಾಡಿ ಬಳಸಲಾಗುತ್ತದೆ.

ಜೈವಿಕ ಇಂಧನಗಳ ಬಳಕೆಯಿಂದ ಪರಿಸರದ ಮೇಲೆ ಗಂಭೀರವಾದ ಅಡ್ಡ ಪರಿಣಾಮಗಳಾಗುವುದಿಲ್ಲ. ಪಳೆಯುಳಿಕೆ ಇಂಧನಗಳು ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸುವ ಮೂಲಕ ಶಾಖವರ್ಧಕ ಅನಿಲಗಳ ಪ್ರಮಾಣವನ್ನು ಹೆಚ್ಚಿಸಿದರೆ, ಜೈವಿಕ ಇಂಧನಗಳನ್ನು ಉತ್ಪಾದಿಸುವ ಸಸ್ಯಗಳು ತಮ್ಮ ಬೆಳವಣಿಗೆ ಸಮಯದಲ್ಲಿ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತವೆ. ಇದು ಇಂಗಾಲದ ಚಕ್ರವನ್ನು ಸಮತೋಲನದಲ್ಲಿ ಇಡಲು ಮತ್ತು ಒಟ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲು ಸಹಕಾರಿ. ಇದರ ಜೊತೆಗೆ, ಜೈವಿಕ ಇಂಧನಗಳಲ್ಲಿ ಗಂಧಕ ಮತ್ತು ಇತರೆ ವಿಷಕಾರಿ ರಾಸಾಯನಿಕಗಳ ಪ್ರಮಾಣ ಬಹಳ ಕಡಿಮೆ ಇರುತ್ತದೆ. ಇದರಿಂದಾಗಿ, ವಾಯುಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ. ಜೈವಿಕ ಇಂಧನ ಬಳಕೆಯಾದಾಗ ಅಪಾಯಕಾರಿ ತೇಲುಕಣಗಳ ಮತ್ತು ನೈಟ್ರಸ್ ಆಕ್ಸೈಡ್ಗಳ ಹೊರಸೂಸುವಿಕೆಯು, ಪಳೆಯುಳಿಕೆ ಇಂಧನಗಳು ಹೊಮ್ಮಿಸುವುದಕ್ಕಿಂತ ಹಲವು ಪಟ್ಟು ಕಡಿಮೆ ಇರುತ್ತದೆ.

ಜೈವಿಕ ಇಂಧನ ಕ್ಷೇತ್ರದಲ್ಲಿನ ಹೂಡಿಕೆಯು ಆರ್ಥಿಕತೆ, ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸುತ್ತಿದೆ. ಈ ಇಂಧನಗಳು ಪಳೆಯುಳಿಕೆ ಇಂಧನಗಳ ಆಮದನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ವಿದೇಶಿ ವಿನಿಮಯದ ಉಳಿತಾಯವಾಗುತ್ತದೆ.

ಕಬ್ಬಿನಿಂದ ತಯಾರಾದ ಎಥೆನಾಲ್ ಅನ್ನು ಬ್ರೆಜಿಲ್ ತನ್ನ ಆರ್ಥಿಕತೆಯ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿದೆ. ಅಲ್ಲಿನ ಬಹುತೇಕ ವಾಹನಗಳು ‘ಫ್ಲೆಕ್ಸ್ ಫ್ಯೂಯಲ್’ ಎಂಜಿನ್ಗಳನ್ನು ಹೊಂದಿದ್ದು, ಎಥೆನಾಲ್ ಅಥವಾ ಪೆಟ್ರೋಲ್ ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಅಮೆರಿಕವು ಜೋಳ ವನ್ನು ಮುಖ್ಯ ಮೂಲವನ್ನಾಗಿ ಬಳಸಿಕೊಂಡು ಎಥೆನಾಲ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. ಯುರೋಪಿಯನ್ ಒಕ್ಕೂಟವು ಕಟ್ಟುನಿಟ್ಟಾದ ನೀತಿಗಳ ಮೂಲಕ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ಬೆಳವಣಿಗೆಗಳು ಜೈವಿಕ ಇಂಧನಗಳು ಪರಿಸರಸ್ನೇಹಿ ಆಯ್ಕೆಯಷ್ಟೇ ಅಲ್ಲ, ಭವಿಷ್ಯದ ಆರ್ಥಿಕತೆಯ ನಿರ್ಣಾಯಕ ಭಾಗವೂ ಆಗಿವೆ ಎಂಬುದನ್ನು ತೋರಿಸುತ್ತವೆ.

ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. 2018ರಲ್ಲಿ ಜಾರಿಗೆ ತಂದ ‘ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ’ ಅಡಿಯಲ್ಲಿ, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ. ಆರಂಭದಲ್ಲಿ ಶೇ 10ರ ಮಿಶ್ರಣದ ಗುರಿ ಹೊಂದಿದ್ದರೂ, ಅದನ್ನು ಶೇ 20ಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಯಲ್ಲಿದ್ದು, ತೈಲ ಆಮದು ವೆಚ್ಚ ಕಡಿಮೆಯಾಗಲು ಸಹಾಯ ಮಾಡುತ್ತಿದೆ. ಇದಲ್ಲದೆ, ಅಡುಗೆಗೆ ಬಳಕೆಯಾದ ಎಣ್ಣೆಯಿಂದ ಮತ್ತು ಹೊಂಗೆ, ಹಿಪ್ಪೆಗಳಿಂದ ಜೈವಿಕ ಡೀಸೆಲ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಅನೇಕ ರಾಜ್ಯಗಳಲ್ಲಿ ಜೈವಿಕ ಡೀಸೆಲ್ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕವು ‘ಜೈವಿಕ ಇಂಧನ ಅಭಿವೃದ್ಧಿ ಮಂಡಳಿ’ಯನ್ನು ರಚಿಸಿದ ಮೊದಲ ರಾಜ್ಯವಾಗಿದೆ. ಜೈವಿಕ ಇಂಧನಗಳ ಅಭಿವೃದ್ಧಿಯು ದೇಶದ ಆರ್ಥಿಕತೆಗೆ ಲಾಭ ತರುವುದಲ್ಲದೆ, ಕೃಷಿ ವಲಯದಲ್ಲಿ ಹೆಚ್ಚುವರಿ ಆದಾಯದ ಮೂಲವನ್ನು ಸೃಷ್ಟಿಸುವ ಸಾಧ್ಯತೆಗಳಿವೆ.

ಆಹಾರ ಬೆಳೆಗಳನ್ನು ಜೈವಿಕ ಇಂಧನ ಉತ್ಪಾದನೆಗಾಗಿ ಬಳಸುವುದು ಸರಿಯೇ ಎಂಬ ಪ್ರಶ್ನೆ ಮೊದಲಿನಿಂದಲೂ ಇದೆ. ಆಹಾರ ಬೆಳೆಗಳನ್ನು ಜೈವಿಕ ಇಂಧನಕ್ಕಾಗಿ ಬಳಸುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಅದರಿಂದಾಗಿ, ಕೃಷಿ ಕ್ಷೇತ್ರದ ಆರ್ಥಿಕತೆ ಸುಧಾರಿಸುತ್ತದೆ ಮತ್ತು ಮಾರಾಟವಾಗದ ಹೆಚ್ಚುವರಿ ಕೃಷಿ ಉತ್ಪನ್ನಗಳು ವ್ಯರ್ಥವಾಗುವುದು ತಪ್ಪುತ್ತದೆ. ಆದರೆ, ಆಹಾರ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಜೈವಿಕ ಇಂಧನಕ್ಕಾಗಿ ಬಳಸಿದರೆ ಆಹಾರದ ಬೆಲೆಗಳು ಹೆಚ್ಚಾಗಿ, ಬಡ ದೇಶಗಳಲ್ಲಿ ಆಹಾರ ಭದ್ರತೆಗೆ ಅಪಾಯ ತರುವ ಸಾಧ್ಯತೆ ಇದೆ. ಜಾಗತಿಕವಾಗಿಯೂ ಆಹಾರದ ಕೊರತೆ ಉಂಟಾಗಬಹುದು. ಈ ಸಮಸ್ಯೆ ಪರಿಹರಿಸಿಕೊಳ್ಳಲು ಜನ– ಜಾನುವಾರು ಸೇವಿಸುವ ಆಹಾರಕ್ಕೆ ಪೈಪೋಟಿ ನೀಡದ ಬೆಳೆಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸುವುದು ಸೂಕ್ತ. ಹೊಂಗೆ, ಹಿಪ್ಪೆ, ಜಟ್ರೋಫಾದಂತಹ ಕೃಷಿಯೇತರ ಬೆಳೆಗಳು, ಪಾಚಿ, ವ್ಯರ್ಥ ಆಹಾರ, ಅವಧಿ ಮೀರಿದ ಪ್ಯಾಕ್ ಮಾಡಿದ ಆಹಾರ, ಕೃಷಿ ತ್ಯಾಜ್ಯ ಮತ್ತು ನಗರ ತ್ಯಾಜ್ಯಗಳನ್ನು ಜೈವಿಕ ಇಂಧನ ಉತ್ಪಾದಿಸಲು ಬಳಸುವುದರಿಂದ ಆಹಾರ ಭದ್ರತೆಗೆ ಧಕ್ಕೆಯಾಗುವುದಿಲ್ಲ ಮತ್ತು ಪರಿಸರಕ್ಕೂ ಹಾನಿ ಇರುವುದಿಲ್ಲ. ಭಾರತವು ಈ ನಿಟ್ಟಿನಲ್ಲಿ ಸುಧಾರಿತ ನೀತಿಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವುದು, 2070ರ ವೇಳೆಗೆ ಶೂನ್ಯ ಇಂಗಾಲ ಉತ್ಸರ್ಜನೆಯ ಗುರಿ ತಲುಪಲು ನೆರವಾಗಲಿದೆ.

