ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ.

ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ.

ಸ್ವಾತಂತ್ರ್ಯ ಕೊಡುತ್ತೇವೆ; ಆದರೆ, ವಿದೇಶಿ ವ್ಯಾಪಾರ, ಮಿಲಿಟರಿ, ನೈಸರ್ಗಿಕ ಸಂಪನ್ಮೂಲ, ಹಣಕಾಸು ನಿರ್ವಹಣೆ, ಇತ್ಯಾದಿ ವಿಷಯಗಳಲ್ಲಿ ನೀವು ಸ್ವಾಯತ್ತತೆಯನ್ನು ಬಯಸಬಾರದು ಎನ್ನುವುದು ಫ್ರಾನ್ಸ್ನ ಷರತ್ತಾಗಿತ್ತು. ಆ ದೇಶಗಳಿಗೆ ತಮಗೆ ಬೇಕಾದ ನಾಯಕರನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಫ್ರಾನ್ಸ್ ತನಗೆ ಬೇಕಾದವರನ್ನು ಅಧಿಕಾರಕ್ಕೆ ತರುತ್ತಿತ್ತು. ವಾಸ್ತವದಲ್ಲಿ ಇಂದಿಗೂ ಅವು ವಸಾಹತುಗಳೇ. ದೇಶದ ಆರ್ಥಿಕತೆಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಜನ ಏನು ಯೋಚಿಸುತ್ತಾರೆ, ಅವರ ಅವಶ್ಯಕತೆಗಳೇನು ಅನ್ನುವುದನ್ನು ಯೋಚಿಸುವುದಕ್ಕೂ ಸರ್ಕಾರ ತಯಾರಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಲೂಟಿಯ ಭಾಗವಾಗುತ್ತಾ ಜಗತ್ತಿನಲ್ಲೇ ಅತ್ಯಂತ ಶ್ರೀಮಂತರ ಪಟ್ಟಿಗೆ ಸೇರುತ್ತಾ ಹೋದರು. ಅವರು ಆಳಿದ ದೇಶಗಳು ಮಾತ್ರ ಹೆಚ್ಚೆಚ್ಚು ಬಡವಾಗುತ್ತಾ, ಜಗತ್ತಿನಲ್ಲೇ ಅತ್ಯಂತ ಬಡರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡವು.

ಎರಡು ಶತಮಾನಗಳ ದಮನಕಾರಿ ಸಾಮ್ರಾಜ್ಯ ಶಾಹಿ ಹಣಕಾಸು ಹಾಗೂ ವಿತ್ತೀಯ ಕ್ರಮಗಳಿಂದ ದೇಶ ಆರ್ಥಿಕವಾಗಿ ಸೊರಗಿತು. ನೈಸರ್ಗಿಕ ಸಂಪತ್ತು ಬರಿದಾಗುತ್ತಾ ಸಾಗಿತು. ವಸಾಹತುಗಳಿಂದ ಖನಿಜ ಹಾಗೂ ಮಾನವ ಸಂಪನ್ಮೂಲದ ಲೂಟಿ ಮಾಡುವುದಕ್ಕೆ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮದೇ
ದಾರಿಯನ್ನು ಕಂಡುಕೊಂಡಿದ್ದವು. ತನ್ನ ವಸಾಹತು
ಗಳೆಲ್ಲಾ ಆರ್ಥಿಕವಾಗಿ ಒಟ್ಟಿಗಿದ್ದರೆ ಅಲ್ಲಿಯ ಸಂಪನ್ಮೂಲಗಳನ್ನು, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಸಲೀಸು ಅನ್ನುವುದು ಫ್ರಾನ್ಸ್ನ ಆಲೋಚನೆಯಾಗಿತ್ತು.

ಅದಕ್ಕಾಗಿ ತನ್ನ ವಸಾಹತುಗಳಿಗೆಲ್ಲಾ ಅನ್ವಯಿಸುವಂತೆ ‘ಸಿಎಫ್ಎ ಫ್ರಾಂಕ್’ ಎಂಬ ಕರೆನ್ಸಿಯನ್ನು ಚಲಾವಣೆಗೆ ತಂದಿತು. ಪಶ್ಚಿಮ ಹಾಗೂ ಕೇಂದ್ರ ಆಫ್ರಿಕಾದ ಹದಿನೈದು ದೇಶಗಳಲ್ಲಿ ‘ಸಿಎಫ್ಎ’ ಚಾಲ್ತಿಗೆ ಬಂದಿತು. ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸುವುದಕ್ಕೆ ಆಫ್ರಿಕಾದ ದೇಶಗಳು ಇದನ್ನು ಯುರೊಗೆ ವಿನಿಮಯ ಮಾಡಿಕೊಳ್ಳಬೇಕು. ವಿನಿಮಯ ದರವನ್ನು ಅಷ್ಟೇ ಅಲ್ಲ, ‘ಸಿಎಫ್ಎ’ಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನೂ ಫ್ರಾನ್ಸ್ ತೆಗೆದುಕೊಳ್ಳುತ್ತಿದೆ. ವಸಾಹತುಗಳು ತಮ್ಮ ವಿದೇಶಿ ವಿನಿಮಯದ ಮೀಸಲನ್ನೆಲ್ಲಾ ಫ್ರೆಂಚ್ ಖಜಾನೆಯಲ್ಲಿ ಇಡಬೇಕಿತ್ತು. ಈಗಲೂ ಶೇ 50ರಷ್ಟನ್ನು ಇಡಬೇಕು.

