ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಿಲಿಯನೇರ್ ಬ್ರ್ಯಾಂಡ್‌!

Published 29 ಮಾರ್ಚ್ 2024, 23:15 IST
Last Updated 29 ಮಾರ್ಚ್ 2024, 23:15 IST
ಅಕ್ಷರ ಗಾತ್ರ

‘ಲೇಯ್, ಮುಂಬೈ ಈಗ ಪ್ರಪಂಚದಲ್ಲಿ ಹೆಚ್ಚು ಬಿಲಿಯನೇರ್‌ಗಳಿರುವ ನಗರಗಳಲ್ಲಿ ಒಂದಂತೆ. ಬೀಜಿಂಗ್‌ಗೂ ಸೈಡ್ ಹೊಡ್ದಿದೆಯಂತೆ! ನೆಕ್ಸ್ಟ್ ನಮ್ ಬೆಂಗಳೂರೇ!’ ಎಂದ ಗುದ್ಲಿಂಗ.

‘ಅದೆಂಗಾಯ್ತದೆ? ಆರ್ಡಿನರಿ ಬೀರುಬಿಲ್ಲು ಎತ್ತಕ್ಕೂ ಸಾಯೋ ನಮ್ಮಂತೋರು ಇನ್ನೂ ಇಲ್ಲಿಲ್ವಾ?’ ಎಂದ ಮಾಲಿಂಗ.

‘ಅಂತ ಗುರಿ, ಕನಸು ಮಡಿಕ್ಕಂಡಿದ್ರೆ ಮಾತ್ರ ಆಯ್ತದೆ. ಅಂದ್ಹಾಗೆ ಬಿಲಿಯನೇರ್ ಆಗಕ್ಕೆ ಏನ್ ಮಾಡ್ಬೇಕು?’ ಕೇಳಿದ ಕಲ್ಲೇಶಿ.

‘ಕಂಪನಿ ಕಟ್ಟೋದು, ಷೇರ್ ಮಾರ್ಕೆಟ್ಟಲ್ಲಿ ದುಡ್ಡು ಹಾಕೋದು, ಇಂಗೆ ಏನಾರಾ ದೊಡ್ ದೊಡ್ ಯವಾರ ಮಾಡ್ಬೇಕು’.

‘ಊ, ಕಂಪನಿ ಕಟ್ಟಿ ಷೇರು ಆಡೋದ್ರ ಜೊತೆಗೆ ಆನ್‌ಲೈನ್‌ ರಮ್ಮಿ, ಲಾಟರಿ, ಬಾಜಿ ಕಟ್ಟೋದು ಎಲ್ಲಾ ಮಾಡ್ಬೇಕಾಯ್ತದೆ’.

‘ಹೌದೌದು, ಇಂಗಾದ್ರೇ ದೊಡ್ ಹೆಸರು ಬರೋದು. ಅಂಗೆ ದೊಡ್ ಹೆಸರು ಬಂದ್ರೆ ಒಂದು ನಾಕು ಬ್ಯಾಂಕಿಂದ ಕೋಟಿ ಕೋಟಿ ಸಾಲ ಎತ್ತಿ ಫಾರಿನ್‌ಗೆ ಓದ್ರೆ ಬಿಲಿಯನೇರ್ ಆಗ್ಬಹುದು’.

‘ಅದು ಪರದೇಶದ ಲೆಕ್ಕಕ್ಕೆ ಸೇರ್ಕತದೆ. ರಾಜಕೀಯಕ್ಕಿಳಿದು ನಾಡು, ದೇಶ ಕಟ್ಟೋ ಕಂಟ್ರಾಕ್ಟ್ ತಗೊಂಡ್ರೆ ಇಲ್ಲೇ ಬಿಲಿಯನೇರ್ ಆಗ್ಬಹುದು’.

‘ಆದ್ರೆ ಅದ್ನೆಲ್ಲಾ ಲೆಕ್ಕ ತೋರ್ಸಕ್ಕಾಗಕಿಲ್ಲ, ಎಷ್ಟೋ ಜನ ಮಿಲಿಯನೇರ್ ಆದ್ರೂ ಬಿಪಿಎಲ್ ಒಳಗೇ ಇದೀವಿ ಅಂತ ಹೇಳ್ಕಳಲ್ವಾ? ಇದೂ ಅಂಗೇಯ’.

‘ಅಂಗಾರೆ ಬಿಲಿಯನೇರ್ ಆಗಾದು ಎಂಗೆ? ಕಾಮನ್‌ಮ್ಯಾನು ಬಿಲಿಯನೇರ್ ಆಗಕ್ಕೇ ಆಗಲ್ವ?’

‘ಹದಿನಾರಾಣೆ ಆನೆಸ್ಟಿ ಅಂದ್ರೆ ಟ್ಯಾಕ್ಸ್ ಕಟ್ಕಂಡು ಸರ್ಕಾರದ ಪೆನ್ಷನ್ನಲ್ಲೇ ಇರ್ಬೇಕಾಯ್ತದೆ.  ಆದ್ರೂ ಒಂದು ದಾರಿ ಐತೆ! ‘ಹೌ ಟು ಬಿಕಮ್ ಎ ಬಿಲಿಯನೇರ್?’ ಅಂತ ಇಂಗ್ಲಿಷಲ್ಲಿ ಒಂದು ಪುಸ್ತಕ ಬರುದ್ರೆ ಲಕ್ ಒದ್ಕಂಡು ಬಂದ್ರೂ ಬರ್ಬಹುದು’.

‘ಅಂಗೆ ಇಂಗ್ಲೀಷಲ್ಲಿ ಬರೀಬೇಕು ಅಂದ್ರೆ ನಾವೂ ಶೇಕ್‍ಸ್ಪಿಯರ್ ಆಗ್ಬೇಕಲ್ಲಾ! ಅದಕ್ಕೆ ಏನ್ಮಾಡೋದು?

‘ತುಂಬಾ  ಸುಲಭ, ಈ ಸ್ಪಿಯರ್ ಮೇಲೆ ಶೇಕ್ ಆಗ್ಬೇಕು ಅಂದ್ರೆ ಟೈಟಾಗುವಷ್ಟು ಬಿಯರ್ ಎತ್ತಬೇಕು’ ಎಂದ ಪರ್ಮೇಶಿ. ಎಲ್ಲಾ ‘ಸೂಪರ್ ಐಡಿಯಾ’ ಎಂದು ಕೂಗಿ ‘ಚಿಯರ್ಸ್’ ಎಂದು ಗ್ಲಾಸ್ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT