ಒಂದು ಯುದ್ಧ ನಡೆಯುತ್ತಿರುವಾಗ, ಯುದ್ಧ ನಿರತವಾದ ದೇಶವೊಂದು ಶತ್ರು ಸೈನಿಕರ ಮೇಲೆ ದಾಳಿ ನಡೆಸುವ ಬದಲು, ಜನರ ಜೀವನಕ್ಕೆ ಅವಶ್ಯಕ, ಅನಿವಾರ್ಯವಾದ ಮೂಲಭೂತ ವ್ಯವಸ್ಥೆಗಳ ಮೇಲೆ ದಾಳಿ ನಡೆಸಲು ಹೊರಟರೆ ಏನಾಗುತ್ತದೆ? ಇರಾನ್ - ಅಮೆರಿಕ ಸಮರ ದಿನೇ ದಿನೇ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈಗ ಅಂತಹದ್ದೇ ಬೆಳವಣಿಗೆ ನಡೆಯುತ್ತಿದೆ.

ಬಾಂಬ್ಗಳು ಮತ್ತು ಕ್ಷಿಪಣಿಗಳು ಅತ್ಯಂತ ಅಪಾಯಕಾರಿ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಬಹಳಷ್ಟು ಜನಸಾಮಾನ್ಯರಿಗೆ ತಿಳಿದಿರದ ವಿಚಾರವೆಂದರೆ, ಆಧುನಿಕ ಯುದ್ಧಗಳು ಈಗ ಕೇವಲ ಯುದ್ಧಭೂಮಿಯಲ್ಲಿ ಮಾತ್ರ ನಡೆಯುತ್ತಿಲ್ಲ. ಇಂದಿನ ಯುದ್ಧದಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತ, ಬ್ಯಾಂಕ್ಗಳ ಕಾರ್ಯಾಚರಣಾ ಸ್ಥಗಿತ, ವಿಮಾನ ನಿಲ್ದಾಣಗಳ ವ್ಯವಸ್ಥೆಯನ್ನು ಹಾಳುಗಡೆವುವಂತಹ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇರಾನ್ ಯುದ್ಧವೂ ಈಗ ಬಹುತೇಕ ಅದೇ ದಿಕ್ಕಿನತ್ತ ಸಾಗುತ್ತಿರುವಂತಿದೆ.

ಈ ಬೆಳವಣಿಗೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳೋಣ. ಅಮೆರಿಕ ಮತ್ತು ಇಸ್ರೇಲ್ಗಳು ಇರಾನ್ ಮೇಲೆ ಭಾರೀ ವಾಯು ದಾಳಿಗಳನ್ನು ನಡೆಸಿ, ಮೊದಲ ಸುತ್ತಿನ ದಾಳಿಯಲ್ಲೇ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಹತ್ಯೆ ನಡೆಸಿತು. ಇದರ ಬೆನ್ನಲ್ಲೇ ಇರಾನ್ ತೀವ್ರವಾಗಿ ಪ್ರತಿದಾಳಿ ಆರಂಭಿಸಿತು. ಇರಾನ್ ಒಂಬತ್ತು ದೇಶಗಳ ಮೇಲೆ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಪ್ರಯೋಗಿಸಿತು. ಅಮೆರಿಕನ್ ಯೋಧರು ಇರಾನ್ ದಾಳಿಗೆ ಬಲಿಯಾದರೆ, ಬ್ರಿಟಿಷ್ ಯೋಧರು ಸ್ವಲ್ಪದರಲ್ಲೇ ಪಾರಾದರು. ಇನ್ನು ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಸಾಮಾನ್ಯ ಜನರೂ ಸಾವಿಗೀಡಾದರು. ಇರಾನ್ ಸೈಪ್ರಸ್ನಲ್ಲಿರುವ ಬ್ರಿಟಿಷ್ ವಾಯುನೆಲೆಯ ಮೇಲೂ ದಾಳಿ ನಡೆಸಿತು. ಈಗಾಗಲೇ ಯುದ್ಧ ಹಲವಾರು ಗಡಿಗಳನ್ನು ದಾಟಿ ಮುಂದುವರಿದಿದೆ.

ಆದರೆ, ಇಲ್ಲೊಂದು ನಿಜಕ್ಕೂ ಭೀತಿದಾಯಕವಾದ ಅಂಶವಿದೆ. ಇರಾನ್ ಈಗ ಇನ್ನಷ್ಟು ಅಪಾಯಕಾರಿ ಹೆಜ್ಜೆ ಇಡುತ್ತಾ, ನೀರಿನ ನಿರ್ಲವಣೀಕರಣ (ಡಿಸ್ಯಾಲಿನೇಶನ್) ಘಟಕಗಳ ಮೇಲೆ ದಾಳಿ ನಡೆಸಲು ಸಿದ್ಧವಾಗುತ್ತಿದೆ. ಈ ಡಿಸ್ಯಾಲಿನೇಶನ್ ಘಟಕಗಳು ಎಂದರೇನು? ಸರಳವಾಗಿ ಹೇಳುವುದಾದರೆ, ಇದು ಸಮುದ್ರದ ಉಪ್ಪುನೀರನ್ನು ತೆಗೆದುಕೊಂಡು, ಅದನ್ನು ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸುತ್ತದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶುದ್ಧ ನೀರಿನ ಲಭ್ಯತೆಯ ಪ್ರಮಾಣ ಅತ್ಯಂತ ಕಡಿಮೆಯಿದೆ. ಹೀಗಿರುವಾಗ ಇಂತಹ ಘಟಕಗಳು ಅಲ್ಲಿ ಜೀವನಾಧಾರವಾಗಿವೆ. ಈ ಘಟಕಗಳ ಹೊರತಾಗಿ, ಲಕ್ಷಾಂತರ ಜನರಿಗೆ ಕುಡಿಯಲು ಹನಿ ನೀರೂ ಇಲ್ಲದಂತಹ ಪರಿಸ್ಥಿತಿ ಎದುರಾಗಲಿದೆ.

