ಭಾರತ ಇಂದು ಜಗತ್ತಿನ ಅಕ್ಕಿಯ ಕಣಜ ಎನ್ನುವ ಮಟ್ಟದಲ್ಲಿದೆ. ಜಾಗತಿಕ ಅಕ್ಕಿ ವಹಿವಾಟಿನ ಸುಮಾರು ಶೇ 40 ಪಾಲು ನಮ್ಮದೇ. ಹೀಗಿರುವಾಗ, ಇದು ಕೇವಲ ವಾಣಿಜ್ಯಿಕ ಶಕ್ತಿಯಷ್ಟೇ ಅಲ್ಲ – ರಾಜಕೀಯ ಪ್ರಾಬಲ್ಯವೂ ಹೌದು. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೋಟ್ಯಂತರ ಬಡಜನರ ಅನ್ನ ಭಾರತದ ಅಕ್ಕಿಯ ಮೇಲೆ ಅವಲಂಬಿತವಾಗಿದೆ. ಈ ವಾಸ್ತವವೇ ಪಶ್ಚಿಮದ ಶಕ್ತಿಗಳಿಗೆ ಅಸಹನೀಯ. ಭಾರತದ ಅಕ್ಕಿ ಅಗ್ಗವಾಗಿರುವುದೇ ಅಪರಾಧ ಎಂಬಂತಾಗಿಬಿಟ್ಟಿದೆ.