ಜೈವಿಕ ಇಂಧನ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳು ಮತ್ತು ಪ್ರಯೋಗಗಳು ನಡೆದಿವೆ. ಪ್ರಖ್ಯಾತ ಗಾಂಧೀವಾದಿ ವಿಜ್ಞಾನಿ ಡಾ. ರಘುನಾಥ್ ಅನಂತ ಮಾಶೇಲ್ಕರ್ ಭಾರತದ ಜೈವಿಕ ಇಂಧನ ನೀತಿಗಳಿಗೆ ವೈಜ್ಞಾನಿಕ ಮತ್ತು ಸಾಮಾಜಿಕ ಆಯಾಮಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವಿಜ್ಞಾನಿಗಳಾದ ಡಾ. ಅನಿಲ್ ಕುಮಾರ್ ಸಿನ್ಹಾ, ಡಾ. ಸಲೀಂ ಅಖ್ತರ್ ಫರೂಕಿ, ಡಾ. ನೀರಜ್ ಅತ್ರೇ, ಡಾ. ಜಯತಿ ತ್ರಿವೇದಿ ಮತ್ತು ಅವರ ತಂಡವು ಸೇರಿದಂತೆ ಹಲವು ವಿಜ್ಞಾನಿಗಳು, ಕೃಷಿ ತ್ಯಾಜ್ಯ ಮತ್ತು ಅಡುಗೆ ಎಣ್ಣೆಯಿಂದ ಜೈವಿಕ ಇಂಧನ ಉತ್ಪಾದಿಸುವ ವಿಧಾನಗಳ ಬಗ್ಗೆ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ’, ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಜೈವಿಕ ಇಂಧನ, ತಂತ್ರಜ್ಞಾನಗಳ ಸುಧಾರಣೆ ಮತ್ತು ವಾಣಿಜ್ಯ ಬಳಕೆಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ವಿಜ್ಞಾನಿ ಡಾ. ಎ.ಕೆ. ಸಿಂಗ್ ಅವರು ಸೆಣಬು ಮತ್ತು ಕೆನಾಫ್ (ದಾಸವಾಳ ಸೆಣಬು) ರೀತಿಯ ಬೆಳೆಗಳ ಕೃಷಿ ತ್ಯಾಜ್ಯದಿಂದ ಜೈವಿಕ ಎಥೆನಾಲ್ ಉತ್ಪಾದಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಸಂಶೋಧನೆಗಳು ಯಶಸ್ವಿಯಾದರೆ ಆಹಾರ ಬೆಳೆಗಳ ಮೇಲಿನ ಒತ್ತಡ ತನ್ನಿಂತಾನೇ ಕಡಿಮೆಯಾಗುತ್ತದೆ.

ತಮಿಳುನಾಡು ಕೃಷಿ ವಿಶ್ವವಿದ್ಯಾಲಯವು ಹೊಂಗೆ, ಲಕ್ಷ್ಮೀತರು (ಸಿಮರೂಬಾ), ಕಾಸಿಗಿಡ (ಜಟ್ರೋಫಾ) ಮತ್ತು ಇತರ ಎಣ್ಣೆಬೀಜಗಳಿಂದ ತೈಲವನ್ನು ಹೊರತೆಗೆಯುವ ವಿಧಾನಗಳು, ಆ ತೈಲವನ್ನು ಜೈವಿಕ ಡೀಸೆಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಗಳು ಮತ್ತು ಅದರ ಇಂಧನ ಗುಣಮಟ್ಟದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದೆ. ಜೈವಿಕ ಇಂಧನಗಳು ಬರೀ ಪರಿಸರಸ್ನೇಹಿ ಇಂಧನಗಳಾಗಿರದೆ, ದೇಶದ ಆರ್ಥಿಕತೆ, ರೈತರ ಜೀವನಮಟ್ಟ ಮತ್ತು ಇಂಧನ ಭದ್ರತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ವಿಶ್ವದ ಸುಸ್ಥಿರ ಭವಿಷ್ಯಕ್ಕಾಗಿ ಪರ್ಯಾಯ ಇಂಧನದ ರೂಪದಲ್ಲಿ ಜೈವಿಕ ಇಂಧನ ಸಿಕ್ಕಿದೆ. ರೈತರ ಹಿತ ಕಡೆಗಣಿಸದೆ ತಂತ್ರಜ್ಞಾನ ಹಾಗೂ ನೀತಿಗಳ ಸಮರ್ಥ ಅನುಷ್ಠಾನದಿಂದ ಜೈವಿಕ ಇಂಧನಗಳನ್ನು ಭವಿಷ್ಯದ ಇಂಧನ ಮೂಲವನ್ನಾಗಿ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.