ಈ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂದು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಗಮನಿಸೋಣ. ಕುವೈತ್ ತನ್ನ ಒಟ್ಟು ಕುಡಿಯುವ ನೀರಿನ ಶೇ 90ರಷ್ಟು ಪ್ರಮಾಣವನ್ನು, ಅಂದರೆ ಬಹುತೇಕ ಎಲ್ಲವನ್ನೂ ನಿರ್ಲವಣೀಕರಣ ಪ್ರಕ್ರಿಯೆಯ ಮೂಲಕವೇ ಸಂಪಾದಿಸುತ್ತದೆ. ಒಮಾನ್ ಸಹ 86% ಕುಡಿಯುವ ನೀರನ್ನು ನಿರ್ಲವಣೀಕರಣ ಪ್ರಕ್ರಿಯೆಯಿಂದಲೇ ಪಡೆಯುತ್ತದೆ. ಸೌದಿ ಅರೇಬಿಯಾದಂತಹ ಬೃಹತ್ ದೇಶವೂ 70% ನೀರನ್ನು ಈ ಮೂಲಕ ಪಡೆದರೆ, ಯುಎಇಯ 42% ನೀರಿಗೆ ನಿರ್ಲವಣೀಕರಣವೇ ಆಧಾರ. ಇರಾನ್ ಇಂತಹ ಘಟಕಗಳ ಮೇಲೆ ಕ್ಷಿಪಣಿ ಪ್ರಯೋಗ ಮಾಡಿದರೆ ಏನಾಗಬಹುದು ಊಹಿಸಿ. ಸಂಪೂರ್ಣ ನಗರಗಳೇ ಕೆಲವು ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸಲಿವೆ. 2009ರಲ್ಲಿ ಸೋರಿಕೆಯಾದ ಅಮೆರಿಕದ ರಹಸ್ಯ ರಾಜತಾಂತ್ರಿಕ ಸಂದೇಶಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿನ ಒಂದು ಪ್ರಮುಖ ನಿರ್ಲವಣೀಕರಣ ಘಟಕಕ್ಕೆ ಹಾನಿಯಾದರೂ, ಕೇವಲ ಒಂದು ವಾರದ ಒಳಗಾಗಿ ರಾಜಧಾನಿ ರಿಯಾದ್ ನಗರದಿಂದ ಜನರನ್ನು ಸ್ಥಳಾಂತರಗೊಳಿಸುವುದು ಅನಿವಾರ್ಯವಾಗಲಿದೆ. ಈ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿದೆ. ಅದರೊಡನೆ, ಈ ನಿರ್ಲವಣೀಕರಣ ಘಟಕಗಳು ದಾಳಿಗೆ ಸುಲಭದ ಗುರಿಗಳೂ ಆಗಿವೆ. ಈ ಘಟಕಗಳೂ ಬಹಳ ಬೃಹತ್ತಾಗಿದ್ದು, ಅವುಗಳು ಬಯಲಿನಲ್ಲಿ ಮುಕ್ತವಾಗಿರುತ್ತವೆ. ಅವುಗಳನ್ನು ಬಚ್ಚಿಡಲಾಗಲಿ, ಬೇರೆಡೆಗೆ ಸ್ಥಳಾಂತರಿಸಲಾಗಲಿ ಸಾಧ್ಯವಿಲ್ಲ. ನಿಖರವಾಗಿ ಗುರಿಯಿಟ್ಟು ಅಪ್ಪಳಿಸುವ ಕೆಲವೇ ಕ್ಷಿಪಣಿಗಳು ಈ ಘಟಕಗಳಿಗೆ ದಾಳಿ ಮಾಡಿದರೆ, ಆಗ ಲಕ್ಷಾಂತರ ಕುಟುಂಬಗಳು ನೀರಿಲ್ಲದೆ ಪರದಾಡುವಂತಾಗಲಿದೆ.

ಹಾಗೆಂದು ಇರಾನ್ ನೀರನ್ನು ಮಾತ್ರ ಆಯುಧವಾಗಿ ಬಳಸಲಿದೆ ಎನ್ನಲು ಸಾಧ್ಯವಿಲ್ಲ. ಬಹಳಷ್ಟು ಜನರು ಊಹಿಸಲೂ ಸಾಧ್ಯವಿಲ್ಲದ ಇನ್ನೊಂದು ರೀತಿಯ ದಾಳಿಯೂ ಇದೆ. ಅದುವೇ ಸೈಬರ್ ದಾಳಿಗಳು. ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲವೂ ಕಂಪ್ಯೂಟರ್ ಮೂಲಕವೇ ಕಾರ್ಯಾಚರಿಸುತ್ತವೆ. ಬ್ಯಾಂಕಿಂಗ್ ಸೇವೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಪೂರೈಕೆ, ಸರ್ಕಾರಿ ಕಚೇರಿಗಳು, ಎಲ್ಲವೂ ಕಂಪ್ಯೂಟರ್ ವ್ಯವಸ್ಥೆಗಳು ಮತ್ತು ಅಂತರ್ಜಾಲದ ಮೇಲೆ ಅವಲಂಬಿತವಾಗಿವೆ. ಸೈಬರ್ ದಾಳಿ ಎಂದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿ ಕುಳಿತಿರುವ ವ್ಯಕ್ತಿ ಒಂದು ಗುಂಡನ್ನೂ ಹಾರಿಸದೆ, ಇವೆಲ್ಲ ವ್ಯವಸ್ಥೆಗಳನ್ನೂ ನಾಶಪಡಿಸಬಲ್ಲ.

