ಸರ್ವರಿಗೂ ಸಮಾನತೆ, ಘನತೆಯನ್ನು ಖಾತರಿಪಡಿಸುವ ಸಂವಿಧಾನದ ಆಶಯಗಳು ಪೂರ್ಣರೂಪದಲ್ಲಿ ಅನುಷ್ಠಾನಗೊಂಡಿಲ್ಲದ ಕಾರಣದಿಂದಾಗಿ, ಕಾರ್ಮಿಕ ಕಾಯ್ದೆಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಳಿದುಕೊಂಡಿವೆ. ಆ ಸಮಸ್ಯೆಗಳನ್ನು ಬಗೆಹರಿಸಿ ಕಾಯ್ದೆಗಳನ್ನು ಮಾನವೀಯಗೊಳಿಸುವ ಬದಲಾಗಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ನಾಲ್ಕು ಸಂಹಿತೆಗಳಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದು ದುಡಿಯುವ ವರ್ಗವನ್ನು– ನಿರ್ದಿಷ್ಟವಾಗಿ ಮಹಿಳಾ ದುಡಿಮೆಗಾರರನ್ನು ಇನ್ನಷ್ಟು ದುಃಸ್ಥಿತಿಗೆ ತಳ್ಳಲಿದೆ. ಹೊಸ ಸಂಹಿತೆಯ ಭಾಗವಾಗಿ ರಾಜ್ಯ ಸರ್ಕಾರವು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಉದ್ದಿಮೆಗಳಲ್ಲಿ ಮಹಿಳೆಯರು ದುಡಿಯುವುದನ್ನು ಕಡ್ಡಾಯಗೊಳಿಸಲು ಅನುವಾಗುವಂತೆ ಕಾರ್ಖಾನೆ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಟಿದೆ; ಮಹಿಳೆಯರಿಗೆ ಕನಿಷ್ಠ ವೇತನದಲ್ಲಿ ಅಪಾರ ತಾರತಮ್ಯವನ್ನು ಸೃಷ್ಟಿಸಲು ಹೊರಟಿದೆ.

ದುಡಿಯುವ ಮಹಿಳೆಯರಿಗೆ ಸುರಕ್ಷತೆ, ಸೌಕರ್ಯಗಳು ಇಲ್ಲದ ಸ್ಥಿತಿಯಲ್ಲಿ ಕಾರ್ಮಿಕರಿಂದ ಮತ್ತಷ್ಟು ಬೆವರು ಹರಿಸುವ ಲಾಭಕೋರತನವನ್ನು ಪ್ರೋತ್ಸಾಹಿಸಲು ‘ಕಾರ್ಮಿಕ ಸಂಹಿತೆ’ ಮುಂದಾಗಿದೆ. ಇದನ್ನು ವಿರೋಧಿಸಲು ದುಡಿಯುವ ಮಹಿಳೆಯರೆಲ್ಲರೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಡಿ (ಜೆಸಿಟಿಯು) ಒಗ್ಗೂಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಒಗ್ಗೂಡುವಿಕೆಯ ಭಾಗವಾಗಿ ಗಾರ್ಮೆಂಟ್ಸ್, ಫ್ಯಾಕ್ಟರಿ, ತೋಟಗಾರಿಕೆ, ಗ್ರಂಥಾಲಯ, ಟೋಲ್, ಆಟೊಮೊಬೈಲ್, ನಗರ ಸಾರಿಗೆ, ಆರ್ಎಂಸಿ, ರೈಲುಗಳ ಚಾಲನೆ, ನಗರ ಸ್ವಚ್ಛತೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರು ಮೇ 15ರಂದು ಸಭೆ ಸೇರಿದ್ದರು. ಆ ಸಭೆ, ಮೂಲಭೂತ ಸೌಕರ್ಯಗಳೂ ಇಲ್ಲದ ಪರಿಸರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳಲು ವೇದಿಕೆಯಾಯಿತು.