ಫ್ರಾನ್ಸ್ ಬೇರೆ ದೇಶಗಳಿಂದ ತನಗೆ ಬೇಕಾದ ಸರಕುಗಳನ್ನು ಆಮದು ಮಾಡಿಕೊಳ್ಳಲು ಆಫ್ರಿಕಾ ದವರ ವಿದೇಶಿ ವಿನಿಮಯವನ್ನು ಬಳಸಿಕೊಳ್ಳುತ್ತಿದೆ. ವಸಾಹತುಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ‘ಸಿಎಫ್ಎ’ ಬಳಸಿಕೊಳ್ಳುತ್ತಿದೆ. ಇದರಿಂದ ಡಾಲರ್ ಬಳಕೆಯನ್ನು ಮಿತಗೊಳಿಸಿಕೊಳ್ಳಲು ಫ್ರಾನ್ಸ್ಗೆ ಸಾಧ್ಯವಾಯಿತು. ಈ ಮೂಲಕ ವಿನಿಮಯ ದರದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದಕ್ಕೂ ಅನುಕೂಲವಾಯಿತು.

ಆಫ್ರಿಕಾದವರಿಗೆ ತಮ್ಮದೇ ಆದ ಕರೆನ್ಸಿಯೇ ಇಲ್ಲ. ಹಾಗಾಗಿ, ಅವರಿಗೆ ತಮಗೆ ಬೇಕಾದಂತಹ ಹಣಕಾಸು ನೀತಿಯನ್ನು ರೂಪಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಒಂದು ದೇಶಕ್ಕೆ ಕನಿಷ್ಠ ತನಗೆ ಬೇಕಾದಂತೆ ಹಣಕಾಸು ಹಾಗೂ ವಿತ್ತೀಯ ನೀತಿಯನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯವಾದರೂ ಇರಬೇಕು. ಇಲ್ಲದಿದ್ದರೆ ಆರ್ಥಿಕ ಸಾರ್ವಭೌಮತ್ವ ಕೇವಲ ಘೋಷಣೆಯಾಗುತ್ತದೆ. ಇನ್ನೂ ದುರಂತ ವೆಂದರೆ, ಅವರ ದೇಶದ ನೈಸರ್ಗಿಕ ಸಂಪನ್ಮೂಲವೂ ಅವರದ್ದಲ್ಲ. ಅವು ಬಹುರಾಷ್ಟ್ರೀಯ ಕಂಪನಿಗಳ ಒಡೆತನದಲ್ಲಿವೆ. ತಮ್ಮದೇ ಸಂಪನ್ಮೂಲ ವನ್ನು ಕೂಡ ತಮ್ಮ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಜನರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವುದಕ್ಕೂ ವಿದೇಶಿ ಸಾಲವನ್ನು ಆಶ್ರಯಿಸಬೇಕಾಗಿದೆ. ಸಾಲದ ಜೊತೆಗೆ ಅವರ ನಿರ್ಬಂಧಗಳನ್ನು ಒಪ್ಪಿಕೊಳ್ಳಬೇಕಾಗಿದೆ. ‘ಐಎಂಎಫ್’ ಸೂಚಿಸುವ ಕ್ರಮದಿಂದ ಆರ್ಥಿಕ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಕೈಗಾರಿಕಾ ಅಭಿವೃದ್ಧಿಯೂ ಆಗುವುದಿಲ್ಲ. ಅಂತಿಮವಾಗಿ ಇವು ಅವಶ್ಯಕ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಾ, ಮುಂದುವರಿದ ರಾಷ್ಟ್ರಗಳ ಶಾಶ್ವತ ಮಾರುಕಟ್ಟೆ ಗಳಾಗಿವೆ.