ಇರಾನ್ ಹಿಂದೆಯೂ ಇಂತಹ ಕೆಲಸ ಮಾಡಿತ್ತು. ಅದು 2012ರಲ್ಲಿ ಸೌದಿ ಅರೇಬಿಯಾದ ತೈಲ ದೈತ್ಯ ಸಂಸ್ಥೆಯಾದ ಅರಾಮ್ಕೊ ಮತ್ತು ಕತಾರ್ನ ರಾಸ್ಗ್ಯಾಸ್ ಮಳೆ ಇಂತಹ ಬೃಹತ್ ಸೈಬರ್ ದಾಳಿ ನಡೆಸಿತ್ತು. ಇಂತಹ ದಾಳಿಗಳು ಅವುಗಳ ಕಂಪ್ಯೂಟರ್ ನೆಟ್ವರ್ಕ್ಗಳಿಗೆ ಗಂಭೀರ ಹಾನಿ ಉಂಟುಮಾಡಿದವು. ಇರಾನಿನ ರೆವಲ್ಯೂಷನರಿ ಗಾರ್ಡ್ಸ್ಗೆ ಸಂಬಂಧಿಸಿದ ಗುಂಪುಗಳಂತೂ ಈಗಲೂ ಇಂತಹ ಸೈಬರ್ ದಾಳಿ ಪುನರಾವರ್ತಿಸುವ ಬೆದರಿಕೆ ಒಡ್ಡಿವೆ. ಗೂಗಲ್ನ ಥ್ರೆಟ್ ಇಂಟಲಿಜೆನ್ಸ್ ವಿಭಾಗದಲ್ಲಿ ಕಾರ್ಯಾಚರಿಸುವ ಜಾನ್ ಹಲ್ಟ್ಕಿಸ್ಟ್ ಎಂಬಾತ ಈ ಗುಂಪುಗಳು ಸೈಬರ್ ದಾಳಿಗೆ ಸಿದ್ಧವಾಗುತ್ತಿರುವುದನ್ನು ಖಾತ್ರಿಪಡಿಸಿದ್ದಾರೆ.

ಒಂದು ಸಾಮಾನ್ಯ ಮಾದರಿಯ ಸೈಬರ್ ದಾಳಿ ಎಂದರೆ, 'ಡಿನಯಲ್ ಆಫ್ ಸರ್ವಿಸ್' ದಾಳಿ. ಒಂದು ಬಾರಿಗೆ ಕೇವಲ 100 ಕಾರ್ಗಳನ್ನು ಮಾತ್ರವೇ ನಿರ್ವಹಿಸಬಲ್ಲ ಕಿರಿದಾದ ರಸ್ತೆಯೊಂದನ್ನು ಊಹಿಸಿಕೊಳ್ಳಿ. ಈಗ, ಯಾರಾದರೂ ಅಲ್ಲಿಗೆ ಏಕಕಾಲದಲ್ಲಿ 10,000 ಕಾರ್ಗಳನ್ನು ಕಳುಹಿಸಿದರೆ ಏನಾಗಬಹುದು? ಆ ಸಂಪೂರ್ಣ ರಸ್ತೆಯೇ ಜಾಮ್ ಆಗಿ, ಯಾರಿಗೂ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು. ಹ್ಯಾಕರ್ಗಳು ಕಂಪ್ಯೂಟರ್ ಸಿಸ್ಟಮ್ಗಳು ಮತ್ತು ವೆಬ್ಸೈಟ್ಗಳಿಗೆ ಇಂತಹ ಪರಿಸ್ಥಿತಿಯನ್ನೇ ನಿರ್ಮಿಸುತ್ತಾರೆ. ಅವರು ಅಸಂಖ್ಯಾತ ನಕಲಿ ಮನವಿಗಳನ್ನು ಕಳುಹಿಸಿ, ಸಂಪೂರ್ಣ ಸಿಸ್ಟಮ್ ಕುಸಿದು ಹೋಗುವಂತೆ ಮಾಡುತ್ತಾರೆ. ಬ್ಯಾಂಕುಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ವಿಮಾನ ನಿಲ್ದಾಣಗಳ ಪರದೆಗಳು ಖಾಲಿ ಖಾಲಿಯಾಗುತ್ತವೆ. ಪವರ್ ಗ್ರಿಡ್ಗಳು ವಿಫಲವಾಗುತ್ತವೆ. ಇವೆಲ್ಲವೂ ಒಂದೇ ಒಂದು ಬಾಂಬ್ ಪ್ರಯೋಗಿಸದೆಯೇ ಸಾಧ್ಯವಾಗುತ್ತದೆ.