ಕಾರ್ಮಿಕ ಮಹಿಳೆಯರು ಎದುರಿಸುತ್ತಿರುವ ಸಂಕಟಗಳು ಒಂದೆರಡು ಬಗೆಯವಲ್ಲ: ಗಾರ್ಮೆಂಟ್ಸ್ಗಳಲ್ಲಿ ಸೂಜಿ ಮೊನೆಯನ್ನು ದಿಟ್ಟಿಸಿಕೊಂಡೇ ಕೆಲಸ ಮಾಡಬೇಕು, ಎಚ್ಚರ ತಪ್ಪಿದರೆ ಬೆರಳು ಸೂಜಿಯಡಿಗೆ ಸಿಕ್ಕಿಕೊಳ್ಳುತ್ತದೆ. ಕೆಲಸದ ನಡುವೆ ಶೌಚಕ್ಕೆ ಹೋಗುವಂತಿಲ್ಲ. ಟೋಲ್ನಲ್ಲಿ 2– 3 ಬೂತ್ಗಳ ಕಟ್ಟೆಗಳನ್ನು ದಾಟಿಕೊಂಡು ಓಡಾಡಬೇಕಾದುದರಿಂದ ಕಾಲುಗಳಿಗೆ ಅಸಾಧ್ಯ ನೋವುಂಟಾಗುತ್ತದೆ. ಸ್ವಚ್ಛತೆಯ ಕೆಲಸ ಮಾಡುವವರು ಆಸ್ಪತ್ರೆ ತ್ಯಾಜ್ಯ, ಗಾಜು, ಚೂಪಾದ ವಸ್ತುಗಳು, ನ್ಯಾಪ್ಕಿನ್, ಡೈಪರ್ನಂತಹ ಅಪಾಯಕಾರಿ ಕಸವನ್ನು ಸುರಕ್ಷತಾ ಸಲಕರಣೆಗಳಿಲ್ಲದೆ ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗಿದೆ.

ಲೋಗೊ, ಸ್ಟಿಕ್ಕರ್ ಉತ್ಪಾದಿಸುವ ಫ್ಯಾಕ್ಟರಿಗಳಲ್ಲಿ 12 ಗಂಟೆ ನಿಂತೇ ಕೆಲಸ ಮಾಡಬೇಕು. ಜೀನ್ಸ್ ಫ್ಯಾಕ್ಟರಿಯಲ್ಲಿ 8 ಗಂಟೆ ಚಕ್ಕಂಬಕ್ಕಳ ಕೂತು ಕೆಲಸ ಮಾಡುವುದು ಅಗತ್ಯ. ಮಹಿಳಾ ಕಾರ್ಮಿಕರನ್ನು ಕೆಲಸದ ಸ್ಥಳಕ್ಕೆ ಕರೆತರುವ ಸಾರಿಗೆ ವ್ಯವಸ್ಥೆಯೂ ಅಸಮರ್ಪಕವಾಗಿದೆ. 25 ಜನ ಕೂರಬಹುದಾದ ಬಸ್ಸಿನಲ್ಲಿ 50 ಜನರನ್ನು ತುರುಕುವುದಿದೆ.

ತೋಟಗಳಲ್ಲಿ ದುಡಿಯುವವರು, 20 ಲೀಟರ್ ಔಷಧ ಇರುವ ಎರಡು ಬ್ಯಾರೆಲ್ಗಳನ್ನು ಬೆನ್ನ ಮೇಲೆ ಹೊತ್ತು 150– 200 ಅಡಿ ಉದ್ದವಿರುವ ಕಾಫಿ ಗಿಡಗಳ ಸಾಲಿಗೆ ಸ್ಪ್ರೇ ಮಾಡುವ ಸ್ಥಿತಿಯಿದೆ. ಕಾಟಿ, ಆನೆ, ಹಾವು, ಕಾಡುಹಂದಿಗಳಿಂದ ಅಪಾಯವಿದ್ದರೂ ಕೆಲಸ ಮಾಡಬೇಕು.