ಇಂದು ಆಫ್ರಿಕಾ ಒಡೆದು ಛಿದ್ರವಾಗಿದೆ. ವಸಾಹತುಶಾಹಿಗಳು ಆಫ್ರಿಕಾವನ್ನು ಆಕ್ರಮಿಸಿ ಕೊಳ್ಳುವ ಮೊದಲು ಅಲ್ಲಿಯ 55 ದೇಶಗಳ ನಡುವೆ ಗಡಿಗಳಿರಲಿಲ್ಲ. ಅವುಗಳ ನಡುವೆ ಗೆರೆಗಳನ್ನು ಎಳೆದದ್ದು ವಿದೇಶಿಗರು. ಆ ನಕ್ಷೆ ರೂಪುಗೊಂಡಿದ್ದು ಬರ್ಲಿನ್ನಲ್ಲಿ. ತಮ್ಮ ಆಳ್ವಿಕೆಗೆ ಅನುಕೂಲವಾಗುವಂತೆ ಭೌಗೋಳಿಕ ಗಡಿಗಳನ್ನು ರೂಪಿಸಿದರು.

ವಸಾಹತುಶಾಹಿ ಆಳ್ವಿಕೆ ನಿಂತಿರುವುದೇ ಶೋಷಣೆಯ ಮೇಲೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ದೇಶಗಳು ಬೆಳೆಯುವುದು ಅವರಿಗೆ ಬೇಕಿರಲಿಲ್ಲ. ಸ್ವಾತಂತ್ರ್ಯ ಪಡೆದ ನಂತರವೂ ಅವುಗಳಿಗೆ ತಮಗೆ ಬೇಕಾದ ಸರ್ಕಾರವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಿಲ್ಲ. ತಮಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸುವ, ಒಪ್ಪದವರನ್ನು ಉರುಳಿಸುವ ಸ್ವಾತಂತ್ರ್ಯವನ್ನು ತಾವೇ ಉಳಿಸಿ ಕೊಂಡರು. ಅದಕ್ಕಾಗಿ ಚುನಾವಣೆಯಲ್ಲಿ ಕುತಂತ್ರ ನಡೆಸಿದರು. ಮಿಲಿಟರಿ ದಂಗೆಗಳನ್ನೂ ಆಯೋಜಿಸಿ ದರು. ಭಯೋತ್ಪಾದನೆಯನ್ನು ಹುಟ್ಟುಹಾಕಿದರು. ನೆರೆಯ ರಾಷ್ಟ್ರಗಳನ್ನು ಎತ್ತಿಕಟ್ಟಿದರು. ದಿನವೂ ಒಂದಲ್ಲಾ ಒಂದು ಹೋರಾಟದಲ್ಲಿ ತೊಡಗಿರುವ ಆ ದೇಶಗಳು ಮಿಲಿಟರೀಕರಣಗೊಂಡಿವೆ. ಹಾಗಿದ್ದಾಗ ಈಗ ದಿಢೀರನೆ ಆಫ್ರಿಕಾದ ದೇಶಗಳು ಉದಾರವಾದಿ ಪ್ರಜಾಸತ್ತಾತ್ಮಕ ದೇಶಗಳಾಗಬೇಕೆಂದು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ.

ದಿನ ಬೆಳಗಾದರೆ ಗಲಭೆ ನಡೆಯುವ ದೇಶಗಳಲ್ಲಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಹೋರಾಟಗಳು ರೂಪುಗೊಳ್ಳುವುದು ಸುಲಭವಲ್ಲ. ಛಿದ್ರವಾಗಿರುವ ದೇಶಗಳಲ್ಲಿ ಅಂತಹ ಪ್ರಯತ್ನಗಳು ಸಫಲವಾಗುವುದು ಇನ್ನೂ ಕಷ್ಟ. ಮಿಲಿಟರೀಕರಣಗೊಂಡ ಈ ದೇಶಗಳಲ್ಲಿ ಮಿಲಿಟರಿ ದಂಗೆಗಳಾಗುತ್ತಿರುವುದು ಸಹಜ. ಎಷ್ಟೋ ದೇಶಗಳಲ್ಲಿ ಒಂದೇ ಕುಟುಂಬ ಹಲವು ದಶಕಗಳ ಕಾಲ ಆಳ್ವಿಕೆ ನಡೆಸಿದೆ. ಜನ ಬೇಸತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸದ, ವಿದೇಶಿಯರ ಹಿತಾಸಕ್ತಿಗಾಗಿ ದುಡಿಯುತ್ತಿರುವ ಭ್ರಷ್ಟ ಸರ್ಕಾರಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಅಂತಹ ನಾಯಕರನ್ನು ಕೊಲೆ ಮಾಡಲಾಗುತ್ತಿದೆ.