ಇಂತಹ ಸಾಧ್ಯತೆಗಳೇ ಈ ಬಾರಿಯ ಯುದ್ಧವನ್ನು ಹಿಂದೆ ನಾವು ಕಂಡಿರುವ ಎಲ್ಲ ಯುದ್ಧಗಳಿಂದ ಭಿನ್ನವಾಗಿಸುತ್ತವೆ. ಈಗ ಯುದ್ಧ ಎನ್ನುವುದು ಕೇವಲ ಸೇನೆಗಳು ಮತ್ತು ಟ್ಯಾಂಕ್ಗಳಿಗೆ ಸೀಮಿತವಾಗಿಲ್ಲ. ಇದು ಜನಜೀವನ ಸಹಜವಾಗಿರುವಂತೆ ಮಾಡುವ ಮೂಲಭೂತ ವ್ಯವಸ್ಥೆಗಳಾದ ನೀರು, ವಿದ್ಯುತ್, ಅಂತರ್ಜಾಲ, ಬ್ಯಾಂಕಿಂಗ್, ಇತ್ಯಾದಿಗಳನ್ನು ಸ್ಥಗಿತಗೊಳಿಸುತ್ತದೆ. ದುಬೈ, ರಿಯಾದ್, ಅಥವಾ ದೋಹಾಗಳಲ್ಲಿ ಕುಳಿತಿರುವ ಸಾಮಾನ್ಯ ಜನರಿಗೆ ಈ ಯುದ್ಧದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ, ಮನೆಯ ನೀರಿನ ನಳ್ಳಿ ಖಾಲಿಯಾಗಬಹುದು, ಅವರ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಬಹುದು.

ಮಧ್ಯ ಪೂರ್ವದಲ್ಲಿ ನಡೆದ ಯುದ್ಧಗಳು ಬಹಳಷ್ಟು ದೇಶಗಳನ್ನು ಯುದ್ಧಕ್ಕೆ ಎಳೆದಿವೆ. ಆದರೆ, ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ದಿಕ್ಕುಗಳಲ್ಲಿ, ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ, ಎಲ್ಲ ಗಡಿಗಳಾಚೆಗೆ ಕ್ಷಿಪಣಿಗಳು ಹಾರಾಡಿವೆ. ಒಂದುವೇಳೆ ಇರಾನ್ ಏನಾದರೂ ನೀರಿನ ಘಟಕಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿದರೆ, ಅದರಿಂದ ಬಾಧೆಗೊಳಗಾಗುವುದು ಸೈನಿಕರಲ್ಲ. ಇದರ ಪರಿಣಾಮಕ್ಕೆ ತುತ್ತಾಗುವುದು ಸಾಧಾರಣ ಕುಟುಂಬಗಳೇ ಆಗಿರುತ್ತವೆ.

ಇದು ಆಧುನಿಕ ಯುದ್ಧದ ಕಹಿ ವಾಸ್ತವ. ಯುದ್ಧ ಭೂಮಿ ಇಂದು ದೂರದಲ್ಲೆಲ್ಲೋ ಇಲ್ಲ. ಇಂದು ನಮ್ಮ ಮನೆಗಳೂ ಯುದ್ಧ ಭೂಮಿಯ ಭಾಗಗಳಾಗಿವೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.