ರೈಲಿನ ಚಾಲಕಿಯರಿಗೂ ಸಮಸ್ಯೆಗಳು ತಪ್ಪಿದ್ದಲ್ಲ. 10 ಗಂಟೆಗಳ ಕೆಲಸ. ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಮೂತ್ರವನ್ನು ತಡೆದುಕೊಳ್ಳುವುದರಿಂದ ಮೂತ್ರದ ಸೋಂಕು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಪ್ಯಾಡ್ ಅನ್ನು ದೀರ್ಘಕಾಲ ಬಳಸುವುದರಿಂದ ತೊಂದರೆಯಾಗುತ್ತದೆ. ಸದಾ ನಿಂತು ಕೆಲಸ ಮಾಡುವುದರಿಂದ ಗರ್ಭಪಾತವಾಗುವ ಸಂಭವವಿದೆ. ಹಾಲು ಕುಡಿಯುವ ಹಸುಗೂಸಿನ ಪಾಲನೆಗಾಗಿ ಎರಡು ತಿಂಗಳ ಕಾಲ ಹೆಚ್ಚಿನ ಸಮಯದ ಕೆಲಸ ಕೊಡಬೇಡಿ ಎಂದು ಕೇಳಿಕೊಂಡವರಿಗೆ, ಮಗುವಿನ ನೆಪದಲ್ಲಿ ಕೆಲಸ ತಪ್ಪಿಸಿಕೊಳ್ಳುತ್ತಾರೆಂದು ಟೀಕೆ.

ನಗರ ಸಾರಿಗೆಯಲ್ಲಿನ ನಿರ್ವಾಹಕಿಯರು, ಪ್ರತಿದಿನ ಸುಮಾರು 1,000 ಜನರೊಂದಿಗೆ ಒಡನಾಡಬೇಕು. ಕಂಡಕ್ಟರ್ ಕೆಲಸ, ಶೌಚಕ್ಕೂ ಪುರುಸೊತ್ತು ದೊರೆಯದಷ್ಟು ಒತ್ತಡದ್ದು. ನೀರು ಸರಿಯಾಗಿ ಕುಡಿಯದಿರುವುದರಿಂದಾಗಿ ಕೆಲವು ಚಾಲಕಿಯರು ಕಿಡ್ನಿ ಸ್ಟೋನ್ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರು ದುಡಿಯುವ ಬಹುತೇಕ ಕಡೆಗಳಲ್ಲಿ ಅಸಮರ್ಪಕ ಶೌಚಾಲಯ ವ್ಯವಸ್ಥೆಯಿದ್ದರೆ, ಕೆಲವು ಸ್ಥಳಗಳಲ್ಲಿ ಶೌಚಾಲಯಗಳೇ ಇಲ್ಲ. ದೇಹಬಾಧೆ ತೀರಿಸಿಕೊಳ್ಳಲು ಖಾಲಿ ನಿವೇಶನ ಹುಡುಕಿ ಹೋಗುವ ಅಥವಾ ಮರ– ಗಿಡಗಳು, ವಾಹನಗಳ ಮರೆಯಲ್ಲಿ ನಿರಾಳವಾಗುವ ದುರವಸ್ಥೆ ಕೆಲವರದು. ಐವತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಶೌಚಾಲಯ ಇಲ್ಲದ ಫ್ಯಾಕ್ಟರಿಯೂ ಇದೆ.

ಕೆಲವು ಕಾರ್ಖಾನೆಗಳು ವಿಚಿತ್ರ ನಿಯಮಗಳನ್ನು ರೂಪಿಸಿಕೊಂಡಿರುತ್ತವೆ. ದೇಹದ ತೂಕ 40 ಕೆ.ಜಿ.ಗಿಂತ ಹೆಚ್ಚಿದ್ದರೆ ಕೆಲಸಕ್ಕೆ ತೆಗೆದುಕೊಳ್ಳದ ನಿಯಮ ಫ್ಯಾಕ್ಟರಿಯೊಂದರಲ್ಲಿತ್ತು. ವಿವಾಹಿತರನ್ನು ಉದ್ಯೋಗಕ್ಕೆ ತೆಗೆದುಕೊಳ್ಳದ ಫ್ಯಾಕ್ಟರಿಗಳೂ ಇದ್ದವು. ಶೌಚಕ್ಕೆ ಹೋಗಬೇಕೆಂದರೆ, ರಿಜಿಸ್ಟರ್ನಲ್ಲಿ ಬರೆದು ಸಹಿ ಮಾಡಿ ಹೋಗುವ ಪದ್ಧತಿಯೂ ಕೆಲವೆಡೆ ಇದೆ.