ಆಫ್ರಿಕಾ ಒಂದಾಗಬೇಕು, ಒಂದು ಸಂಯುಕ್ತರಾಷ್ಟ್ರವಾಗಿ ರೂಪುಗೊಳ್ಳಬೇಕು ಎನ್ನುವುದು ಆಫ್ರಿಕಾದ ಜನತೆಯ ಆಸೆ. ಎಲ್ಲಾ ವಿದೇಶಿ ನಿಯಂತ್ರಣಗಳಿಂದ ಮುಕ್ತರಾಗಬೇಕು; ಸಾಮ್ರಾಜ್ಯಶಾಹಿ ಶೋಷಣೆಯ ಸಾಧನವಾದ ‘ಸಿಎಫ್ಎ’ ಬದಲಿಗೆ ತಮ್ಮದೇ ಕರೆನ್ಸಿಯನ್ನು ಕಂಡುಕೊಳ್ಳಬೇಕು; ತಮ್ಮ ಅವಶ್ಯಕತೆಗೆ ತಕ್ಕಂತೆ ಆರ್ಥಿಕತೆಯನ್ನು ರೂಪಿಸಿಕೊಳ್ಳಬೇಕು; ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ತಾವೇ ಅನುಭವಿಸಬೇಕು ಎಂದು ಅವರಿಗನ್ನಿಸಿದೆ. ಬರ್ಕಿನಾ ಫಾಸೊ ರಾಷ್ಟ್ರದ ಯುವ ಅಧ್ಯಕ್ಷ ಇಬ್ರಾಹಿಂ ಟ್ರವೋರೆಯಂತಹ ನಾಯಕರು ಇಂತಹ ಭರವಸೆಯನ್ನು ಮೂಡಿಸುತ್ತಿದ್ದಾರೆ. ಗಣಿ ಕೈಗಾರಿಕೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದಾರೆ. ರಸ್ತೆ ಮೊದಲಾದ ಮೂಲಸೌಕರ್ಯ ಒದಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕೃಷಿಯನ್ನು ಸುಧಾರಿಸಿ, ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು, ಅದಿರುಗಳನ್ನು ಪರಿಷ್ಕರಿಸಿ, ಅದರ ಮೌಲ್ಯವನ್ನು ಹೆಚ್ಚಿಸಿ, ನಂತರ ಮಾರುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದರಿಂದ ಉದ್ಯೋಗವೂ ಸೃಷ್ಟಿಯಾಗುತ್ತದೆ. ಆದಾಯವೂ ಹೆಚ್ಚುತ್ತದೆ. ಈ ಪ್ರಯತ್ನಗಳೆಲ್ಲಾ ವಿದೇಶಿ ಹಿತಾಸಕ್ತಿಗೆ ಮಾರಕವಾಗಿವೆ. ಈಗ ಪಾಶ್ಚಾತ್ಯರಿಗೆ ಇಲ್ಲಿಯ ಖನಿಜಗಳ ತೀವ್ರ ಅವಶ್ಯಕತೆಯಿದೆ. ಅದಕ್ಕಾಗಿ ಅವರು ಜಗತ್ತನ್ನೆಲ್ಲಾ ಬೇಟೆಯಾಡುತ್ತಿದ್ದಾರೆ. ಉಕ್ರೇನ್ ಮೇಲೆ ಟ್ರಂಪ್ ಹಾಕುತ್ತಿರುವ ಒತ್ತಡ, ಗ್ರೀನ್ಲ್ಯಾಂಡ್ ವಶಪಡಿಸಿಕೊಳ್ಳಲು ತೋರುತ್ತಿರುವ ತವಕ, ಇವೆಲ್ಲದರ ಹಿಂದಿರುವುದು ನೈಸರ್ಗಿಕ ಸಂಪತ್ತಿನ ಆಕರ್ಷಣೆ. ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು, ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಅವರಿಗಿದು ಸುಲಭದ ಮಾರ್ಗವಾಗಿದೆ. ಸಹಜವಾಗಿಯೇ ಸ್ವಾಭಿಮಾನದ ಹೋರಾಟವನ್ನು ಹತ್ತಿಕ್ಕಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಇದನ್ನು ಎದುರಿಸುವುದಕ್ಕೆ ಬರ್ಕಿನಾ ಫಾಸೊ, ಮಾಲಿ ಹಾಗೂ ನೈಜೆರ್ ದೇಶಗಳು ಎಸ್ಇಎಸ್–ಸಹೇಲಿಯನ್ ರಾಷ್ಟ್ರಗಳ ಒಕ್ಕೂಟವನ್ನು ರಚಿಸಿಕೊಂಡಿವೆ. ಜನರ ಬೆಂಬಲವೂ ಸಿಗುತ್ತಿದೆ. ಈಗಲಾದರೂ ಆಫ್ರಿಕಾ ನಿಜವಾದ ಸ್ವಾತಂತ್ರ್ಯವನ್ನು ಕಾಣಬಹುದೇ? ಒಂದು ಸಂಯುಕ್ತ ಸಂಸ್ಥಾನವಾಗಿ ರೂಪುಗೊಳ್ಳಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.