1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತವು ಸ್ವತಂತ್ರ ರಾಷ್ಟ್ರವಾಯಿತು. ಅದರ ಅಂತವಾಗಿ ನಾವು 2025ರ ಆಗಸ್ಟ್ 15ರಂದು – ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ.

ಇದು ದೇಶದ ಅತಿ ದೊಡ್ಡ ಹಬ್ಬ. ನಮ್ಮ ಮನೆ ದೇವರು, ಕುಲ ದೇವರು, ಇಷ್ಟ ದೇವರು ಹಾಗೇ ಗ್ರಾಮ ದೇವರಿಗಿಂತಲೂ ಭಾರತ ಮಾತೆಯೇ ಮೊದಲ ದೇವರು. ಹಾಗಾಗಿ, ನನ್ನೆಲ್ಲಾ ದೇಶಪ್ರೇಮಿ ನಾಗರಿಕರಲ್ಲಿ ನನ್ನದೊಂದು ಮನವಿ, ನಾವೆಲ್ಲರೂ ಸೇರಿ ಸ್ವತಂತ್ರ ಭಾರತದ ಸ್ವಾತಂತ್ರ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸೊಣ.

ನಮ್ಮ ರಾಷ್ಟ್ರ ಧ್ವಜವು ಕೇವಲ ಗಾಳಿಯಿಂದಾಗಿ ಬಾನೆತ್ತರಕ್ಕೆ ಹಾರಾಡುತ್ತಿಲ್ಲ. ಈ ದೇಶದ ಸೈನಿಕರು ಮತ್ತು ಹೋರಾಟಗಾರರ ತ್ಯಾಗ, ಬಲಿತಾನದ ಫಲವಾಗಿ ಹಾರಾಡುತ್ತಿದೆ. ಹಾಗಾಗಿ, ಸ್ವದೇಶಿ ವಸ್ತುಗಳನ್ನೇ ಬಳಸಿ, ಪ್ಲಾಸ್ಟಿಕ್ ಧ್ವಜವನ್ನು ಬಳಸಬೇಡಿ ಖಾದಿ ಧ್ವಜವನ್ನೇ ಬಳಸಿ. ಧ್ವಜವನ್ನು ಖಾದಿಯಲ್ಲಿ ತಯಾರಿಸುವುದು ದೇಶಭಕ್ತಿಯ ಪ್ರತೀಕ. ಖಾದಿ ಧ್ವಜ ಹಾರಿಸುವುದರಿಂದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ಖಾದಿಯು ಭಾರತದ ಗ್ರಾಮೀಣ ಕೈಗಾರಿಕೆಗೆ ಉದಾಹರಣೆಯಾಗಿದೆ. ಇದನ್ನು ದೇಶದ ಗ್ರಾಮೀಣ ಕಾರ್ಮಿಕರು ಹಸ್ತಚಾಲಿತ ಯಂತ್ರಗಳಿಂದ ತಯಾರಿಸುತ್ತಾರೆ. ಖಾದಿ ಧ್ವಜ ಬಳಸುವುದರಿಂದ ಸ್ಥಳೀಯ ಉದ್ಯಮ ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ಒದಗಿಸಿದಂತಾಗುತ್ತದೆ.
.Independence Day: ದೇಶದಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ.
ದೇಶದ ಧ್ವಜ ತಯಾರಿಕೆ ಮತ್ತು ಬಳಕೆ ಕುರಿತು ಇರುವ ನಿಯಮಗಳ ಪ್ರಕಾರ, ಧ್ವಜವನ್ನು ಕೇವಲ ಖಾದಿಯಿಂದಲೇ ತಯಾರಿಸಬೇಕು. ಹಾಗೆಯೇ, ಅದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ಗೆ ಮಾನದಂಡಗಳಿಗೆ ಅನುಗುಣವಾಗಿರಬೇಕು. ಪ್ಲಾಸ್ಟಿಕ್ನಿಂದ ಧ್ವಜಗಳನ್ನು ತಯಾರಿಸುವುದು ಈ ನಿಯಮಕ್ಕೆ ವಿರುದ್ಧವಾಗಿದೆ.

ಖಾದಿ ನೈಸರ್ಗಿಕ ಬಟ್ಟೆಯಾಗಿದ್ದು, ಹಸ್ತಚಾಲಿನ ಯಂತ್ರಗಳಿಂದ ನೇಯಲಾಗುತ್ತದೆ. ಯಾವುದೇ ಮಾಲಿನ್ಯವಿಲ್ಲ. ಪರಿಸರಕ್ಕೆ ಹಾನಿಕಾರಕವೂ ಅಲ್ಲ. ಖಾದಿಯಲ್ಲಿ ತಯಾರಾಗುವುದೇ ಧ್ವಜದ ಶ್ರೇಷ್ಠತೆ ಮತ್ತು ಅದರ ಉದ್ದೇಶವನ್ನು ಬಿಂಬಿಸುತ್ತದೆ. ಪ್ಲಾಸ್ಟಿಕ್ ಧ್ವಜಗಳನ್ನು ಉಪಯೋಗಿಸಿ ರಸ್ತೆಗಳಲ್ಲಿ, ಕೊಳಕು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಖಾದಿ ಧ್ವಜವನ್ನು ಗೌರವಿಂದ ಕಾಣಬೇಕು.

ಸ್ವತಂತ್ರ ಭಾರತದ ದೇಶಪ್ರೇಮಿ ನಾಗರಿಕ ಬಂಧುಗಳೇ, 'ನನ್ನ ದೇಶ ನನ್ನ ಹೆಮ್ಮೆ' ಎಂಬ ವಾಕ್ಯದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದಂತೆ ಆಚರಿಸಿ, ದೇಶ ಪ್ರೇಮೆ ಮೆರೆಯಿರಿ.

ಲೇಖಕರು: ನಿವೃತ್ತ ಸೇನಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.