ಆಶಾ ಕಾರ್ಯಕರ್ತೆಯರ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಅವರಿಗೆ ಸಿಗುವ ವೇತನ, ಪ್ರೋತ್ಸಾಹಧನ ಕಡಿಮೆ. ಸೊಳ್ಳೆ ಲಾರ್ವಾ ಸಮೀಕ್ಷೆಗಾಗಿ ಮನೆಯೊಂದರ ಬಾತ್ ರೂಮಿನಿಂದ ಹಿಡಿದು ಟ್ಯಾಂಕ್ವರೆಗೂ ಪರಿಶೀಲಿಸಿದರೆ ₹1 ಪ್ರೋತ್ಸಾಹಧನ ದೊರೆಯುತ್ತದೆ. ಕುಟುಂಬದ ಸದಸ್ಯರೆಲ್ಲರೂ ರಜೆಯ ದಿನದಂದು ಸಿಗುವುದರಿಂದ, ರಜೆ ದಿನಗಳಲ್ಲಿ ಮನೆ ಮನೆಗೆ ಹೋಗಿ ಅವರ ಅನಾರೋಗ್ಯದ ವಿವರಗಳನ್ನು ದಾಖಲಿಸಬೇಕಾಗಿದೆ.

ರಾತ್ರಿ ಪಾಳಿಯಿಂದ ನಿದ್ದೆ ಏರುಪೇರಾಗಿ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದಿದೆ; ಪಿಸಿಒಡಿ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಗರ್ಭಕೋಶದ ಸಮಸ್ಯೆಗಳು ಕೆಲವರಲ್ಲಿ ಕಾಣಿಸಿಕೊಳ್ಳುತ್ತಿವೆ. ಮನಃಶಾಸ್ತ್ರಜ್ಞರ ಪ್ರಕಾರ, ರಾತ್ರಿ ಪಾಳಿಯಲ್ಲಿ ನಿದ್ದೆಗೆಡುವುದರಿಂದಾಗಿ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ; ಇದು ಮಹಿಳೆಯರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಪ್ರಜನನ ಆರೋಗ್ಯ (ಮುಟ್ಟು, ಮುಟ್ಟು ನಿಲ್ಲುವುದು, ಬಸಿರು, ಬಾಣಂತನ, ಪಿಸಿಒಡಿ) ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ದುಡಿಮೆಗೆ ಮೆಚ್ಚುಗೆಯ ಬದಲು ಟೀಕೆ, ಬೈಗುಳಗಳೇ ಹೆಚ್ಚಾದಾಗ ಮಹಿಳೆಯರಲ್ಲಿ ಖಿನ್ನತೆ, ಭೀತಿ, ಕಿರಿಕಿರಿ, ಸಿಡುಕು ಹೆಚ್ಚಾಗುತ್ತದೆ; ಆತ್ಮಹತ್ಯೆಯ ಯೋಚನೆಯನ್ನೂ ಕೆಲವರು ಮಾಡಬಹುದು.

ಉದ್ಯೋಗ, ವೇತನ ಹಾಗೂ ಸಾಮಾಜಿಕ ಭದ್ರತೆ ಇಲ್ಲದ ಅಸಂಘಟಿತ ಕ್ಷೇತ್ರದಲ್ಲಿ ಶೇ 94ರಷ್ಟು ಮಹಿಳೆಯರು ದುಡಿಯುತ್ತಿರುವುದು ಸಮಸ್ಯೆಯ ಬೃಹತ್ ಸ್ವರೂಪವನ್ನು ಸೂಚಿಸುವಂತಿದೆ. ಶೇ 6ರಷ್ಟು ಮಹಿಳೆಯರಷ್ಟೇ ಸುರಕ್ಷಿತ– ಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್ಸಿಆರ್ಬಿ) ಅಂಕಿಅಂಶಗಳ ಪ್ರಕಾರ, 2020ರಲ್ಲಿ ವರದಿಯಾದ ಮಹಿಳಾ ದೌರ್ಜನ್ಯಗಳು 3,71,503. ಈ ಪ್ರಮಾಣ 2021ರಲ್ಲಿ 4,28,278 ಹಾಗೂ 2022ರಲ್ಲಿ 4,45,256 ಇತ್ತು. 2024ರಲ್ಲಿ, ಭಾರತದ ಅಗ್ರ 10 ಕಂಪನಿಗಳಲ್ಲಿ ಲೈಂಗಿಕ ಕಿರುಕುಳದ ಪ್ರಮಾಣ ಶೇ 79ರಷ್ಟು ಹೆಚ್ಚಾಗಿತ್ತು ಎಂದು? ‘ಈಟಿಎಚ್ಆರ್’ ವಾರ್ಷಿಕ ವರದಿ ಹೇಳಿದೆ. ದಮನ ಮತ್ತು ತಾರತಮ್ಯವನ್ನೇ ತಂತ್ರವಾಗಿಸಿಕೊಂಡಿರುವ ಪಿತೃ ಸಂಸ್ಕೃತಿಯ ಆಳ್ವಿಕೆ ಮನೆಯ ಒಳಗೂ, ಹೊರಗೂ ಜಾರಿಯಲ್ಲಿರುವುದನ್ನು ಮಹಿಳಾ ದೌರ್ಜನ್ಯಗಳ ಹೆಚ್ಚಳ ಸೂಚಿಸುವಂತಿದೆ.

ಒಳಗೂ, ಹೊರಗೂ ಸಮಸ್ಯೆಗಳ ಚಕ್ರವ್ಯೂಹದಲ್ಲಿ ಸಿಲುಕಿದ್ದರೂ, ಘನತೆಯ ಬದುಕಿಗಾಗಿ ಮಹಿಳಾ ನೌಕರರು ನಿರಂತರವಾಗಿ ಹೋರಾಡುತ್ತಿದ್ದಾರೆ. ಭವಿಷ್ಯ ನಿಧಿ (ಪಿ.ಎಫ್) ಆಪದ್ಧನಕ್ಕೆ ಸರ್ಕಾರ ಕೈಯಿಕ್ಕಿದಾಗ ಉಕ್ಕಿ ಹರಿದ ಗಾರ್ಮೆಂಟ್ಸ್ ಮಹಿಳೆಯರ ಆಕ್ರೋಶ ಈ ದೇಶದ ಕಾರ್ಮಿಕ ಚಳವಳಿಯ ಉಜ್ವಲ ಅಧ್ಯಾಯ. ಇಪ್ಪತ್ತು ವರ್ಷಗಳ ಕಾಲ ಹೋರಾಡಿ ಉದ್ಯೋಗ ಕಾಯಂ ಮಾಡಿಕೊಂಡ ಪೌರ ಕಾರ್ಮಿಕ ಮಹಿಳೆಯರು, ಹತ್ತು ದಿನಗಳು ಬೀದಿಯಲ್ಲಿ ಹೋರಾಡಿದ ಅಂಗನವಾಡಿ ಕಾರ್ಯಕರ್ತೆಯರು, ಡಿಸೆಂಬರ್ ಚಳಿಯಲ್ಲೂ ಆಶಾ ಕಾರ್ಯಕರ್ತೆಯರು ನಡೆಸಿದ ನಾಲ್ಕು ದಿನಗಳ ಹೋರಾಟ – ಇವೆಲ್ಲವೂ ಮಹಿಳಾ ಕಾರ್ಮಿಕರ ಹೋರಾಟದ ಚೈತನ್ಯಕ್ಕೆ ಸಾಕ್ಷಿ.

ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ನಾಲ್ಕು ಸಂಹಿತೆಗಳಾಗಿ ಜಾರಿಗೊಳಿಸುವ ಪ್ರಯತ್ನದ ವಿರುದ್ಧ ಮಹಿಳಾ ಕಾರ್ಮಿಕರು ಪ್ರಸ್ತುತ ಧ್ವನಿ ಎತ್ತಿರುವುದು, ಒಗ್ಗೂಡಿರುವುದು ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇಂತಹ ನಡೆಗಳು ಕಾರ್ಮಿಕ ಸಂಘಟನೆಗಳ ಚಳವಳಿಗೆ ಹೊಸದಿಕ್ಕು ನೀಡಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.